Karnataka NewsBangalore News

ಇಂಥವರಿಗೆ ರೇಷನ್ ಕಾರ್ಡ್ ಇದ್ರೂ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಸಿಗೋಲ್ಲ

ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆ (guarantee schemes) ಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿರುವ ದಾಖಲೆ ಆಗಿದೆ. ಅದರಲ್ಲೂ ಬಿಪಿಎಲ್ ಕಾರ್ಡ್ BPL card) ಇರುವವರಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆ.

ಆದರೆ ಈಗ ಸರ್ಕಾರ ಘೋಷಿಸಿರುವ ಶಾಕಿಂಗ್ ಸುದ್ದಿ ಏನೆಂದರೆ, ಬಿಪಿಎಲ್ ಕಾರ್ಡ್ (BPL card) ಹೊಂದಿದ್ರು ಕೂಡ ಸರ್ಕಾರದ ಈ ಯೋಜನೆಯ ಪ್ರಯೋಜನ ಇನ್ನು ಮುಂದೆ ನಿಮಗೆ ಸಿಗುವುದಿಲ್ಲ.

Order to cancel the BPL ration card of such people

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣವಾಗಲಿ ಅನ್ನಭಾಗ್ಯ (AnnaBhagya scheme) ಯೋಜನೆಯ ಹಣವಾಗಲಿ ನಿಮ್ಮ ಖಾತೆಗೆ ಬರುವುದಿಲ್ಲ ಯಾಕೆ ಗೊತ್ತಾ?

ಗ್ರಾಮ ಒನ್ ಪ್ರಾಂಚೈಸಿ ತೆರೆಯಲು ಆನ್ಲೈನ್ ಅರ್ಜಿ ಸಲ್ಲಿಸಿ! ಈ ದಾಖಲೆ ಇದ್ರೆ ಸಾಕು

ಈ ಕೆಲಸಗಳು ಕಡ್ಡಾಯ!

ಕೆ ವೈ ಸಿ ಅಪ್ಡೇಟ್ (KYC update), ಆಧಾರ್ ಸೀಡಿಂಗ್ (Aadhaar seeding)
ಎನ್ ಪಿಸಿಐ ಮ್ಯಾಪಿಂಗ್ (NPCI mapping) ಹಾಗೂ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಈ ಪ್ರಮುಖ ಕೆಲಸಗಳು ಕಡ್ಡಾಯವಾಗಿದ್ದು, ಈ ನಿಯಮಗಳನ್ನು ಅನುಸರಿಸದೇ ಇರುವವರಿಗೆ ಗೃಹಲಕ್ಷ್ಮಿ ಹಣ ಅಥವಾ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುವುದಿಲ್ಲ.

ಆದರೆ ಸಾಕಷ್ಟು ಜನ ಈ ಎಲ್ಲಾ ಕೆಲಸಗಳನ್ನು ಮಾಡಿಸಿದ್ದೇವೆ ಆದರೂ ಹಣ ಮಾತ್ರ ಬರುತ್ತಿಲ್ಲ ಯಾಕೆ ಎನ್ನುವ ಗೊಂದಲದಲ್ಲಿ ಇದ್ದಾರೆ. ಇದಕ್ಕೂ ಕೂಡ ಸರ್ಕಾರ ಸೂಕ್ತ ಕಾರಣವನ್ನು ನೀಡಿದೆ. ಸಾಕಷ್ಟು ಜನರ ಬ್ಯಾಂಕ್ ಖಾತೆ ಸಕ್ರಿಯವಾಗಿದೆ, ಇದರ ಜೊತೆಗೆ ಎನ್‌ಪಿಸಿಐ ಮ್ಯಾಪಿಂಗ್ ಹಾಗೂ ಈಕೆ ವೈ ಸಿ ಅಪ್ಡೇಟ್ ಕೂಡ ಆಗಿದೆ ಆದ್ರೂ ಹಣ ಬರುತ್ತಿಲ್ಲ ಯಾಕೆ ಎನ್ನುವ ಗೊಂದಲಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಜಮಾ ಆಗಲಿದೆ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

BPL Ration Card6 ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇರುವವರಿಗೆ ಇಲ್ಲ ಯಾವುದೇ ಭಾಗ್ಯ!

ಹೌದು, ಕೆಲವು ಕುಟುಂಬಗಳು ಬಿಪಿಎಲ್ ಕಾರ್ಡ್ ಇದ್ರೂ ಕೂಡ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ ಖಾತೆ ಆಕ್ಟಿವ್ ಇರಬಹುದು. ಆದರೆ ಕಳೆದ ಆರು ತಿಂಗಳಿನಿಂದ ಬಯೋಮೆಟ್ರಿಕ್ (biometric) ಮಾಡಿಸಿಕೊಳ್ಳದೆ ಇರುವವರು ಅಂದರೆ ಕಳೆದ ಆರು ತಿಂಗಳ ಪಡೆದುಕೊಳ್ಳದೆ ಇರುವವರು ಬೇರೆ ಇತರ ಯಾವುದೇ ಬದಲಾವಣೆಗಳನ್ನ ಖಾತೆಯಲ್ಲಿ ಮಾಡಿಕೊಂಡಿದ್ದರು ಕೂಡ ಅವರ ಬಯೋಮೆಟ್ರಿಕ್ ಇಲ್ಲದೆ ಇರುವುದರಿಂದ ಹೆಸರು ರಿಜಿಸ್ಟರ್ ಆಗುವುದಿಲ್ಲ.

ಅಂತಹ ಸಂದರ್ಭದಲ್ಲಿ ಆ ಕುಟುಂಬಗಳಿಗೆ ಸರ್ಕಾರದಿಂದ ಸಿಗುತ್ತಿರುವ ಗ್ಯಾರಂಟಿ ಯೋಜನೆಗಳ ಹಣ ಖಾತೆಗೆ ಡಿಬಿಟಿ ಆಗುವುದಿಲ್ಲ. ಹೀಗಾಗಿ ಸುಮಾರು 3.64 ಕುಟುಂಬಗಳು ಯಾವುದೇ ಗ್ಯಾರೆಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗಲು ಇಲ್ಲ.

ಸರ್ಕಾರಿ ಜಾಗ, ಜಮೀನು ಒತ್ತುವರಿ ತೆರವಿಗೆ ಸರ್ಕಾರದ ಮಾಸ್ಟರ್ ಪ್ಲಾನ್! ಇಲ್ಲಿದೆ ಮಾಹಿತಿ

ಹೀಗಾಗಿ ಮೊದಲು ಸರ್ಕಾರದ ನಿಯಮಗಳನ್ನು ಹಾಗೂ ಮಾನದಂಡಗಳನ್ನು ಅರ್ಥ ಮಾಡಿಕೊಂಡು ಪದೇ ಪ್ರಕಾರ ನೀವು ನಡೆದುಕೊಂಡಾಗ ಮಾತ್ರ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿದೆ. ಇದುವರೆಗೆ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆದುಕೊಳ್ಳದೇ ಇದ್ದರೆ ತಕ್ಷಣ ಆ ಕೆಲಸ ಮಾಡಿ.

ಕನಿಷ್ಠ ಪಕ್ಷ ಮುಂದಿನ ತಿಂಗಳಿನಿಂದ ನೇರವಾಗಿ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು. ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಭಾರದೆ ಇದ್ದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಪಡೆದುಕೊಂಡು ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

Even if they have a ration card, they cannot get Annabhagya and Gruha Lakshmi Yojana money

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories