ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಿರಿ

ಅವಧಿಯ ಒಳಗೆ ಯಾರು ಅರ್ಜಿ ಸಲ್ಲಿಸಿದ್ದಾರೋ ಅಂತವರಿಗೆ 200 ಯೂನಿಟ್ (200 unit free electricity) ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.

ಕಳೆದ ಜೂನ್ ತಿಂಗಳಿನಿಂದ ಗೃಹಜ್ಯೋತಿ ಯೋಜನೆ (Gruha jyothi scheme) ಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಆದರೆ ಆಗ ಅರ್ಜಿ ಸಲ್ಲಿಸಲು ಕೇವಲ ಒಂದು ತಿಂಗಳ ಅವಕಾಶ ಮಾತ್ರ ಇತ್ತು.

ಅಷ್ಟು ಅವಧಿಯ ಒಳಗೆ ಯಾರು ಅರ್ಜಿ ಸಲ್ಲಿಸಿದ್ದಾರೋ ಅಂತವರಿಗೆ 200 ಯೂನಿಟ್ (200 unit free electricity) ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಸಾಕಷ್ಟು ಜನ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಈ ಯೋಜನೆಯಿಂದ ಕಳೆದ ಆರು ತಿಂಗಳಿನಿಂದ ವಂಚಿತರಾಗಿದ್ದಾರೆ ಎನ್ನಬಹುದು.

ಈಗ ಸರ್ಕಾರ ಮತ್ತೆ ಆನ್ಲೈನ್ ಮೂಲಕ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ನೀವು ನಿಮ್ಮ ಕೈಯಲ್ಲಿರುವ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಅರ್ಜಿ ಸಲ್ಲಿಸಬಹುದು..

ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಿರಿ - Kannada News

ರೈತರಿಗೆ ಗುಡ್ ನ್ಯೂಸ್! ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಬ್ಸಿಡಿ; ಅರ್ಜಿ ಸಲ್ಲಿಸಿ

ಗೃಹಜ್ಯೋತಿ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents to apply)

ಆಧಾರ್ ಕಾರ್ಡ್ (Aadhaar Card)
ವಿದ್ಯುತ್ ಬಿಲ್ (Electricity Bill)
ಮೊಬೈಲ್ ಸಂಖ್ಯೆ (Mobile Number)

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to apply online)

Gruha Jyothi Scheme* ಅರ್ಜಿ ಸಲ್ಲಿಸಲು ಮೊದಲು ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

* ಈಗ ಅಲ್ಲಿ ಕಾಣುವ ಗೃಹಜೋತಿ ಯೋಜನೆ ಮೇಲೆ ಕ್ಲಿಕ್ ಮಾಡಿ.

* ನಂತರ ಅರ್ಜಿ ಫಾರಂ ತೆಗೆದುಕೊಳ್ಳುತ್ತದೆ ನೀವು ನಿಮ್ಮ ಭಾಷೆಯನ್ನು ಆಯ್ಕೆ ಮಾಡಬೇಕು

* ನಂತರ ನಿಮ್ಮ ವಿದ್ಯುತ್ ಸರಬರಾಜು ಕಂಪನಿಯನ್ನ ಆಯ್ಕೆ ಮಾಡಬೇಕು (ಉದಾಹರಣೆಗೆ ಬೆಸ್ಕಾಂ, ಎಸ್ಕಾಂ, ಮೆಸ್ಕಾಂ)

* ಈಗ ನೀವು ನಿಮ್ಮ ಅಕೌಂಟ್ ಐಡಿ ಅಂದರೆ ವಿದ್ಯುತ್ ಬಿಲ್ ಸಂಖ್ಯೆಯನ್ನು ಹಾಕಬೇಕು. ಇದನ್ನು ನಮೂದಿಸಿದ ನಂತರ ಮುಂದಿನ ಕಾಲಂಗಳಲ್ಲಿ ನಿಮ್ಮ ಹೆಸರು ವಿಳಾಸ ಮೊದಲಾದವುಗಳನ್ನು ಆಟೋಮ್ಯಾಟಿಕ್ ಆಗಿ ತೆಗೆದುಕೊಳ್ಳುತ್ತದೆ.

ಈ ಮಹಿಳೆಯರಿಗೆ ಜಮಾ ಆಗಿಲ್ಲ ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ! ಕಾರಣ ಇಲ್ಲಿದೆ

* ಈಗ ಮಾಲಿಕ ಬಾಡಿಗೆದಾರ ಕುಟುಂಬ ಸದಸ್ಯ 3 ಆಯ್ಕೆ ಇರುತ್ತದೆ ಅದರಲ್ಲಿ ಸರಿಯಾದದ್ದನ್ನು ಕ್ಲಿಕ್ ಮಾಡಿ.

* ಈಗ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಆ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.

* ಬಳಿಕ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ.

* ನಂತರ ಅರ್ಜಿ ನಮೂನೆ ಸಲ್ಲಿಕೆಗೆ ಓಕೆ ಎಂದು ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.

ನೀವು ಫಲಾನುಭವಿಗಳಾಗಿದ್ದರೆ ನಿಮಗೆ ಮುಂದಿನ ತಿಂಗಳಿನಿಂದ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡಿದರೆ ಉಚಿತ ವಿದ್ಯುತ್ತು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮಾರ್ಚ್ ತಿಂಗಳ ರದ್ದಾದ ಬಿಪಿಎಲ್ ಕಾರ್ಡ್ ಲಿಸ್ಟ್ ಬಿಡುಗಡೆ! ಯಾವುದೇ ಬೆನಿಫಿಟ್ ಸಿಗೋಲ್ಲ

Know How to submit new application for Gruha Jyothi Yojana Free electricity

Follow us On

FaceBook Google News

Know How to submit new application for Gruha Jyothi Yojana Free electricity