ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಆರಂಭ; ಹಣ ಬಂದಿದ್ಯಾ ಚೆಕ್ ಮಾಡಿಕೊಳ್ಳಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ (Annabhagya Yojana) ಕೂಡ ಒಂದಾಗಿದೆ. ಈ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು ೫ ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.
ಇದು ಸಾಧ್ಯವಾಗದ ಕಾರಣ ಪ್ರತಿ ಕೆ.ಜಿ ಅಕ್ಕಿಗೆ ೩೪ ರೂ. ನಂತೆ ೧೭೦ ರೂ.ಗಳನ್ನು ಫಲಾನುಭವಿಯ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿತ್ತು. ಇದೀಗ ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆಯಾಗಿದ್ದು, ಫಲಾನುಭವಿಗಳ ಖಾತೆಗೆ (Bank Account) ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಆಹಾರ ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸಿದ್ಧರಾಮ ಮಾರಿಹಾಳ ತಿಳಿಸಿದ್ದಾರೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದೀರಾ? ಈ ಕಾರಣಕ್ಕೆ ರದ್ದಾಗುತ್ತೆ ನಿಮ್ಮ ಅರ್ಜಿ
ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಹ ಹಾಗೂ ಅನರ್ಹ ಪಡಿತರ ಚೀಟಿದಾರರ (Ration Card Holders) ಹೆಸರನ್ನು ಜಿಲ್ಲಾವಾರು ಬಿಡುಗಡೆ ಮಾಡಲಾಗಿದೆ. ಅದನ್ನು ಸಹ ಪರಿಶೀಲನೆ ಮಾಡಿಕೊಳ್ಳಬಹುದು. ಅರ್ಹರಾದವರಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಡಿತರ ಚೀಟಿ ಅನರ್ಹಗೊಂಡಿದೆಯೋ ಇಲ್ಲವೋ ಎನ್ನುವುದನ್ನು ನೋಡುವುದು ಹೇಗೆ?:
ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ಎಲಿಜಿಬಲ್ ರೇಶನ್ ಕಾರ್ಡ್ ಲಿಸ್ಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಇ-ಸೇವೆಗಳು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು.
ನಂತರ ಇ-ಪಡಿತರ ಚೀಟಿ ಎನ್ನುವ ಆಯ್ಕೆಯ ಮೇಲೆ ಒತ್ತಬೇಕು. ಅಲ್ಲಿಯೇ ಕಾಣುವ ಹಳ್ಳಿ ಪಟ್ಟಿ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಗ್ರಾಮ, ತಾಲೂಕು, ಜಿಲ್ಲೆ ಎಲ್ಲವನ್ನು ನಮೂದು ಮಾಡಬೇಕು. ನಂತರ ಗೋ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಇಷ್ಟು ದಿನ ಆದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ! ಅನ್ನೋರಿಗೆ ಬಿಗ್ ಅಪ್ಡೇಟ್
ಈಗ ನಿಮ್ಮ ಊರಿನ ಎಲ್ಲರ ರೇಶನ್ ಕಾರ್ಡ್ದಾರರ ಹೆಸರು ಕಾಣಿಸುತ್ತದೆ. ಅಲ್ಲಿ ನಿಮ್ಮ ಹೆಸರನ್ನು ಹುಡುಕಿ ಕ್ಲಿಕ್ ಮಾಡಬೇಕು. ಆಗ ಅಲ್ಲಿ ನಿಮ್ಮ ರೇಶನ್ ಕಾರ್ಡ್ ನಂಬರ್ ಕಾಣಿಸಿದರೆ ನಿಮ್ಮ ರೇಶನ್ ಕಾರ್ಡ್ ಅನರ್ಹಗೊಂಡಿಲ್ಲ ಎಂದರ್ಥ.
ಅನರ್ಹ ರೇಶನ್ ಕಾರ್ಡ್ ಪಟ್ಟಿ ನೋಡುವ ವಿಧಾನ:
ಮೊದಲಿಗೆ ಕ್ಯಾನ್ಸಲ್ಡ್ ರೇಶನ್ ಕಾರ್ಡ್ ಲಿಸ್ಟ್ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಇ-ಪಡಿತರ ಚೀಟಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ರದ್ದುಗೊಳಿಸಲಾದ ರೇಶನ್ ಕಾರ್ಡ್ ಲಿಸ್ಟ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಈಗ ನಿಮ್ಮ ಊರು, ಗ್ರಾಮ, ತಾಲೂಕು, ಜಿಲ್ಲೆಯ ಹೆಸರು ನಮೂದಿಸಬೇಕು. ನಂತರ ಮಾರ್ಚ್ ತಿಂಗಳು- ೨೦೨೪ ವರ್ಷ ಆಯ್ಕೆ ಮಾಡಬೇಕು. ನಂತರ ಗೋ ಎನ್ನುವ ಬಟನ್ ಒತ್ತಬೇಕು. ಈಗ ನಿಮ್ಮ ಮುಂದೆ ಅನರ್ಹಗೊಂಡಿರುವವರ ಲಿಸ್ಟ್ ಕಾಣಿಸುತ್ತದೆ. ಈ ಲಿಸ್ಟ್ನಲ್ಲಿ ನಿಮ್ಮ ರೇಶನ್ ಕಾರ್ಡ್ ನಂಬರ ಕಾಣಿಸಿದರೆ ನಿಮಗೆ ಯಾವುದೇ ರೀತಿಯ ಹಣ ಬರುವುದಿಲ್ಲ. ಜೊತೆಗೆ ರೇಶನ್ ಸಹ ಸಿಗುವುದಿಲ್ಲ.
ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಇನ್ನೊಂದೆಡೆ ಅಕ್ರಮ ರೇಷನ್ ಕಾರ್ಡ್ ಕ್ಯಾನ್ಸಲ್
Annabhagya Yojana money Deposit for March, Check Your Bank Account