ಸರ್ಕಾರದಿಂದ ಉಚಿತ ಮನೆಗಳ ಹಂಚಿಕೆ! 36,789 ಕುಟುಂಬಗಳಿಗೆ ಸಿಹಿ ಸುದ್ದಿ

ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸ್ವಂತ ಮನೆ (Own House) ಕನಸು ನನಸಾಗಿಸಲು ಹೊರಟಿದ್ದಾರೆ.

ರಾಜ್ಯದಲ್ಲಿ ವಾಸಿಸುವ ಬಡ ಜನರಿಗೆ ರಾಜ್ಯ ಸರ್ಕಾರದ ವಸತಿ ಯೋಜನೆ (Housing scheme) ಯ ಅಡಿಯಲ್ಲಿ ಉಚಿತ ಮನೆ ವಿತರಣೆ ಕಾರ್ಯ ನಡೆಯಲಿದೆ ಜನರ ಭರವಸೆ ಹಾಗೂ ಆಶಾಕಿರಣ ಆಗಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸ್ವಂತ ಮನೆ (Own House) ಕನಸು ನನಸಾಗಿಸಲು ಹೊರಟಿದ್ದಾರೆ.

ರಾಜ್ಯದಲ್ಲಿ ವಾಸಿಸುವ ಸುಮಾರು 36,789 ಕುಟುಂಬಗಳು ಇಂದು ಸ್ವಂತ ಸೂರು ಕಾಣುವಂತೆ ಆಗಿದೆ. ಮಾರ್ಚ್ 3 2024ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಉಚಿತ ಮನೆ ವಿತರಣೆ ಉಪಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಇಂಥವರಿಗೆ ಮಾತ್ರ ಜಮಾ! ಬಿಗ್ ಅಪ್ಡೇಟ್

ಸರ್ಕಾರದಿಂದ ಉಚಿತ ಮನೆಗಳ ಹಂಚಿಕೆ! 36,789 ಕುಟುಂಬಗಳಿಗೆ ಸಿಹಿ ಸುದ್ದಿ - Kannada News

ಪ್ರಧಾನ ಮಂತ್ರಿ ಆವಾಸ್ ಯೋಜನೆ! (Pradhanmantri aawas Yojana)

ಸರ್ವರಿಗೂ ಸೂರು ನಿರ್ಮಾಣ ಮಾಡಿಕೊಡುವ ಸಲುವಾಗಿ 2022 ರಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಿತ್ತು. ಇದರ ಜೊತೆಗೆ ರಾಜ್ಯ ಸರ್ಕಾರದ ಅನುದಾನವು ಸೇರಿ ಇಂದು ಸಾಕಷ್ಟು ಕುಟುಂಬಗಳು ಉಚಿತ ಮನೆ ಪಡೆದುಕೊಳ್ಳಲು ಸಾಧ್ಯವಾಗಿದೆ.

36,789 ಮನೆಗಳಲ್ಲಿ 27,744 ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 9,045 ನಗರ ಪ್ರದೇಶಗಳಲ್ಲಿ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ವಿತರಣೆ ಮಾಡುವುದು ಈ ಯೋಜನೆಯ ಉದ್ದೇಶ.

ಯಾರಿಗೆ ಸಿಗಲಿದೆ ರಾಜ್ಯ ಸರ್ಕಾರದ ಉಚಿತ ಮನೆ?

ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು. ಈಗಾಗಲೇ ಸ್ವಂತ ಮನೆ ಅಥವಾ ನಿವೇಷನ ಹೊಂದಿದ್ದರೆ ಅಂತವರಿಗೆ ಉಚಿತ ಮನೆ ಸಿಗುವುದಿಲ್ಲ. ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿಯಲ್ಲಿ ಇದ್ದರೆ ಅಂತವರಿಗೆ ಈ ಯೋಜನೆಯ ಸೌಲಭ್ಯ ಲಭ್ಯವಿಲ್ಲ. ಗ್ರಾಮ ಪಂಚಾಯತ್, ನಗರಸಭೆ ಅಥವಾ ಪುರಸಭೆಯಿಂದ ಈ ಮನೆಗಳ ವಿತರಣೆ ಮಾಡಲಾಗುತ್ತದೆ.

ರೇಷನ್ ಕಾರ್ಡ್ ಇರೋರಿಗೆ ಬಿಗ್ ಅಪ್ಡೇಟ್! ಹೊಸ ಅರ್ಜಿ ಸಲ್ಲಿಸಲು ಕಂಡೀಷನ್

Free Housing Schemeಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ 1.20 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ (subsidy), ಹಾಗೂ ನಗರ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ 2.50 ಲಕ್ಷ ರೂಪಾಯಿಗಳ ಸಹಾಯದಿಂದ ಸಿಗುತ್ತದೆ. ಈ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ.

ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಿರಿ

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ಇರಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ಪ್ರತಿಯೊಂದು ರಾಜ್ಯದಲ್ಲಿಯೂ ಕೂಡ ವಸತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಇದಕ್ಕೆ ಕರ್ನಾಟಕ ರಾಜ್ಯವು ಕೂಡ ಹೊರತಾಗಿಲ್ಲ.

ರಾಜ್ಯ ಸರ್ಕಾರದ ಸಹಕಾರದಿಂದ ಕೇಂದ್ರ ಸರ್ಕಾರದ ಈ ಯೋಜನೆ ಸಾಕಷ್ಟು ಜನರಿಗೆ ಸಹಕಾರಿ ಆಗಬಹುದು. ಇನ್ನು ವಸತಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು https://pmaymis.gov.in/ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ ಗ್ರಾಮ ಪಂಚಾಯತ್ ನಗರಸಭೆ ಹಾಗೂ ಪುರಸಭೆಯಲ್ಲಿ ಮಾಹಿತಿ ಪಡೆಯಬಹುದು.

Allotment of free houses by the government, Good news for 36,789 families

Follow us On

FaceBook Google News

Allotment of free houses by the government, Good news for 36,789 families