ರೈತರಿಗೆ ಗುಡ್ ನ್ಯೂಸ್! ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಬ್ಸಿಡಿ; ಅರ್ಜಿ ಸಲ್ಲಿಸಿ

ರೈತರಿಗೆ ಸೋಲಾರ್ ಪಂಪ್ ಸೆಟ್ (solar pump set installation) ಅಳವಡಿಸಿಕೊಳ್ಳಲು ಜಾರಿಗೆ ಬಂದಿರುವ ಯೋಜನೆ ಕುಸುಮ್ ಬಿ ಯೋಜನೆ!

Bengaluru, Karnataka, India
Edited By: Satish Raj Goravigere

ರೈತ (farmers) ರ ಪರವಾಗಿ ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ಜಾರಿಗೆ ತಂದರೆ, ದೇಶದ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ ಎನ್ನುವುದು ಒಂದು ಮೂಲಭೂತ ಪರಿಕಲ್ಪನೆ.

ಯಾಕೆಂದರೆ ದೇಶದ ಬೆನ್ನೆಲುಬು ರೈತ. ಆತನ ಪರಿಸ್ಥಿತಿ ಸುಧಾರಣೆಯಾದರೆ ದೇಶವು ಕೂಡ ಉದ್ಧಾರವಾಗುತ್ತದೆ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇರಬಹುದು ಅಥವಾ ರಾಜ್ಯ ಸರ್ಕಾರ ಇರಬಹುದು ರೈತರಿಗೆ ಅನುಕೂಲವಾಗುವಂತಹ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದು ರೈತರು ಅದರ ಸದುಪಯೋಗಪಡಿಸಿಕೊಳ್ಳುವಂತೆ ಮಾಡುತ್ತವೆ.

Apply for Free Solar Pump Set Scheme for Your agricultural land

ಈ ಮಹಿಳೆಯರಿಗೆ ಜಮಾ ಆಗಿಲ್ಲ ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ! ಕಾರಣ ಇಲ್ಲಿದೆ

ಕೇಂದ್ರದಿಂದ ಕೃಷಿ ಕಾರ್ಮಿಕರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳು ಇವೆ. ಅದೇ ರೀತಿ ರಾಜ್ಯ ಸರ್ಕಾರ ಕೂಡ ರಾಜ್ಯದಲ್ಲಿ ವಾಸಿಸುವ ರೈತ ಸಮುದಾಯದವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ.

ಇದೀಗ ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಲಾಗಿದ್ದು ಈಗಾಗಲೇ ಇರುವ ಯೋಜನೆಗೆ ಯೋಜನೆಯನ್ನು ಸೇರಿಸಿ ರೈತರಿಗೆ ಹೆಚ್ಚಿನ ಪ್ರಯೋಜನ ಸಿಗುವಂತೆ ಮಾಡಲಾಗುವುದು. ಅದುವೇ ರೈತರಿಗೆ ಸೋಲಾರ್ ಪಂಪ್ ಸೆಟ್ (solar pump set installation) ಅಳವಡಿಸಿಕೊಳ್ಳಲು ಜಾರಿಗೆ ಬಂದಿರುವ ಯೋಜನೆ ಕುಸುಮ್ ಬಿ ಯೋಜನೆ!

ಮಾರ್ಚ್ ತಿಂಗಳ ರದ್ದಾದ ಬಿಪಿಎಲ್ ಕಾರ್ಡ್ ಲಿಸ್ಟ್ ಬಿಡುಗಡೆ! ಯಾವುದೇ ಬೆನಿಫಿಟ್ ಸಿಗೋಲ್ಲ

ಏನಿದು ಕುಸುಮ್ ಬಿ ಯೋಜನಾ? (Kusum B solar pump set scheme)

solar water pumpರೈತರು ತಮ್ಮ ಜಮೀನಿಗೆ ನೀರಾವರಿ (irrigation) ಸೌಲಭ್ಯವನ್ನು ಒದಗಿಸಿಕೊಳ್ಳುವ ಸಲುವಾಗಿ ಸೋಲಾರ್ ಪಂಪ್ ಸೆಟ್ ಖರೀದಿ ಮಾಡಲು ಸರ್ಕಾರ ಸಬ್ಸಿಡಿ (subsidy) ಯನ್ನು ನೀಡುತ್ತದೆ ಅರ್ಧದಷ್ಟು ಹಣವನ್ನು ಸರ್ಕಾರ ಪಾವತಿ ಮಾಡಿದ್ರೆ ಉಳಿದ ಹಣವನ್ನು ರೈತರು ಪಾವತಿ ಮಾಡಬೇಕು.

ಈಗಾಗಲೇ ವಿದ್ಯುತ್ (electricity) ಅಭಾವ ರಾಜ್ಯದಲ್ಲಿ ಹೆಚ್ಚಾಗಿದೆ ಹಾಗಾಗಿ ಸೋಲಾರ್ ಬಳಕೆ ಮಾಡುವುದರ ಮೂಲಕ ರೈತರು ವಿದ್ಯುತ್ ಉಳಿತಾಯ ಮಾಡಬಹುದು ಎನ್ನುವ ಕಾರಣಕ್ಕೆ ಮತ್ತೆ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ರೈತರನ್ನ ಪ್ರೋತ್ಸಾಹಿಸಲಾಗುತ್ತಿದೆ.

ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ಮಾತ್ರ ಜಮೆ ಆಗಲಿದೆ!

ಇದಕ್ಕಾಗಿ ಕುಸುಮ್ ಬಿ ಯೋಜನೆಯ ಅಡಿಯಲ್ಲಿ ರೈತರಿಗೆ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಳ್ಳಲು ಈಗ ನೀಡಲಾಗುತ್ತಿರುವ 30% ನಷ್ಟು ಸಬ್ಸಿಡಿ ಬದಲು 50% ಸಬ್ಸಿಡಿ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ (minister KJ George) ತಿಳಿಸಿದ್ದಾರೆ.

ಈ ರೀತಿ ಸಬ್ಸಿಡಿಯನ ಹೆಚ್ಚಿಸುವುದರಿಂದ ರೈತರು ಸುಲಭವಾಗಿ ತಮ್ಮ ಜಮೀನಿನಲ್ಲಿ ಸೋಲಾರ್ ಪ್ಯಾನಲ್ (solar panel) ಗಳನ್ನು ಅಳವಡಿಸಿಕೊಂಡು ಆ ಮೂಲಕ ಸೋಲಾರ್ ವಿದ್ಯುತ್ ತಯಾರಿಸಿ ಪಂಪ್ ಸೆಟ್ ಗಳನ್ನು ಅಳವಡಿಸಿಕೊಂಡು ಸುಲಭವಾಗಿ ತಮ್ಮ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಸರಬರಾಜು ಮಾಡಿಕೊಳ್ಳಬಹುದು.

ರಾಜ್ಯ ಸರ್ಕಾರದ ಅತ್ಯುತ್ತಮ ಯೋಜನೆ ಇದಾಗಿದ್ದು ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಹಾಗೂ ಇನ್ನೂ ಸಬ್ಸಿಡಿಯನ್ನು ಹೆಚ್ಚಿಸಿದರೆ ಮತ್ತಷ್ಟು ರೈತರಿಗೆ ಸೋಲಾರ್ ಪಂಪ್ಸೆಟ್ ಅನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಗೃಹಜ್ಯೋತಿ ಫ್ರೀ ವಿದ್ಯುತ್! ರಾತ್ರೋರಾತ್ರಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ

50 Percent subsidy for purchase of pump set