Karnataka NewsBangalore News

ಮಹಿಳೆಯರಿಗೆ ಬಂಪರ್ ಕೊಡುಗೆ ಮತ್ತೆ ಹೊಸ 3 ಯೋಜನೆ ಜಾರಿಗೆ ತಂದ ಸರ್ಕಾರ!

ಈ ಬಾರಿ ವಿಧಾನಸಭಾ ಎಲೆಕ್ಷನ್ ಮುಗಿದ ನಂತರ ಯಾರಿಗೆ ಸರ್ಕಾರದ ಬಗ್ಗೆ ಖುಷಿ ಇದ್ಯೋ ಇಲ್ವೋ ಗೊತ್ತಿಲ್ಲ ಆದರೆ ಮಹಿಳೆಯರು ಮಾತ್ರ ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಉಚಿತ ಬಸ್ ನಲ್ಲಿ ಪ್ರಯಾಣಿಸಬಹುದಾದ ಶಕ್ತಿ ಯೋಜನೆ (Shakti scheme) ಯನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಬದ್ಧವಾಗಿದೆ ಎಂಬುದನ್ನ ಮತ್ತೆ ತೋರಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಮಹಿಳೆಯರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

Under this new scheme of the government, women will get 800 Pension every month

ಗ್ರಾಮ ಒನ್ ಪ್ರಾಂಚೈಸಿ ತೆರೆಯಲು ಆನ್ಲೈನ್ ಅರ್ಜಿ ಸಲ್ಲಿಸಿ! ಈ ದಾಖಲೆ ಇದ್ರೆ ಸಾಕು

ಇದೀಗ ರಾಜ್ಯ ಸರ್ಕಾರ ಹೆಣ್ಣು ಮಕ್ಕಳಿಗೆ ಉಪಯೋಗ ಆಗುವಂತಹ ಮತ್ತೆ ಕೆಲವು ಪ್ರಮುಖ ವಿಚಾರಗಳನ್ನು ಪ್ರಸ್ತುತಪಡಿಸಿದೆ. ಅವುಗಳಲ್ಲಿ ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವುದರಿಂದ ಹಿಡಿದು ಸ್ವಾವಲಂಬಿ ಜೀವನ (independence life) ನಡೆಸುವವರೆಗೆ ಸಹಾಯಕವಾಗುವ ಯೋಜನೆಗಳು ಸೇರಿವೆ.

ಬಡ್ಡಿರಹಿತ ಸಾಲ! (Loan without interest)

ಮೊಟ್ಟ ಮೊದಲನೆಯದಾಗಿ ಬಡ ಮಹಿಳೆಯರು ಸ್ವಂತ ಉದ್ಯಮ (own business) ಆರಂಭಿಸುವುದಕ್ಕಾಗಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಸರ್ಕಾರ ಬಡ್ಡಿ ರಹಿತ ಸಾಲವನ್ನು (Loan) ನೀಡಲು ಮುಂದಾಗಿದೆ ಇದರಿಂದಾಗಿ ಮಹಿಳೆಯರು ತಮ್ಮದೇ ಆಗಿರುವ ಸಣ್ಣ ಸ್ವಂತ ಉದ್ಯಮ ಆರಂಭಿಸಲು ಸರ್ಕಾರ ಬಂಡವಾಳ ಒದಗಿಸುತ್ತದೆ.

ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಹೊಸ ರೇಷನ್ ಕಾರ್ಡ್ ಅರ್ಜಿಗೂ ಅವಕಾಶ!

Loanಮಾಸಾಶನ ಹೆಚ್ಚಳ!

ಮಾಜಿ ದೇವದಾಸಿಯರ ಕಲ್ಯಾಣ ವಿಚಾರದಲ್ಲಿಯೂ ಗಮನಹರಿಸಿರುವ ರಾಜ್ಯ ಸರ್ಕಾರ ಅಂದವರಿಗೆ ಸಿಗುತ್ತಿದ್ದ 1500 ರೂಪಾಯಿಗಳ ಮಾಸಾಶನವನ್ನು 2000 ಗಳಿಗೆ ಹೆಚ್ಚಿಸಲು ಮುಂದಾಗಿದೆ. ಇದರಿಂದ ಇಂದು ಆರ್ಥಿಕವಾಗಿ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಇರುವ ಮಾಜಿ ದೇವದಾಸಿಯರಿಗೆ ದೊಡ್ಡ ಅನುಕೂಲವೇ ಆಗಲಿದೆ.

ಜಮಾ ಆಗಲಿದೆ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಅಂಗನವಾಡಿ ಶಿಕ್ಷಕಿಯರಿಗೆ ಸ್ಮಾರ್ಟ್ ಫೋನ್! (Smartphone for Anganwadi teachers)

ಸರ್ಕಾರ ಕೈಗೊಂಡಿರುವ ಮತ್ತೊಂದು ದೊಡ್ಡ ಉಪಕ್ರಮ ಇದಾಗಿದ್ದು, ಈಗಾಗಲೇ ಮಕ್ಕಳನ್ನು ಅಂಗನವಾಡಿ ಕೇಂದ್ರದತ್ತ ಸೆಳೆಯಲು ಬೇರೆ ಬೇರೆ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದೆ.

ಇದೀಗ, ಅಂಗನವಾಡಿ ಟೀಚರ್ ಗಳಿಗೆ ಸ್ಮಾರ್ಟ್ ಫೋನ್ ವಿತರಣೆ ಮಾಡುವುದರ ಮೂಲಕ ಯಾವುದೇ ಡೇಟಾವನ್ನು ಸುಲಭವಾಗಿ ಸರಿಯಾದ ರೀತಿಯಲ್ಲಿ ಸೇವ್ ಮಾಡಿ ಇಡಲು ಹಾಗೂ ಜನರಿಗೆ ಸರಿಯಾದ ಸಮಯಕ್ಕೆ ತಲುಪಿಸಲು ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ವಾಸಿಸುವ ಬಡ, ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರ ಬಗ್ಗೆ ಎಲ್ಲಾ ಡಾಟಾಗಳನ್ನು ಸ್ಮಾರ್ಟ್ ಫೋನ್ ಮೂಲಕವೇ ಸಂಗ್ರಹಿಸಿ ಸರ್ಕಾರಕ್ಕೆ ಕೊಡಬಹುದಾಗಿದೆ.

ಈ ಎಲ್ಲಾ ಸರ್ಕಾರದ ಹೊಸ ಯೋಜನೆಗಳು ಮಹಿಳೆಯರಿಗೆ ಇನ್ನಷ್ಟು ಬಲವನ್ನ ತಂದು ಕೊಡಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಹೊಸ ರೇಷನ್ ಕಾರ್ಡ್ ಅರ್ಜಿಗೆ ಸಿದ್ಧಮಾಡಿಕೊಳ್ಳಿ! ಈ ದಾಖಲೆ ಕೂಡ ಇಟ್ಟುಕೊಳ್ಳಿ

The government has implemented a new 3 Schemes to women

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories