Karnataka NewsBengaluru News

ಹೊಸ ರೇಷನ್ ಕಾರ್ಡ್ ಪಡೆಯಲು ಈ ದಾಖಲೆಗಳು ಕಡ್ಡಾಯ! ಕೂಡಲೇ ಸಿದ್ದಪಡಿಸಿಕೊಳ್ಳಿ

ರೇಷನ್ ಕಾರ್ಡ್ (Ration Card) ಕೂಡ ಇಂದು ಆಧಾರ್ ಕಾರ್ಡ್ (Aadhaar Card) ಹಾಗೂ  ಇತರ ದಾಖಲೆಗಳಂತೆ ಪ್ರಮುಖ ದಾಖಲೆಯಾಗಿ ಗುರುತಿಸಿಕೊಂಡಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಪಡಿತರ ಚೀಟಿ ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ.

ಇದರಿಂದಾಗಿ ಪ್ರತಿಯೊಬ್ಬರು ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನೇ ಪಡೆದುಕೊಳ್ಳಲು ಬಯಸುತ್ತಿದ್ದಾರೆ. ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದ್ದು ಹೊಸ ಪಡಿತರ ಚೀಟಿ ವಿತರಣೆ ಮಾಡುವ ದಿನಾಂಕವನ್ನು ಘೋಷಣೆ ಮಾಡಿದೆ.

The government has given good news to all families with ration cards

ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಹಣ ಬಂದಿಲ್ವಾ? ಕಾರಣ ಇಲ್ಲಿದೆ

ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ವಿತರಣೆ!

ರಾಜ್ಯ ಆಹಾರ ಸಚಿವ ಕೆಎಚ್ ಮುನಿಯಪ್ಪ ಇತ್ತೀಚಿಗೆ ಪ್ರತಿಪಕ್ಷದ ನಾಯಕ ಆರ್ ಅಶೋಕ ಹಾಗೂ ಕಾಂಗ್ರೆಸ್ ನಾಯಕಿ ನಯನ ಮೊಟಮ್ಮ ಅವರು ಕೇಳಿದ ಪ್ರಶ್ನೆಗಳಿಗೆ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರಕ್ಕೆ 2.96 ಲಕ್ಷ ಪಡಿತರ ಚೀಟಿ ಅರ್ಜಿಗಳು ಸಲ್ಲಿಕೆ ಆಗಿವೆ.

ಇದನ್ನ ಇಂದಿನ ಸರ್ಕಾರವು ಕೂಡ ವಿತರಣೆ ಮಾಡದೆ ಹಾಗೆಯೇ ಬಿಟ್ಟಿತು. ಆದರೆ ಈಗ ರಾಜ್ಯ ಸರ್ಕಾರ ಪಡಿತರ ಚೀಟಿ ಬಗ್ಗೆ ವಿಶೇಷವಾದ ನಿರ್ಣಯ ಕೈಗೊಂಡಿದ್ದು, ಮಾರ್ಚ್ 31ರ ಒಳಗೆ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಿ ಏಪ್ರಿಲ್ ಒಂದರಿಂದ ಫಲಾನುಭವಿಗಳಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಇಲ್ಲಿವರೆಗೂ 1 ರೂಪಾಯಿ ಗೃಹಲಕ್ಷ್ಮಿ ಹಣ ಸಿಗಲೇ ಇಲ್ಲ ಅನ್ನೋರಿಗೆ ಬಿಗ್ ಅಪ್ಡೇಟ್

ಹಳೆಯ ಅರ್ಜಿಗಳ ವಿಲೇವಾರಿ ಜೊತೆಗೆ ಹೊಸ ಅರ್ಜಿಗಳ ಸ್ವೀಕಾರ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಏಪ್ರಿಲ್ ಒಂದರಿಂದ ಯಾರೆಲ್ಲಾ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಬಯಸುತ್ತೀರೋ ಅಂತವರಿಗೆ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ

ಹೊಸದಾಗಿ ಸಂಸಾರ ಆರಂಭಿಸಿರುವ ಪತಿ-ಪತ್ನಿ ಅಥವಾ ಹೀಗಿರುವ ಕುಟುಂಬದಿಂದ ಬೇರೆಯಾಗಿ ವಾಸಿಸುವ ದಂಪತಿಗಳು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

BPL Ration Cardಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ಡ್ರೈವಿಂಗ್ ಲೈಸೆನ್ಸ್
ವೋಟರ್ ಐಡಿ
ಪಾಸ್ ಪೋರ್ಟ್ ಅಳತೆಯ ಫೋಟೋ
ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ
ಸ್ವಯಂ ಘೋಷಣಾ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ನಿವಾಸದ ಪುರಾವೆ
ಮೊಬೈಲ್ ಸಂಖ್ಯೆ

ಇನ್ಮುಂದೆ ಇಂತಹವರಿಗೆ ರೇಷನ್ ಕಾರ್ಡ್ ಪ್ರಯೋಜನ ಸಿಗೋದಿಲ್ಲ! ಎಲ್ಲಾ ಸೌಲಭ್ಯಗಳು ಕ್ಯಾನ್ಸಲ್

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು!

* ಭಾರತೀಯ ನಾಗರಿಕರಾಗಿರಬೇಕು ಮತ್ತು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

* ಈಗಾಗಲೇ ಪಡಿತರ ಚೀಟಿ ಹೊಂದಿದ್ದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ

* ಮದುವೆ ಆದ ನವ ದಂಪತಿಗಳು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು

* ನಿಮ್ಮ ಕುಟುಂಬದ ಆದಾಯ ವನ್ನು ನೋಡಿ ನಿಮಗೆ ಬಿಪಿಎಲ್ ಕಾರ್ಡ್ (BPL card) ಅಥವಾ ಎಪಿಎಲ್ ಕಾರ್ಡ್ (APL Card) ಎನ್ನುವುದನ್ನು ಅಧಿಕಾರಿಗಳು ನಿರ್ಧರಿಸುತ್ತಾರೆ ಮತ್ತು ಅದಕ್ಕೆ ಸಂಬಂಧಪಟ್ಟ ಅರ್ಜಿ ಫಾರಂ ಅನ್ನು ನೀವು ಭರ್ತಿ ಮಾಡಬೇಕಾಗುತ್ತದೆ.

ಹೊಸ ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ಅರ್ಜಿ ಸಲ್ಲಿಕೆಗೂ ಅವಕಾಶ! ಇಲ್ಲಿದೆ ಡೀಟೇಲ್ಸ್

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ನಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಇದರ ಜೊತೆಗೆ ನೀವು ಹತ್ತಿರದ ಸೇವಾ ಕೇಂದ್ರದಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಮೇಲಿನ ಎಲ್ಲ ದಾಖಲೆಗಳನ್ನು ನೀವು ಸಿದ್ಧಪಡಿಸಿಟ್ಟುಕೊಂಡರೆ ಏಪ್ರಿಲ್ ಒಂದರಿಂದ ಆರಂಭವಾಗುವ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ನೀವು ಕೂಡ ಅರ್ಜಿ ಸಲ್ಲಿಸಬಹುದು.

These documents are mandatory to get a new ration card, Prepare immediately

Related Stories