ಮಾರ್ಚ್ ತಿಂಗಳ ರೇಷನ್ ಹಾಗೂ ಅನ್ನಭಾಗ್ಯ ಯೋಜನೆ ಹಣ ಜಮಾ! ಚೆಕ್ ಮಾಡಿಕೊಳ್ಳಿ
ಅಕ್ಕಿ ಕೊಡಲು ಸಾಧ್ಯವಾಗದೇ ಇದ್ದರೂ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170 ಗಳನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುತ್ತಿದೆ ಸರ್ಕಾರ.
ರಾಜ್ಯ ಸರ್ಕಾರ (State government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ (Annabhagya scheme) ಕೂಡ ಒಂದು ಮಹತ್ತರವಾದ ಯೋಜನೆ ಆಗಿದೆ. ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಕಾರ್ಡ್ (BPL card) ಅನ್ನು ಒದಗಿಸಿ ಉಚಿತವಾಗಿ ಪಡಿತರ (free ration) ವನ್ನು ನೀಡುತ್ತಿದೆ. ರಾಜ್ಯ ಸರ್ಕಾರ ಇದರ ಜೊತೆಗೆ ಇನ್ನೂ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ಉಚಿತವಾಗಿ ನೀಡುವ ಭರವಸೆಯನ್ನು ನೀಡಿತ್ತು.
ಆದರೆ ಅಕ್ಕಿ ದಾಸ್ತಾನು ರಾಜ್ಯ ಸರ್ಕಾರದ ಬಳಿ ಬೇಕಾದಷ್ಟು ಇಲ್ಲದೆ ಇರುವ ಕಾರಣ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ಇದುವರೆಗೆ ಒದಗಿಸಲು ಸಾಧ್ಯವಾಗಿಲ್ಲ. ಹಾಗಂದ ಮಾತ್ರಕ್ಕೆ ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಕೇವಲ ಭರವಸೆಯನ್ನು ಮಾತ್ರ ಕೊಟ್ಟಿದೆ ಎನ್ನುವ ಹಾಗಿಲ್ಲ, ಯಾಕಂದ್ರೆ ಅಕ್ಕಿ ಕೊಡಲು ಸಾಧ್ಯವಾಗದೇ ಇದ್ದರೂ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170 ಗಳನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುತ್ತಿದೆ.
ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಇಂಥವರಿಗೆ ಮಾತ್ರ ಜಮಾ! ಬಿಗ್ ಅಪ್ಡೇಟ್
ಹೌದು, ರಾಜ್ಯ ಸರ್ಕಾರ ಕಳೆದ ಆರು ತಿಂಗಳುಗಳಿಂದ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿ ಬಿ ಟಿ (DBT) ಮಾಡುತ್ತಿದೆ ಇದೀಗ ಮಾರ್ಚ್ ತಿಂಗಳಿನಲ್ಲಿ 7ನೇ ಕಂತಿನ ಅನ್ನ ಭಾಗ್ಯ ಯೋಜನೆಯ ಹಣ ಬಿಡುಗಡೆ ಆಗಲಿದೆ.
ಪಡಿತರ ವಿತರಣೆಯ ಜೊತೆಗೆ ಐದು ಕೆಜಿ ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದು. ಸಾಕಷ್ಟು ಜನ ನಮಗೆ ದುಡ್ಡು ಬೇಡ ಅದರ ಬದಲು ಅಕ್ಕಿಯನ್ನೇ ವಿತರಣೆ ಮಾಡಿ ಎಂದು ರಾಜ್ಯ ಸರ್ಕಾರದ ಬಳಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಬೇರೆ ರಾಜ್ಯಗಳಲ್ಲಿಯೂ ಕೂಡ ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಆದರೆ ಅದು ಸಾಧ್ಯವಾಗಿಲ್ಲ. ಇನ್ನು ಅಕ್ಕಿಯ ಬದಲು ಬೇರೆ ದವಸ ಧಾನ್ಯಗಳನ್ನು ನೀಡಲು ಕೂಡ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದೆ.
ಆದರೆ ರಾಜ್ಯ ಸರ್ಕಾರಕ್ಕೆ ಈಗಲೂ ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿಯೂ ಕೂಡ ಉಚಿತ ಪಡಿತರದ ಜೊತೆಗೆ ಐದು ಕೆಜಿ ಅಕ್ಕಿಯ ಬದಲು ಹಣವನ್ನೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು.
ರೇಷನ್ ಕಾರ್ಡ್ ಇರೋರಿಗೆ ಬಿಗ್ ಅಪ್ಡೇಟ್! ಹೊಸ ಅರ್ಜಿ ಸಲ್ಲಿಸಲು ಕಂಡೀಷನ್
ನಿಮ್ಮ DBT ಸ್ಟೇಟಸ್ ಚೆಕ್ ಮಾಡಿ! (Check your DBT status)
ಮಾರ್ಚ್ 15ನೇ ತಾರೀಖಿನ ಒಳಗೆ ಫಲಾನುಭವಿಗಳ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುವ ನಿರೀಕ್ಷೆ ಇದೆ. ಇನ್ನು ಸಾಕಷ್ಟು ಫಲಾನುಭವಿಗಳ ರೇಷನ್ ಕಾರ್ಡ್ ರದ್ದಾಗಿರುವ ಹಿನ್ನೆಲೆಯಲ್ಲಿ ಹಲವರಿಗೆ ಅನ್ನ ಭಾಗ್ಯ ಯೋಜನೆಯ ಹಣ ಆಗದೆ ಇರಬಹುದು. ನೀವು ನಿಮ್ಮ ಅನ್ನಭಾಗ್ಯ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು,
ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಿರಿ
* https://www.karnataka.gov.in/ ಆಹಾರ ಇಲಾಖೆಯ ಈ ವೆಬ್ಸೈಟ್ಗೆ ಭೇಟಿ ನೀಡಿ
* ಎಡಭಾಗದಲ್ಲಿ ಕಾಣಿಸುವ ಮೂರು ಲೈನ್ ಮೇಲೆ ಕ್ಲಿಕ್ ಮಾಡಿ
* ಈ ಸರ್ವಿಸ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
* DBT ಸ್ಟೇಟಸ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ
* ಈಗ ಹೊಸ ಫೋಟೋ ತೆಗೆದುಕೊಳ್ಳುತ್ತದೆ. ಅದರಲ್ಲಿ ನೀವು ಯಾವ ತಿಂಗಳ ಡಿ ಬಿ ಟಿ ಸ್ಟೇಟಸ್ ತಿಳಿದುಕೊಳ್ಳಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
* ಬಳಿಕ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಗೋ ಎಂದು ಕ್ಲಿಕ್ ಮಾಡಿ
* ಈಗ ನೀವು ಯಾವ ತಿಂಗಳನ್ನು ಆಯ್ಕೆ ಮಾಡಿದ್ದೀರೋ, ಆ ತಿಂಗಳಿನಲ್ಲಿ ನಿಮ್ಮ ಖಾತೆಗೆ ಅನ್ನ ಭಾಗ್ಯ ಹಣ ಜಮಾ ಆಗಿದ್ವು ಎಲ್ಲವೂ ಎಂಬುದು ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಜಮಾ ಆಗಿದ್ದರೆ ಯಾವ ಸದಸ್ಯರಿಗೆ ಎಷ್ಟು ಹಣ, ಯಾವಾಗ ಜಮಾ ಆಗಿದೆ ಎನ್ನುವ ಪ್ರತಿಯೊಂದು ವಿವರವನ್ನು ನೀವು ಕಾಣಬಹುದು.
Ration and Annabhagya Yojana money deposit for the month of March