ಹೊಸ ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ಅರ್ಜಿ ಸಲ್ಲಿಕೆಗೂ ಅವಕಾಶ! ಇಲ್ಲಿದೆ ಡೀಟೇಲ್ಸ್

ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳನ್ನು ಪ್ರತ್ಯೇಕಗೊಳಿಸಿ ಫಲಾನುಭವಿಗಳಿಗೆ ಆಯಾ ಕಾರ್ಡ್ ವಿತರಣೆ ಮಾಡಲಾಗುವುದು.

Bengaluru, Karnataka, India
Edited By: Satish Raj Goravigere

ಎರಡುವರೆ ವರ್ಷಗಳ ಕಾಯುವಿಕೆಗೆ ತೆರೆ ಬೀಳುವ ಎಲ್ಲಾ ಸಾಧ್ಯತೆಗಳು ಇವೆ. ನಾವು ಯಾವ ವಿಚಾರ ಮಾತನಾಡುತ್ತಿದ್ದೇವೆ ಎನ್ನುವ ಬಗ್ಗೆ ನಿಮಗೆ ಈಗಾಗಲೇ ಹಿಂಟ್ ಸಿಕ್ಕಿರಬಹುದು. ಹೌದು, ನಾವು ಹೇಳುತ್ತಿರುವುದು ರೇಷನ್ ಕಾರ್ಡ್ (Ration card) ವಿತರಣೆ ವಿಚಾರದ ಬಗ್ಗೆ!

ಸರ್ಕಾರ ಈಗಾಗಲೇ ತಿಳಿಸಿರುವಂತೆ ಇನ್ನು ಕೆಲವೇ ದಿನಗಳಲ್ಲಿ ಅಂದ್ರೆ ಮಾರ್ಚ್ 31ರ ನಂತರ ಇಲ್ಲಿಯವರೆಗೆ ಯಾರು ಬಿಪಿಎಲ್ ಎಪಿಎಲ್ ಹಾಗೂ ಎ ಎ ವೈ (BPL, APL, AAY) ಕಾರ್ಡುಗಳನ್ನು ಅರ್ಜಿ ಸಲ್ಲಿಸಿದ್ದರು, ಅಂತವರ ಅರ್ಜಿ ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

New ration card rural list released, Make sure your name is here

ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣಕ್ಕೆ ಹೊಸ ನಿಯಮ ಘೋಷಿಸಿದ ಸರ್ಕಾರ!

ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ಮಾಹಿತಿ ನೀಡಿರುವ ಆಹಾರ ಸಚಿವ ಕೆಎಚ್ ಮುನಿಯಪ್ಪ (food minister K.H Muniyappa) ಅವರು ಚುನಾವಣೆಯ ನೀತಿ ಸಂಹಿತೆ ಕಾರಣದಿಂದಾಗಿ ಪೆಂಡಿಂಗ್ ಉಳಿದಿದ್ದ ಅರ್ಜಿ ಪರಿಶೀಲನೆ ನಡೆಸಿ, ಅವುಗಳನ್ನು April 1ರಿಂದ ವಿಲೇವಾರಿ ಮಾಡಲಾಗುವುದು. ಪ್ರತಿ ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ಕೂಡ ಸೇವಾ ಕೇಂದ್ರಗಳಲ್ಲಿ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಸಾಧ್ಯವಿದೆ ಎಂದರು.

ಅರ್ಜಿ ಗಳಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳನ್ನು ಪ್ರತ್ಯೇಕಗೊಳಿಸಿ ಫಲಾನುಭವಿಗಳಿಗೆ ಆಯಾ ಕಾರ್ಡ್ ವಿತರಣೆ ಮಾಡಲಾಗುವುದು.

ಇಂಥವರಿಗೆ ರೇಷನ್ ಕಾರ್ಡ್ ಇದ್ರೂ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಸಿಗೋಲ್ಲ

ಯಾರಿಗೆ ಸಿಗಲಿದೆ ಹೊಸ ಪಡಿತರ ಚೀಟಿ!

BPL Ration Cardಇನ್ನು ಅರ್ಜಿ ಸಲ್ಲಿಸಿದ್ದೀರಿ ಎನ್ನುವ ಕಾರಣಕ್ಕೆ ಎಲ್ಲರಿಗೂ ಬಿಪಿಎಲ್ ಕಾರ್ಡ್ ವಿತರಣೆ ಮಾಡುವುದಿಲ್ಲ, ಸರ್ಕಾರ ಈಗಾಗಲೇ ವಿಧಿಸಿರುವ ಮಾನದಂಡದ ಒಳಗೆ ನೀವು ಬಂದರೆ ಮಾತ್ರ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ಲಭ್ಯವಾಗುತ್ತದೆ.

ಉದಾಹರಣೆಗೆ ಹಳ್ಳಿಯಲ್ಲಿ ವಾಸಿಸುವವರ ತಿಂಗಳ ವರಮಾನ 6,400 ಮತ್ತು ನಗರ ಭಾಗದಲ್ಲಿ ವಾಸಿಸುವ ಜನರ ತಿಂಗಳ ವರಮಾನ 11,850ಗಳನ್ನು ಮೀರಿದರೆ ಅಂಥವರಿಗೆ ಬಿಪಿಎಲ್ ಪಡಿತರ ಚೀಟಿ ಸಿಗುವುದಿಲ್ಲ.

ಅಷ್ಟೇ ಅಲ್ಲದೆ ಯಾವುದೇ ಸರ್ಕಾರಿ ನೌಕರಿಯಲ್ಲಿ ಇದ್ದರೆ, ಅಥವಾ ಖಾಸಗಿ ಕಂಪನಿಯ ಕಾಯಂ ಉದ್ಯೋಗಿ ಆಗಿದ್ದರೆ, ಸ್ವಂತ ಉದ್ಯೋಗಕ್ಕಾಗಿ ಅಥವಾ ಸ್ವಂತ ಬಳಕೆಗಾಗಿ ವೈಟ್ ಬೋರ್ಡ್ ಕಾರ್ (ಟ್ಯಾಕ್ಸಿ ಆಗಿ ಬಳಕೆ ಮಾಡುವುದನ್ನು ಹೊರತುಪಡಿಸಿ) ಹೊಂದಿದ್ರೆ ಅಂತವರಿಗೆ ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.

ಮಹಿಳೆಯರಿಗೆ ಬಂಪರ್ ಕೊಡುಗೆ ಮತ್ತೆ ಹೊಸ 3 ಯೋಜನೆ ಜಾರಿಗೆ ತಂದ ಸರ್ಕಾರ!

ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ!

ಸರ್ಕಾರ ತಿಳಿಸಿರುವಂತೆ ಈಗಾಗಲೇ 57 ಸಾವಿರದಷ್ಟು ಪಡಿತರ ಚೀಟಿ ವಿತರಣೆ ಮಾಡಲಾಗಿದೆ 744 ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ ಪಡಿತರ ಚೀಟಿ ಕೊಡಲಾಗಿದೆ. ಇನ್ನು ಉಳಿದ ಪಡಿತರ ಚೀಟಿಯನ್ನು ಏಪ್ರಿಲ್ 1 2024ರಿಂದ ವಿತರಣೆ ಮಾಡಲಾಗುವುದು, ಇದರ ಜೊತೆಗೆ ಹೊಸದಾಗಿ ಯಾರು ಅರ್ಜಿ ಸಲ್ಲಿಸಲು ಬಯಸುತ್ತಾರೋ ಅಂತವರಿಗೂ ಕೂಡ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ.

ತಮ್ಮ ಮನೆಯಿಂದ ಪ್ರತ್ಯೇಕಗೊಂಡು ವಾಸಿಸುವ ದಂಪತಿಗಳು ಅಥವಾ ನವ ವಿವಾಹಿತ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಅಂತವರಿಗೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶವಿದೆ.

ಒಟ್ಟಿನಲ್ಲಿ ನುಡಿದಂತೆ ನಡೆಯುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ಪಡಿತರ ಚೀಟಿ ವಿತರಣೆ ವಿಚಾರದಲ್ಲಿ ಜನರ ಮೆಚ್ಚುಗೆ ಪಾತ್ರವಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು.

ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಹೊಸ ರೇಷನ್ ಕಾರ್ಡ್ ಅರ್ಜಿಗೂ ಅವಕಾಶ!

New ration card distribution and new application For Ration Card