ಈ ಮಹಿಳೆಯರಿಗೆ ಜಮಾ ಆಗಿಲ್ಲ ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ! ಕಾರಣ ಇಲ್ಲಿದೆ
ಎನ್ ಪಿ ಸಿ ಐ ಮ್ಯಾಪಿಂಗ್ ಮಾಡಿಸದೆ ಇದ್ರೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಖಾತೆಗೆ ಬರುವುದಿಲ್ಲ ಎಂದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಕುರಿತಂತೆ ಸಾಕಷ್ಟು ಹೊಸ ಹೊಸ ಅಪ್ಡೇಟ್ಗಳು ಬರುತ್ತಿವೆ. ಗೃಹಿಣಿಯರು ತಮ್ಮ ಖಾತೆಗೆ (Bank Account) ಯಾಕೆ ಹಣ ಬರುತ್ತಿಲ್ಲ ಎನ್ನುವ ಗೊಂದಲದಲ್ಲಿ ಇದ್ದರೆ ಇದಕ್ಕೆ ಕಾರಣಗಳನ್ನು ಸರ್ಕಾರ ಕೊಟ್ಟಿದೆ. ಜೊತೆಗೆ ಪರಿಹಾರವನ್ನು ಕೂಡ ಸೂಚಿಸಿದೆ.
ಸರ್ಕಾರ ಹೇಳಿದ ರೀತಿಯಲ್ಲಿ ನೀವು ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಮುಂದಿನ ದಿನಗಳಲ್ಲಿ ಯಾವುದೇ ಚಿಂತೆ ಇಲ್ಲದೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ನಿಮ್ಮ ಖಾತೆಗೆ ಬಂದು ತಲುಪುತ್ತದೆ.
ಮಾರ್ಚ್ ತಿಂಗಳ ರದ್ದಾದ ಬಿಪಿಎಲ್ ಕಾರ್ಡ್ ಲಿಸ್ಟ್ ಬಿಡುಗಡೆ! ಯಾವುದೇ ಬೆನಿಫಿಟ್ ಸಿಗೋಲ್ಲ
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 1.10 ಕೋಟಿ ಜನರ ಅಪ್ಲಿಕೇಶನ್ ಗಳಲ್ಲಿ ಬಹುತೇಕ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದು ತಲುಪಿದೆ. ಆದರೆ ಒಂದು ಅಂಕಿ ಅಂಶಗಳ ಪ್ರಕಾರ ಇನ್ನು ಶೇಕಡ 10 ರಷ್ಟು ಮಹಿಳೆಯರ ಖಾತೆಗೆ ಹಣ ಬರುವುದು ಬಾಕಿ ಇದೆ. ಸುಮಾರು 8.4 ಲಕ್ಷ ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಯಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ.
NPCI mapping ಕಡ್ಡಾಯ?
ಈಗಾಗಲೇ ನೀವು ನಿಮ್ಮ ಬ್ಯಾಂಕ್ ಖಾತೆಗೆ E-KYC ಅಪ್ಡೇಟ್ ಮಾಡಿಸಿಕೊಂಡಿದ್ದರೆ, ನಿಮ್ಮ ಖಾತೆಗೆ ಹಣ ಜಮಾ ಆಗುತ್ತಿದ್ದರೆ ಂತಹ ಸಂದರ್ಭದಲ್ಲಿ ಎನ್‌ಪಿಸಿಐ ಮ್ಯಾಪಿಂಗ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಆದರೆ ಹಿಂದಿನ ಕೆಲವು ಕಂತಿನ ಹಣ ನಿಮ್ಮ ಖಾತೆಗೆ ಬಂದಿಲ್ಲ ಎಂದಾದರೆ ಅಂತಹ ಸಂದರ್ಭದಲ್ಲಿ, NPCI mapping ಕಡ್ಡಾಯವಾಗಿದೆ.
National payment Corporation of India ಯುಪಿಐ ಪೇಮೆಂಟ್ ಅನ್ನು ನಿಯಂತ್ರಿಸುತ್ತಿದ್ದು ,ಇಂದು ಡಿಜಿಟಲ್ ಹಣ ವರ್ಗಾವಣೆಗೆ ಎನ್ವಿಸಿಐ ಎನ್ನುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ನೀವು ತಕ್ಷಣ ಬ್ಯಾಂಕ್ ಗೆ ಹೋಗಿ ಎನ್ಪಿಸಿಐ ಮ್ಯಾಪಿಂಗ್ ಮಾಡಿಕೊಡುವಂತೆ ಅಲ್ಲಿನ ಸಿಬ್ಬಂದಿಗಳ ಬಳಿ ಕೇಳಿ ಮಾಡಿಸಿಕೊಳ್ಳಿ.
ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ಮಾತ್ರ ಜಮೆ ಆಗಲಿದೆ!
ಇನ್ನೊಂದು ಪರಿಹಾರವೂ ಇದೆ!
ಬ್ಯಾಂಕ್ ಖಾತೆಗೆ ಎನ್ ಪಿ ಸಿ ಐ ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ ಇದರ ಜೊತೆಗೆ ನಿಮ್ಮ ಖಾತೆಗೆ ಬೇರೆ ಯಾವ ಕಾರಣಕ್ಕೆ ಹಣ ಬರುತ್ತಿಲ್ಲ ಎನ್ನುವುದು ನಿಮಗೆ ತಿಳಿಯದೆ ಇದ್ದರೆ ಹತ್ತಿರದ ಕಚೇರಿಗೆ ಭೇಟಿ ನೀಡಿ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಸಿಕ್ಕಿರುವ ಸ್ವೀಕೃತಿ ಪ್ರತಿ, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ ನಿಮ್ಮ ಖಾತೆಗೆ ಹಣ ಬಾರದೇ ಇರುವುದಕ್ಕೆ ಕಾರಣ ತಿಳಿದುಕೊಳ್ಳಿ.
ಗೃಹಜ್ಯೋತಿ ಫ್ರೀ ವಿದ್ಯುತ್! ರಾತ್ರೋರಾತ್ರಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ
ಅಷ್ಟೇ ಅಲ್ಲ ಈ ಅಧಿಕಾರಿಗಳು ನಿಮಗೆ ಸೂಕ್ತ ಪರಿಹಾರವನ್ನು ಕೂಡ ಸೂಚಿಸುತ್ತಾರೆ. ಹಾಗಾಗಿ ನೀವು ಮುಂದಿನ ಕಂತಿನ ಅಂದರೆ ಏಳನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಮಾರ್ಚ್ 15ರಿಂದ ಗೃಹಲಕ್ಷ್ಮಿಯ 7ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದೆ. ಒಟ್ಟಿನಲ್ಲಿ ನಿಮ್ಮ ಖಾತೆಗೆ ಈ ಹಿಂದಿನ ಕಂತಿನ ಹಣ ಬಾರದೆ ಇದ್ದರೆ ಮೇಲೆ ತಿಳಿಸಿರುವ ಕೆಲಸಗಳನ್ನು ಮಾಡಿಕೊಂಡರೆ 7ನೇ ಕಂತಿನ ಹಣ ಮಿಸ್ ಆಗದೆ ನಿಮಗೆ ಡಿಬಿಟಿ ಆಗುತ್ತದೆ.
ಗೃಹಲಕ್ಷ್ಮಿ 7ನೇ ಕಂತಿನ ಬಗ್ಗೆ ಬೆಳ್ಳಂಬೆಳಗ್ಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಹತ್ವದ ಮಾಹಿತಿ
Gruha Lakshmi Scheme money has not been deposited for these Beneficiaries