ಮಹಿಳೆಯರಿಗೆ ಸರ್ಕಾರದಿಂದಲೇ ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂಪಾಯಿ ಸಾಲ; ಅರ್ಜಿ ಸಲ್ಲಿಸಿ

ಮೊಟ್ಟ ಮೊದಲನೇದಾಗಿ ಮಹಿಳೆಯರಿಗೆ ತಾವು ಸ್ವಾವಲಂಬನೆ (women empowerment) ಯಿಂದ ಜೀವನ ನಡೆಸಬೇಕು, ಸ್ವಂತ ಉದ್ಯಮ ಮಾಡಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎನ್ನುವ ಮನಸ್ಸು ಇದ್ದರೆ, ಅದಕ್ಕೆ ಸಹಕರಿಸಲು ಮನೆಯವರೇ ಆಗಬೇಕಾಗಿಲ್ಲ.

ಸರ್ಕಾರ (government) ಆ ಕೆಲಸವನ್ನು ಮಾಡುತ್ತದೆ. ಎಷ್ಟೋ ಬಾರಿ ಹೆಣ್ಣು ಮಕ್ಕಳು ಸ್ವಂತ ಉದ್ಯಮ (own business) ಆರಂಭಿಸಲು ಅವರ ಮನೆಯವರು ಬೆಂಬಲ ನೀಡುವುದಿಲ್ಲ ಅಂತಹ ಸಂದರ್ಭದಲ್ಲಿ ಸರ್ಕಾರ ಬಂಡವಾಳ ಹೂಡಿಕೆಗೆ ಸಹಕರಿಸುವ ಮೂಲಕ ಮಹಿಳೆಯರ ಕನಸನ್ನು ಕೂಡ ನನಸಾಗಿಸುತ್ತಿದೆ. ಇದೇ ಕನಸು ಈಡೇರಿಸುವ ಸಲುವಾಗಿ ಜಾರಿಗೆ ಬಂದಿರುವುದು ಉದ್ಯೋಗಿನಿ ಯೋಜನೆ.

ಹೊಸ ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ಅರ್ಜಿ ಸಲ್ಲಿಕೆಗೂ ಅವಕಾಶ! ಇಲ್ಲಿದೆ ಡೀಟೇಲ್ಸ್

ಏನಿದು ಉದ್ಯೋಗಿನಿ ಯೋಜನಾ? (Udyogini scheme)

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ (KSWDC) ಅಡಿಯಲ್ಲಿ ಉದ್ಯೋಗಿನಿ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಈ ಯೋಜನೆಯಡಿಯಲ್ಲಿ ಮಹಿಳೆಯರು 88ಕ್ಕೂ ಹೆಚ್ಚಿನ ಸ್ವಂತ ಉದ್ಯಮ ಆರಂಭಿಸಲು ಸರ್ಕಾರದಿಂದ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (Loan facility) ಸಿಗುತ್ತದೆ.

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮಹಿಳೆಯರು ಮಾತ್ರವಲ್ಲದೆ ಸಾಮಾನ್ಯ ಮಹಿಳೆಯರು ಕೂಡ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಎಷ್ಟು ಸಿಗುತ್ತೆ ಸಾಲ? (How much loan you can get)

ಎರಡು ಲಕ್ಷ ವಾರ್ಷಿಕ ಆದಾಯ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಒಂದರಿಂದ ಮೂರು ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಹಾಗೂ ಇದಕ್ಕೆ ಸರ್ಕಾರ 50% ನಷ್ಟು ಸಬ್ಸಿಡಿ ಒದಗಿಸುತ್ತದೆ. ಅದೇ ರೀತಿ 1.50 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಸಾಮಾನ್ಯ ಮಹಿಳೆಯರು 3 ಲಕ್ಷ ರೂಪಾಯಿಗಳವರೆಗಿನ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು. ಇಂತಹ ಮಹಿಳೆಯರಿಗೆ ಸರ್ಕಾರದಿಂದ 30% ವರೆಗೆ ಸಬ್ಸಿಡಿ ದೊರೆಯುತ್ತದೆ.

ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣಕ್ಕೆ ಹೊಸ ನಿಯಮ ಘೋಷಿಸಿದ ಸರ್ಕಾರ!

Loan Schemeಸಾಲ ಸೌಲಭ್ಯ ಪಡೆದುಕೊಳ್ಳಲು 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಮಹಿಳೆಯರು ನರ್ಸರಿ ಆರಂಭಿಸಲು, ಬ್ಯೂಟಿ ಪಾರ್ಲರ್, ಗಿಫ್ಟಿಂಗ್ ಸೆಂಟರ್, ಫೋಟೋ ಸ್ಟುಡಿಯೋ, ಮಸಾಲೆ ತಯಾರಿಸುವುದು ಹೇಗೆ 88ಕ್ಕೂ ಹೆಚ್ಚಿನ ಸ್ವಂತ ಉದ್ಯಮ ಮಾಡುವುದಕ್ಕೆ ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ 3 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ಸಿಗುತ್ತದೆ.

ಇಂಥವರಿಗೆ ರೇಷನ್ ಕಾರ್ಡ್ ಇದ್ರೂ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಸಿಗೋಲ್ಲ

ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು!

ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಬ್ಯಾಂಕ ಖಾತೆಯ ವಿವರ
ಪಾಸ್ ಪೋರ್ಟ್ ಅಳತೆಯ ಫೋಟೋ
ವಿಳಾಸದ ಪುರಾವೆ
ಆರಂಭಿಸಲು ಬಯಸುವ ಉದ್ಯಮದ ಬಗ್ಗೆ ಮಾಹಿತಿ.

ಮಹಿಳೆಯರಿಗೆ ಬಂಪರ್ ಕೊಡುಗೆ ಮತ್ತೆ ಹೊಸ 3 ಯೋಜನೆ ಜಾರಿಗೆ ತಂದ ಸರ್ಕಾರ!

ಎಲ್ಲಿ ಅರ್ಜಿ ಸಲ್ಲಿಸಬೇಕು!

ಯಾವುದೇ ಹತ್ತಿರದ ಸೇವಾ ಕೇಂದ್ರಗಳಲ್ಲಿ ಅಥವಾ ಸೈಬರ್ ಸೆಂಟರ್ ಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ!

ಮಹಿಳಾ ಅಭಿವೃದ್ಧಿ ನಿಗಮ.
6ನೇ ಮಹಡಿ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್. 4ನೇ ಬ್ಲಾಕ್, ಜಯನಗರ, ಬೆಂಗಳೂರು-560011
ದೂರವಾಣಿ ಸಂಖ್ಯೆ: 080-26632973
26542307

Women will get an interest-free loan of 3 lakh rupees from this government Scheme

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories