ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಇನ್ನೊಂದೆಡೆ ಅಕ್ರಮ ರೇಷನ್ ಕಾರ್ಡ್ ಕ್ಯಾನ್ಸಲ್

ಒಂದು ಕಡೆ ರೇಷನ್ ಕಾರ್ಡ್ ರದ್ದುಪಡಿ, ಇನ್ನೊಂದು ಕಡೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ

ರೇಷನ್ ಕಾರ್ಡ್ (Ration Card) ಗೆ ಸಂಬಂಧಪಟ್ಟ ಹಾಗೆ ಸರ್ಕಾರದಿಂದ ಮತ್ತೊಂದು ಹೊಸ ಅಪ್ಡೇಟ್ ಸಿಕ್ಕಿದೆ. ಒಂದು ಕಡೆ ರೇಷನ್ ಕಾರ್ಡ್ ರದ್ದುಪಡಿ ಬಿಸಿ ಜನರನ್ನ ತಟ್ಟಿದರೆ ಇನ್ನೊಂದು ಕಡೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿರುವವರಿಗೆ ರೇಷನ್ ಕಾರ್ಡ್ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.

ಜೊತೆಗೆ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ಇನ್ಮುಂದೆ ಗೃಹಲಕ್ಷ್ಮಿ ಹಣ ಇಂತಹ ಮಹಿಳೆಯರ ಖಾತೆಗೆ ಜಮಾ ಆಗೋದಿಲ್ಲ; ಇಲ್ಲಿದೆ ಕಾರಣ

ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಇನ್ನೊಂದೆಡೆ ಅಕ್ರಮ ರೇಷನ್ ಕಾರ್ಡ್ ಕ್ಯಾನ್ಸಲ್ - Kannada News

ಇಂಥವರ ರೇಷನ್ ಕಾರ್ಡ್ ರದ್ದು!

ರೇಷನ್ ಕಾರ್ಡ್ ವಿತರಣೆ (ration card distribution) ಮಾಡುವುದು ಬಡತನ ರೇಖೆಗಿಂತ ಕೆಳಗಿರುವವರು (below poverty line) ಉಚಿತವಾಗಿ ಪಡಿತರ ವಸ್ತುಗಳನ್ನ ಪಡೆದುಕೊಳ್ಳಲಿ ಹಾಗೂ ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಸಿಗುವಂತೆ ಆಗಲಿ ಎನ್ನುವ ಕಾರಣಕ್ಕೆ ಆದರೆ ನಿಜವಾಗಿ ಯಾರೂ ಫಲಾನುಭವಿಗಳೋ ಅವರಿಗಿಂತ, ಉಳ್ಳವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ.

ಅಷ್ಟೇ ಅಲ್ಲ ಕಳೆದ ಆರು ತಿಂಗಳುಗಳಿಂದ ಪಡೆದುಕೊಂಡಿಲ್ಲ. ಬದಲಿಗೆ ಇತರ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದು ಈಗ ಸರ್ಕಾರದ ಗಮನಕ್ಕೆ ಬಂದಿದ್ದು ಹೀಗೆ ಸರ್ಕಾರಕ್ಕೆ ಯಾರು ವಂಚನೆ ಮಾಡುತ್ತಿದ್ದಾರೋ ಅವರನ್ನು ಗುರುತಿಸಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ಈಗಾಗಲೇ ಲಕ್ಷಾಂತರ ಪಡಿತರ ಚೀಟಿ ರದ್ದುಪಡಿ ಮಾಡಲಾಗಿದೆ.

ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಅಪ್ಡೇಟ್; ಸಿಗಲಿದೆ ಹೊಸ ಕಾರ್ಡ್!

ಮಾರ್ಚ್ ತಿಂಗಳಿನಲ್ಲಿ ಪಡಿತರ ಚೀಟಿ ರದ್ದುಪಡಿಯಾಗಿದೆ!

ಸಾಕಷ್ಟು ಜನ ತಮ್ಮ ಬಿಪಿಎಲ್ ಕಾರ್ಡ್ (BPL card) ಅನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿಂದೆ ನಿಮಗೆ ಗ್ಯಾರಂಟಿ ಯೋಜನೆಯ ಹಣ ನಿಮ್ಮ ಖಾತೆಗೆ (Bank Account) DBT ಆಗಿದ್ದರೂ ಕೂಡ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ರೆ ಇನ್ನು ಮುಂದೆ ಗ್ಯಾರಂಟಿಯ ಹಣ ನಿಮಗೆ ಬರುವುದಿಲ್ಲ. ಸಾಕಷ್ಟು ಜನ ಸರ್ಕಾರಕ್ಕೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಅಂಥವರ ರೇಷನ್ ಕಾರ್ಡ್ ರದ್ದು ಪಡಿಸಲಾಗಿದೆ.

BPL Ration Cardರೇಷನ್ ಕಾರ್ಡ ರದ್ದು ಪಡಿ ಆಗಿದೆಯಾ ತಿಳಿದುಕೊಳ್ಳುವುದು ಹೇಗೆ?

https://ahara.kar.nic.in/ ಈ ವೆಬ್ಸೈಟ್ಗೆ ಹೋಗಿ ಎಡ ಭಾಗದಲ್ಲಿ ಕಾಣುವ ಮೂರು ಲೈನ್ ಗಳ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಈ ಪಡಿತರ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ಬಳಿಕ ರದ್ದುಪಡಿಸಲಾದ ಅಥವಾ ತಡೆಹಿಡಿಯಲಾದ ಪಡಿತರ ಚೀಟಿ ಎನ್ನುವ ಆಯ್ಕೆ ಕಾಣಿಸುತ್ತದೆ.

ಅದನ್ನು ಕ್ಲಿಕ್ ಮಾಡಿ. ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಹಾಗೂ ಅದರಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಜಿಲ್ಲೆ ತಾಲೂಕು ನಮೂದಿಸಿದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ನಿಮ್ಮ ಗ್ರಾಮದ ಯಾರ ರೇಷನ್ ಕಾರ್ಡ್ ರದ್ದಾಗಿದೆ ಎನ್ನುವ ಮಾಹಿತಿಯನ್ನು ನೀವು ನೋಡಬಹುದು.

ಮಾರ್ಚ್ ತಿಂಗಳ ರೇಷನ್ ಹಾಗೂ ಅನ್ನಭಾಗ್ಯ ಯೋಜನೆ ಹಣ ಜಮಾ! ಚೆಕ್ ಮಾಡಿಕೊಳ್ಳಿ

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅವಕಾಶ!

ಒಂದಷ್ಟು ಜನ ಬಿಪಿಎಲ್ ರೇಷನ್ ಕಾರ್ಡ್ ರದ್ದುಪಡಿ ಆದ ಬೇಸರದಲ್ಲಿ ಇದ್ರೆ, ಇನ್ನೊಂದಿಷ್ಟು ಜನರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ ಮಾರ್ಚ್ ತಿಂಗಳ ಕೊನೆಯ ದಿನಾಂಕದ ಒಳಗೆ ರೇಷನ್ ಕಾರ್ಡ್ ಪರಿಶೀಲನೆ ನಡೆಸಿ ಏಪ್ರಿಲ್ ತಿಂಗಳಿನಿಂದ ಹೊಸ ಆದ್ಯತಾ ಪಡಿತರ ಚೀಟಿ ವಿತರಣೆ ಮಾಡಲಾಗುವುದು.

ಅಷ್ಟು ಮಾತ್ರವಲ್ಲದೆ ಈಗಾಗಲೇ ಪಡಿತರ ಚೀಟಿ ಹೊಂದಿದ್ದು ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಅಗತ್ಯ ಇರುವ ತಿದ್ದುಪಡಿಯನ್ನು ಕೂಡ ನೀವು ರೇಷನ್ ಕಾರ್ಡ್ ನಲ್ಲಿ ಮಾಡಿಕೊಳ್ಳಲು ಅವಕಾಶವಿದೆ.

ಇದಕ್ಕಾಗಿ ನೀವು ಹತ್ತಿರದ ಗ್ರಾಮ ಒನ್, ಬಾಪೂಜಿ ಕೇಂದ್ರ ಮೊದಲಾದ ಸೇವಾ ಕೇಂದ್ರಗಳಿಗೆ ಹೋಗಬೇಕು ಅಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು ಆದರೆ ಬೇರೆ ಯಾವುದೇ ಸೈಬರ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ.

ಸರ್ಕಾರದಿಂದ ಉಚಿತ ಮನೆಗಳ ಹಂಚಿಕೆ! 36,789 ಕುಟುಂಬಗಳಿಗೆ ಸಿಹಿ ಸುದ್ದಿ

ಒಟ್ಟಿನಲ್ಲಿ ಇಲ್ಲಿಯವರೆಗೆ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ (Annabhagya scheme) ಅಥವಾ ಗೃಹಲಕ್ಷ್ಮಿ ಯೋಜನೆಯಿಂದ ಯಾರು ವಂಚಿತರಾಗಿದ್ದಾರೆ ಅಂತವರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಿ ಮುಂದಿನ ದಿನಗಳಲ್ಲಿ ಅವರ ಖಾತೆಗೂ ಸರ್ಕಾರ ಉಚಿತ ಯೋಜನೆಗಳ ಹಣ ಡಿ ಬಿ ಟಿ ಮಾಡಲಿದೆ.

Apply for new ration card and ration card cancellation

Follow us On

FaceBook Google News