ಇಲ್ಲಿವರೆಗೂ 1 ರೂಪಾಯಿ ಗೃಹಲಕ್ಷ್ಮಿ ಹಣ ಸಿಗಲೇ ಇಲ್ಲ ಅನ್ನೋರಿಗೆ ಬಿಗ್ ಅಪ್ಡೇಟ್

ಗೃಹಲಕ್ಷ್ಮಿ (Gruha lakshmi scheme) ಹಣ ಎಲ್ಲರ ಖಾತೆಗೆ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶ. ಆದರೆ ದುರದೃಷ್ಟವಶಾತ್ ಸುಮಾರು 8.2 ಲಕ್ಷ ಮಹಿಳೆಯರ ಖಾತೆಗೆ (Bank Account) ಅರ್ಜಿ ಸಲ್ಲಿಸಿದರು ಕೂಡ ಗೃಹಲಕ್ಷ್ಮಿ ಹಣ ಸಿಕ್ಕಿಲ್ಲ

ಇದಕ್ಕೆ ಸಾಕಷ್ಟು ಕಾರಣಗಳನ್ನ ಸರ್ಕಾರ ಪಟ್ಟಿ ಮಾಡಿದೆ ಜೊತೆಗೆ ಒಂದಷ್ಟು ತಾಂತ್ರಿಕ ದೋಷಗಳು (technical errors) ಕೂಡ ಮಹಿಳೆಯರ ಖಾತೆಗೆ ಹಣ ಬರದಂತೆ ಮಾಡಿದೆ.

ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಏಳು ತಿಂಗಳು ಕಳೆದಿವೆ. ಅರ್ಜಿ ಸಲ್ಲಿಸಿದ ಬಹುತೇಕ ಎಲ್ಲಾ ಮಹಿಳೆಯರು ಕೂಡ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಇನ್ಮುಂದೆ ಇಂತಹವರಿಗೆ ರೇಷನ್ ಕಾರ್ಡ್ ಪ್ರಯೋಜನ ಸಿಗೋದಿಲ್ಲ! ಎಲ್ಲಾ ಸೌಲಭ್ಯಗಳು ಕ್ಯಾನ್ಸಲ್

ಆದರೆ ಅಂಕಿ ಅಂಶಗಳ ಪ್ರಕಾರ 20% ನಷ್ಟು ಮಹಿಳೆಯರು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಇವರಿಗೂ ಕೂಡ ಹಣ ಬಿಡುಗಡೆ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು, 100% ಅಷ್ಟು ಗೃಹಲಕ್ಷ್ಮಿ ಯೋಜನೆಯ ಸಕ್ಸಸ್ ಮಾಡಲು ಈಗ ಹೊಸ ಉಪಕ್ರಮ ಒಂದನ್ನು ಕೈಗೊಂಡಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಸರ್ಕಾರದ ಮಾಸ್ಟರ್ ಪ್ಲಾನ್!

*ಇನ್ನು ಮುಂದೆ ಯಾವುದೇ ಮಹಿಳೆಯರ ಖಾತೆಗೆ ಹಣ ಬಿಡುಗಡೆ ಆಗಿಲ್ಲ ಎನ್ನುವಂತೆ ಇಲ್ಲ ಯಾಕಂದ್ರೆ ಪ್ರತಿಯೊಂದು ಜಿಲ್ಲೆಗೂ ಕೂಡ ಅಧಿಕಾರಿಗಳು ಬಂದು ಮಹಿಳೆಯರ ಸಮಸ್ಯೆಯನ್ನು ಕೇಳಿ ತಿಳಿದು ಅವರಿಗೆ ಪರಿಹಾರವನ್ನು ಸೂಚಿಸುತ್ತಾರೆ.

ಒಂದು ವೇಳೆ ಮಹಿಳೆಯರ ಬ್ಯಾಂಕ ಖಾತೆಯಲ್ಲಿ ಸಮಸ್ಯೆ ಇದ್ದರೆ ಅದನ್ನ ಪರಿಹರಿಸುವ ಕೆಲಸವನ್ನು ಈ ಅಧಿಕಾರಿಗಳು ಮಾಡುತ್ತಾರೆ ಅಥವಾ ಅಂಚೆ ಕಚೇರಿ (post office) ಯಲ್ಲಿ ಹೊಸ ಖಾತೆಯನ್ನು ತೆರೆದು ಅದಕ್ಕೆ ಗೃಹಲಕ್ಷ್ಮಿ ಹಣ ಜಮಾ ಆಗುವಂತೆ ಮಾಡುತ್ತಾರೆ.

ಹೊಸ ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ಅರ್ಜಿ ಸಲ್ಲಿಕೆಗೂ ಅವಕಾಶ! ಇಲ್ಲಿದೆ ಡೀಟೇಲ್ಸ್

Gruha Lakshmi Yojana*ಇನ್ನು ಎರಡನೆಯದಾಗಿ ಪ್ರತಿ ಗ್ರಾಮದಲ್ಲಿಯೂ ಕೂಡ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಮನೆ ಮನೆಗೆ ತೆರಳಿ ಮಹಿಳೆಯರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳುತ್ತಿದ್ದಾರೆ.

ಮಹಿಳೆಯರ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಅದನ್ನ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರೆ ಅದರ ಪರಿಹಾರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿಯಾಗುತ್ತಾರೆ. ಅಥವಾ ಯಾವ ಮಹಿಳೆಗೆ ಹಣ ವರ್ಗಾವಣೆ ಆಗಿಲ್ಲ ಎನ್ನುವುದನ್ನು ಲಿಸ್ಟ್ ಮಾಡಿಕೊಂಡು ಸರ್ಕಾರಕ್ಕೆ ಕಳುಹಿಸುತ್ತಾರೆ. ಈ ಮೂಲಕ ಸರ್ಕಾರ ಸಮಸ್ಯೆಗಳನ್ನು ಪರಿಹರಿಸಿ ಅಂತಹ ಮಹಿಳೆಗೂ ಕೂಡ ಹಣ ವರ್ಗಾವಣೆ ಆಗುವಂತೆ ಮಾಡುತ್ತದೆ.

ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣಕ್ಕೆ ಹೊಸ ನಿಯಮ ಘೋಷಿಸಿದ ಸರ್ಕಾರ!

ಒಟ್ಟಿನಲ್ಲಿ ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರಕ್ಕೆ ಎಲ್ಲಾ ಗ್ಯಾರಂಟಿ ಯೋಜನೆಗಳಲ್ಲಿ ಯಶಸ್ಸನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗಿದೆ.

ಈ ಹಿನ್ನಲೆಯಲ್ಲಿ ಶತಾಯಗತಾಯ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Deposit) ಮಾಡಲು ಬೇರೆ ಬೇರೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಹಿಳೆಯರು ಕೂಡ ಸರ್ಕಾರದ ಎಲ್ಲಾ ಮಾನದಂಡಗಳನ್ನು ಹಾಗೂ ನಿಯಮಗಳನ್ನು ಪಾಲನೆ ಮಾಡಿದೆ ಆಟೋಮೆಟಿಕ್ ಆಗಿ 2,000 ರೂ.ಮುಂದಿನ ಕಂತುಗಳಿಂದ ನಿಮ್ಮ ಖಾತೆಗೆ ತಲುಪುತ್ತದೆ.

ಇಂಥವರಿಗೆ ರೇಷನ್ ಕಾರ್ಡ್ ಇದ್ರೂ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಸಿಗೋಲ್ಲ

Big update for those who have not received 1 rupee Gruha Lakshmi Scheme money

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories