ಬಿಪಿಎಲ್ ಕಾರ್ಡ್ ಇರೋರಿಗೆ ಗುಡ್ ನ್ಯೂಸ್; ಹೊಸ ಕಾರ್ಡ್ ಜೊತೆಗೆ ಅನ್ನಭಾಗ್ಯ ಹಣ ಜಮಾ!

ಸದ್ಯ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗದೆ ಇದ್ದರೂ ಅದರ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ (DBT) ಮಾಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆ (Annabhagya scheme) ಸರ್ಕಾರ ಜಾರಿಗೆ ತಂದಿರುವ ಒಂದು ಅತ್ಯುತ್ತಮ ಗ್ಯಾರಂಟಿ ಯೋಜನೆ ಎನ್ನಬಹುದು. ಯಾಕೆಂದರೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಅಕ್ಕಿ ವಿತರಣೆ ಮಾಡುವ ಯೋಜನೆ ಇದಾಗಿದೆ.

ಸದ್ಯ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗದೆ ಇದ್ದರೂ ಅದರ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ (DBT) ಮಾಡಲಾಗುತ್ತಿದೆ. ಇನ್ನು ಹೊಸ ಪಡಿತರ ಚೀಟಿ (New Ration Card) ವಿತರಣೆಗೆ ಸಂಬಂಧಪಟ್ಟ ಹಾಗೆ ರಾಜ್ಯ ಸರ್ಕಾರ ಮಹತ್ವದ ಮಾಹಿತಿ ಒಂದನ್ನು ನೀಡಿದೆ.

ಇನ್ಮುಂದೆ ಈ ಮಹಿಳೆಯರು ಎಷ್ಟೇ ಪ್ರಯತ್ನ ಪಟ್ಟರು ಸಿಗೋಲ್ಲ ಗೃಹಲಕ್ಷ್ಮಿ ಯೋಜನೆ ಹಣ

ಬಿಪಿಎಲ್ ಕಾರ್ಡ್ ಇರೋರಿಗೆ ಗುಡ್ ನ್ಯೂಸ್; ಹೊಸ ಕಾರ್ಡ್ ಜೊತೆಗೆ ಅನ್ನಭಾಗ್ಯ ಹಣ ಜಮಾ! - Kannada News

ರೇಷನ್ ಕಾರ್ಡ್ ವಿತರಣೆ! (Ration card distribution)

ಬಡತನ ರೇಖೆಗಿಂತ ಕೆಳಗಿರುವವರು ಆಹಾರ ಧಾನ್ಯವನ್ನು ಸರ್ಕಾರದಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಇದಕ್ಕಾಗಿ ಆದ್ಯತಾ ಪಡಿತರ ಚೀಟಿ ಅಥವಾ ಎ ಎ ವೈ ಪಡಿತರ ಚೀಟಿ ಹೊಂದಿರುವುದು ಕಡ್ಡಾಯ. ಇದರ ಜೊತೆಗೆ ಸಾಮಾನ್ಯ ಗುರುತಿನ ಚೀಟಿಯಾಗಿ ಹಾಗೂ ಸರ್ಕಾರದ ಕೆಲವು ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ಎಪಿಎಲ್ ಕಾರ್ಡ್ ಅನ್ನು ಕೂಡ ವಿತರಣೆ ಮಾಡಲಾಗುವುದು.

ಇದನ್ನು ಬಡತನ ರೇಖೆಗಿಂತ ಮೇಲ್ಪಟ್ಟ ಜನರಿಗೆ ಮಾತ್ರ ಕೊಡಲಾಗುವಂಥದ್ದು. ಎಪಿಎಲ್ ಕಾರ್ಡ್ ಹೊಂದಿದ್ರೆ ಉಚಿತವಾಗಿ ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.

ಇನ್ನು ಹೊಸ ಪಡಿತರ ಚೀಟಿ ವಿತರಣೆ ವಿಚಾರಕ್ಕೆ ಬಂದರೆ ಇಷ್ಟು ದಿನ ಜನರ ಕಾಯುವಿಕೆಗೆ ಈಗ ಒಂದು ಫುಲ್ ಸ್ಟಾಪ್ ಇಡಲು ಹೊರಟಿದೆ ರಾಜ್ಯ ಸರ್ಕಾರ. ಇಷ್ಟು ದಿನ ರೇಷನ್ ಕಾರ್ಡ್ ಇಲ್ಲ ಅಂತ ತಲೆಕೆಡಿಸಿಕೊಂಡಿದ್ದ ಜನರಿಗೆ ಗುಡ್ ನ್ಯೂಸ್ ನೀಡಿದ್ದು, ಏಪ್ರಿಲ್ ಒಂದರಿಂದ ಅಂದರೆ ಇನ್ನೂ 20 ದಿನಗಳ ನಂತರ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅವಕಾಶವಿದೆ.

ಈಗಾಗಲೇ ಅರ್ಜಿ ಸಲ್ಲಿಸಿದ ಮೂರು ಲಕ್ಷಕ್ಕೂ ಹೆಚ್ಚಿನ ಜನರು ಹೊಸ ಪಡಿತರ ಚೀಟಿ ಪಡೆದುಕೊಳ್ಳಬಹುದು. ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಏಪ್ರಿಲ್ ಒಂದರಿಂದ ನಿಮಗಾಗಿ ಕಾಯ್ದಿರಿಸಲಾದ ರೇಷನ್ ಕಾರ್ಡ್ ಪಡೆದುಕೊಳ್ಳಿ.

ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಆರಂಭ; ಹಣ ಬಂದಿದ್ಯಾ ಚೆಕ್ ಮಾಡಿಕೊಳ್ಳಿ

Annabhagya Schemeಈ ಕೆಲಸ ಮಾಡ್ದೆ ಇದ್ರೆ ಡಿವಿಟಿ ಹಣ ವರ್ಗಾವಣೆ ಆಗುವುದಿಲ್ಲ!

ಇನ್ನು ಎಲ್ಲಾ ಕೆಲಸಕ್ಕೂ EKYC ಕಡ್ಡಾಯ ಎನ್ನುವುದು ನಿಮಗೆಲ್ಲಾ ಗೊತ್ತು. ನಿಮ ಖಾತೆಗೆ ಆಧಾರ್ ಸೀಡಿಂಗ್, ಎನ್‌ಪಿಸಿಐ ಮ್ಯಾಪಿಂಗ್ ಆಗದೆ ಇದ್ದರೆ ತಕ್ಷಣ ಬ್ಯಾಂಕ್ ಶಾಖೆಗೆ ಹೋಗಿ ಈ ಕೆಲಸ ಮಾಡಿಕೊಳ್ಳಿ. ಕಳೆದ ಆರು ತಿಂಗಳ ಹಿಂದೆ ಈ ಕೆ ವೈ ಸಿ ಮಾಡಿಸಿದ್ದು, ಈಗ ಮತ್ತೆ ಹಣ ಡಿ ಬಿ ಟಿ ಆಗುತ್ತಿಲ್ಲ ಎಂದರೆ ಬ್ಯಾಂಕಿನಲ್ಲಿ ಈಕೆ ವೈ ಸಿ ಅಪ್ಡೇಟ್ ಮಾಡಿಸಬೇಕು.

ನಿಮ್ಮ ಎಲ್ಲಾ ವಿವರಗಳು ಸರಿಯಾಗಿ ಇದ್ದರೆ ತಪ್ಪದೇ ನಿಮ್ಮ ಖಾತೆಗೆ (Bank Account) ಹಣ ಜಮಾ ಆಗುತ್ತದೆ. ಇನ್ನು ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಕೂಡ ಮಾಡಿಸಿಕೊಳ್ಳುವುದು ಕಡ್ಡಾಯ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದೀರಾ? ಈ ಕಾರಣಕ್ಕೆ ರದ್ದಾಗುತ್ತೆ ನಿಮ್ಮ ಅರ್ಜಿ

ಏಳನೇ ಕಂತಿನ ಹಣ ಬಿಡುಗಡೆ!

ಬಿಪಿಎಲ್ ಪಡಿತರ ಚೀಟಿ (BPL Ration Card) ಹೊಂದಿರುವವರಿಗೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿಯ ಬದಲು ಹಣ ವಿತರಣೆ ಮಾಡುತ್ತಿದೆ. ಈಗಾಗಲೇ ಆರು ಕಂತಿನ ಹಣ ಫಲಾನುಭವಿಗಳ ಖಾತೆಗೆ ತಲುಪಿದೆ. ಏಳನೇ ಕಂತಿನ ಹಣವನ್ನು ಇನ್ನೇನು ಸದ್ಯದಲ್ಲಿಯೇ ಸರ್ಕಾರ ಬಿಡುಗಡೆ ಮಾಡಲಿದ್ದು ಮಾರ್ಚ್ ತಿಂಗಳ ಅಂತ್ಯದ ಒಳಗೆ ನಿಮ್ಮ ಖಾತೆಗೂ ತಪ್ಪದೆ ಹಣ ವರ್ಗಾವಣೆ ಆಗುತ್ತದೆ.

ಇಷ್ಟು ದಿನ ಆದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ! ಅನ್ನೋರಿಗೆ ಬಿಗ್ ಅಪ್ಡೇಟ್

Annabhagya Scheme money deposit with new Ration card

Follow us On

FaceBook Google News

Annabhagya Scheme money deposit with new Ration card