ಇನ್ಮುಂದೆ ಗೃಹಲಕ್ಷ್ಮಿ ಹಣ ಇಂತಹ ಮಹಿಳೆಯರ ಖಾತೆಗೆ ಜಮಾ ಆಗೋದಿಲ್ಲ; ಇಲ್ಲಿದೆ ಕಾರಣ
ತಾಂತ್ರಿಕ ದೋಷ (technical error) ದಿಂದ ಕೆಲವು ಮಹಿಳೆಯರ ಖಾತೆಗೆ (Bank Account) ಗೃಹಲಕ್ಷ್ಮಿ ಹಣ ಬಂದಿಲ್ಲ.
ರಾಜ್ಯದಲ್ಲಿ ವಾಸಿಸುವ ಮಹಿಳೆಯರ ಸಬಲೀಕರಣ (women empowerment) ಕ್ಕಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಜಾರಿಗೆ ತಂದಿದೆ.
ಈ ಯೋಜನೆಯ ಅಡಿಯಲ್ಲಿ 1.7 ಕೋಟಿ ಮಹಿಳೆಯರು ಪ್ರತಿ ತಿಂಗಳು 2000 ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಹಾಗಾದ್ರೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಮಹಿಳೆಯ ಖಾತೆಗೂ ಹಣ ವರ್ಗಾವಣೆ ಆಗುತ್ತಿದೆಯಾ ಎನ್ನುವ ಪ್ರಶ್ನೆ ಬಂದ್ರೆ ಖಂಡಿತವಾಗಿಯೂ ಇಲ್ಲ ಎನ್ನಬಹುದು
ಇದುವರೆಗೆ ಸುಮಾರು ಎಂಟು ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಹಾಗಾದ್ರೆ ಇದಕ್ಕೆ ಪ್ರಮುಖ ಕಾರಣಗಳು ಏನು ಎಂಬುದನ್ನು ನೋಡೋಣ.
ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಅಪ್ಡೇಟ್; ಸಿಗಲಿದೆ ಹೊಸ ಕಾರ್ಡ್!
ಗೃಹಲಕ್ಷ್ಮಿ ಹಣ ಈ ಕಾರಣಕ್ಕೆ ನಿಮ್ಮ ಖಾತೆಗೆ ಬರುತ್ತಿಲ್ಲ!
* ಎಲ್ಲ ಮಾಹಿತಿಗಳು ಸರಿಯಾಗಿಯೇ ಇದ್ದರೂ ಕೂಡ ತಾಂತ್ರಿಕ ದೋಷ (technical error) ದಿಂದ ಕೆಲವು ಮಹಿಳೆಯರ ಖಾತೆಗೆ (Bank Account) ಹಣ ಬಂದಿಲ್ಲ.
* ಅರ್ಹತೆ ಪರಿಶೀಲನೆಯ ಸಂದರ್ಭದಲ್ಲಿ ಕೆಲವು ಫಲಾನುಭವಿಗಳ ಹೆಸರು ಕೂಡ ಅನರ್ಹರ ಪಟ್ಟಿಯಲ್ಲಿ ಸೇರಿಕೊಂಡಿದೆ. ಅಂತಹ ಮಹಿಳೆಯರಿಗೆ ಹಣ ಜಮಾ ಆಗಿಲ್ಲ.
* E-KYC ಹಾಗೂ ಎನ್ ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳದೆ ಇರುವ ಕಾರಣ ಹಣ ಬಂದಿಲ್ಲ.
* ರೇಷನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ವಿವರ ಒಂದೇ ರೀತಿಯಾಗಿ ಇಲ್ಲದೆ ಇರುವ ಕಾರಣ ಹಣ ಬಂದಿಲ್ಲ.
ಮಾರ್ಚ್ ತಿಂಗಳ ರೇಷನ್ ಹಾಗೂ ಅನ್ನಭಾಗ್ಯ ಯೋಜನೆ ಹಣ ಜಮಾ! ಚೆಕ್ ಮಾಡಿಕೊಳ್ಳಿ
ಹಣ ಬರುವಂತೆ ಮಾಡಲು ಏನು ಮಾಡಬೇಕು?
ಮಹಿಳೆಯರು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿಕೊಳ್ಳುವುದಕ್ಕಿಂತ ಹತ್ತಿರದ ಸಿಡಿಪಿಓ ಕಚೇರಿ (CDPO office) ಗೆ ನಿಮ್ಮ ಅರ್ಜಿ ಕುರಿತ ಮಾಹಿತಿ ಹಾಗೂ ಇತರ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ನಿಮ್ಮ ಸಮಸ್ಯೆ ಏನು ಎಂಬುದನ್ನು ನೋಡಿ ಅಧಿಕಾರಿಗಳು ಸೂಕ್ತ ಪರಿಹಾರ ಸೂಚಿಸುತ್ತಾರೆ.
ಇನ್ನು ಎರಡನೆಯದಾಗಿ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಸಹಾಯಕರು ಮನೆ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆಯನ್ನು ಕೇಳುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಕೂಡ ಲಭ್ಯರಿದ್ದು ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಇಂಥವರಿಗೆ ಮಾತ್ರ ಜಮಾ! ಬಿಗ್ ಅಪ್ಡೇಟ್
ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳುವುದು ಹೇಗೆ?
*ಮಹಿಳೆಯರು ರಾಜ್ಯ ಸರ್ಕಾರ ಹೊಸದಾಗಿ ಆರಂಭಿಸಿರುವ DBT Karnataka mobile ಅಪ್ಲಿಕೇಶನ್ ಮೂಲಕ ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಾಲ್ಕು ಅಂಕೆಗಳ mPIN ನಮೂದಿಸಿ.
ಈಗ ನಿಮ್ಮ ಖಾತೆಗೆ ಸರ್ಕಾರದಿಂದ ಯಾವುದೇ ಡಿ ಬಿ ಟಿ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ಪಡೆಯಬಹುದು.
ಇನ್ನು ಎರಡನೆಯದಾಗಿ https://sevasindhu.karnataka.gov.in/Gruha_lakshmi_DBT/Tracker_Eng ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸಂಧ್ಯಾ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳಬಹುದು.
ರೇಷನ್ ಕಾರ್ಡ್ ಇರೋರಿಗೆ ಬಿಗ್ ಅಪ್ಡೇಟ್! ಹೊಸ ಅರ್ಜಿ ಸಲ್ಲಿಸಲು ಕಂಡೀಷನ್
ಈ ಮಾರ್ಗಗಳನ್ನು ಹೊರತುಪಡಿಸಿ ನೀವು ಬ್ಯಾಂಕ್ ಗೆ ನೇರವಾಗಿ ಹೋಗಿ ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯೊ ಇಲ್ಲವೋ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನೇನು ಸದ್ಯದಲ್ಲಿಯೇ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬಿಡುಗಡೆ (Money Deposit) ಆಗಲಿದ್ದು, ಬಹುತೇಕ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣ ವರ್ಗಾವಣೆ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ.
Gruha Lakshmi Scheme money will not be deposited for such People