ಮೊಬೈಲ್ ಮೂಲಕವೇ ನಿಮ್ಮ ಜಮೀನು, ಆಸ್ತಿ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳಿ

ಯಾವುದೇ ರೀತಿಯ ವಂಚನೆ ಆಗದಂತೆ ಜೊತೆಗೆ ಆಸ್ತಿ (Property) ವಿಚಾರದಲ್ಲಿ ಪಾರದರ್ಶಕತೆಯನ್ನು ಹೊಂದಿರುವಂತೆ ಜನರಿಗೆ ಸೂಚನೆ ನೀಡಲಾಗಿದೆ.

ಕಂದಾಯ ಇಲಾಖೆ (revenue department) ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ ಯಾವುದೇ ರೈತರು (farmers ) ತಮ್ಮ ಸ್ವಂತ ಜಮೀನು ಹೊಂದಿದ್ದರೆ ಅವರು ಪಹಣಿ ಅಥವಾ ಭೂಮಿಯ ಕಾಗದ ಪತ್ರದ ಜೊತೆಗೆ ಆಧಾರ್ ಜೋಡಣೆ (Aadhaar link) ಮಾಡುವುದು ಕಡ್ಡಾಯವಾಗಿದೆ.

ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ವಂಚನೆ ಆಗದಂತೆ ತಡೆಗಟ್ಟಬಹುದು ಎನ್ನುವುದು ಸರ್ಕಾರದ ಉದ್ದೇಶ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಮೂಲಕ ರೈತರು ಹೊಂದಿರುವ ಜಮೀನು ಹಾಗೂ ಆಸ್ತಿ ಬಗ್ಗೆ ಕೆಲವು ಪ್ರಮುಖ ನಿಯಮಗಳನ್ನು ಜಾರಿಗೆ ತಂದಿದೆ.

ಇಲ್ಲಿವರೆಗೂ 1 ರೂಪಾಯಿ ಗೃಹಲಕ್ಷ್ಮಿ ಹಣ ಸಿಗಲೇ ಇಲ್ಲ ಅನ್ನೋರಿಗೆ ಬಿಗ್ ಅಪ್ಡೇಟ್

ಮೊಬೈಲ್ ಮೂಲಕವೇ ನಿಮ್ಮ ಜಮೀನು, ಆಸ್ತಿ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳಿ - Kannada News

ಈ ಮೂಲಕ ಯಾವುದೇ ರೀತಿಯ ವಂಚನೆ ಆಗದಂತೆ ಜೊತೆಗೆ ಆಸ್ತಿ (Property) ವಿಚಾರದಲ್ಲಿ ಪಾರದರ್ಶಕತೆಯನ್ನು ಹೊಂದಿರುವಂತೆ ಜನರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಯಾರು ಸ್ವಂತ ಜಮೀನು ಹೊಂದಿರುತ್ತಾರೋ ಅಂತವರ ಪಹಣಿ ಜೊತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ

ಇದರಿಂದ ಯಾವುದೇ ವ್ಯಕ್ತಿ, ಯಾವುದೇ ಸ್ಥಳದಲ್ಲಿ ಇದ್ದರು ತಮ್ಮ ಜಮೀನು ಹಾಗು ಅದರ ಬಗ್ಗೆ ಮಾಹಿತಿ ಪಡೆಯಬಹುದು. ಜೊತೆಗೆ ಸರ್ಕಾರಕ್ಕೂ ಜನರ ಆಸ್ತಿಯ ಬಗ್ಗೆ ಲೆಕ್ಕ ಸಿಗುತ್ತದೆ.

ಹೀಗಾಗಿ ಆಸ್ತಿ ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ಇದಕ್ಕಾಗಿ ವಿಶೇಷ ವೆಬ್ಸೈಟ್ ಕೂಡ ಆರಂಭವಾಗಿದ್ದು ನೀವು ನಿಮ್ಮ ಮೊಬೈಲ್ ನಲ್ಲಿಯೇ ಪಹಣಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು.

ಇನ್ಮುಂದೆ ಇಂತಹವರಿಗೆ ರೇಷನ್ ಕಾರ್ಡ್ ಪ್ರಯೋಜನ ಸಿಗೋದಿಲ್ಲ! ಎಲ್ಲಾ ಸೌಲಭ್ಯಗಳು ಕ್ಯಾನ್ಸಲ್

ಪಹಣಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಈ ವೆಬ್ಸೈಟ್ ಬಳಸಿ!

Property documents* ಸರ್ಕಾರ ಬಿಡುಗಡೆ ಮಾಡಿರುವ ಭೂಮಿ ವೆಬ್ಸೈಟ್ ಮೂಲಕ, https://landrecords.karnataka.gov.in/service4/ ನೀವು ಅಪ್ಪಣಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು.

* ಮೇಲೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

* ಗೆಟ್ ಓಟಿಪಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ಇಲ್ಲಿ ನಮೂದಿಸಿ.

* 6 ಸಂಖ್ಯೆಗಳ ಓಟಿಪಿ ನಮೂದಿಸಿದ ನಂತರ ಲಾಗಿನ್ ಆಗಿ.

* ಈಗ ಯಾರ ಹೆಸರಿನಲ್ಲಿ ಜಮೀನು ಇರುತ್ತದೆಯೋ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ verify ಮಾಡಿ.

* ನೀವು ನಮೂದಿಸಿರುವ ಆಧಾರ ಸಂಖ್ಯೆ ಸರಿಯಾಗಿದ್ದರೆ ಆಧಾರ್ ಪರಿಶೀಲಿಸಲಾಗಿದೆ ಎಂದು ಸ್ಟೇಟ್ಮೆಂಟ್ ಕಾಣಬಹುದು.

* ಮುಂದಿನ ಹಂತದಲ್ಲಿ ಆಧಾರ್ ಕಾರ್ಡ್ ಪರಿಶೀಲನೆ ಬಳಸಿಕೊಂಡು ಅರ್ಜಿದಾರರ ವಿವರ ಭರ್ತಿ ಮಾಡಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ ಅದನ್ನು ಕ್ಲಿಕ್ ಮಾಡಿ.

ಮಹಿಳೆಯರಿಗೆ ಸರ್ಕಾರದಿಂದಲೇ ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂಪಾಯಿ ಸಾಲ; ಅರ್ಜಿ ಸಲ್ಲಿಸಿ

* ಈಗ ಮತ್ತೆ ಅರ್ಜಿದಾರರ ಆಧಾರ್ ಕಾರ್ಡ್ ಅನ್ನು ಹಾಕಿ ಓಟಿಪಿ ಪಡೆದುಕೊಳ್ಳಿ.

* ಮೊಬೈಲ್ ಸಂಖ್ಯೆಗೆ ಬಂದಿರುವ ಓಟಿಪಿಯನ್ನು ಮತ್ತೆ ನಮೂದಿಸಬೇಕು.

* ನಿಮ್ಮ ಆಧಾರ್ ಸಂಖ್ಯೆಗೆ ಕನೆಕ್ಟ್ ಆಗಿರುವ ಮೊಬೈಲ್ ಗೆ ಈ ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ ಸರಿಯಾಗಿ ನಮೂದಿಸಿದರೆ ಲಿಂಕ್ ಆಧಾರ್ ಎನ್ನುವ ಆಯ್ಕೆಯನ್ನು ಕಾಣುತ್ತೀರಿ.

* ಈಗ ಕೆಳಭಾಗದಲ್ಲಿ ಕಾಣುವ ಸರ್ವೇ ನಂಬರ್ ಅನ್ನು ಆಯ್ಕೆ ಮಾಡಿಕೊಂಡು ಲಿಂಕ್ ಮಾಡಿಕೊಳ್ಳಬೇಕು

* ಈಗ ನಿಮ್ಮ ಮೊಬೈಲ್ಗೆ ಮತ್ತೊಂದು ಒಟಿಪಿ ಕಳುಹಿಸಲಾಗುತ್ತದೆ ಅದನ್ನ ನಮೂದಿಸಿ ವೆರಿಫೈ ಓಟಿಪಿ ಎಂದು ಮಾಡಿ.

* ಬಳಿಕ ನೀವು ಆಧಾರ್ ಜೊತೆಗೆ ಪಹಣಿ ಲಿಂಕ್ ಮಾಡಲು ಬಯಸುತ್ತೀರಾ ಎನ್ನುವ ಸ್ಟೇಟ್ಮೆಂಟ್ ಕಾಣಿಸುತ್ತದೆ. ಎಸ್ ಎಂದು ಕೊಡಿ.

* ಈಗ ನಿಮ್ಮ ಪಹಣಿ ಜೊತೆಗೆ ಆದ ಲಿಂಕ್ ಆಗಿರುತ್ತದೆ ಹಾಗೂ ಆಧಾರ್ ಲಿಂಕ್ ಆಗಿದೆ ಎನ್ನುವ ಸಂದೇಶವನ್ನು ನೀವು ಕಾಣುತ್ತೀರಿ.

Link Aadhaar for your land, property RTC through mobile

Follow us On

FaceBook Google News