ಮಾರ್ಚ್ 15ರೊಳಗೆ ಈ ಕೆಲಸ ಮಾಡಿದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮಾ!
ಆಧಾರ್ ಲಿಂಕ್ (Aadhaar Card link) ಆಗದೆ ಇದ್ದಲ್ಲಿ ನಿಮಗೆ ಗ್ಯಾರಂಟಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಐದು ಗ್ಯಾರಂಟಿ (guarantee schemes) ಯೋಜನೆಗಳನ್ನು ನೀವು ಪಡೆದುಕೊಳ್ಳಬೇಕು ಅಂದ್ರೆ ಸರ್ಕಾರ ಈಗಾಗಲೇ ತಿಳಿಸಿರುವ ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗೂ ಪ್ರತಿಯೊಂದು ಅದರದ್ದೇ ಆದ ಮಾನದಂಡಗಳು ಕೂಡ ಇವೆ.
ಆ ಮಾನದಂಡಗಳ ಒಳಗಡೆ ನೀವು ಬರುವುದಾದರೆ ಮಾತ್ರ ಗ್ಯಾರಂಟಿ ಯೋಜನೆಯ ಪ್ರಯೋಜನ ನಿಮಗೆ ಸಿಗುತ್ತದೆ. ಉದಾಹರಣೆಗೆ ಗ್ಯಾರಂಟಿ ಯೋಜನೆಗೆ ಪ್ರಮುಖವಾಗಿ ರೇಷನ್ ಕಾರ್ಡ್ (ration card) ಬೇಕೆ ಬೇಕು. ಇದರ ಜೊತೆಗೆ ಆಧಾರ್ ಲಿಂಕ್ (Aadhaar Card link) ಆಗಿರಬೇಕು ಈ ಕೆಲಸ ಆಗದೆ ಇದ್ದಲ್ಲಿ ನಿಮಗೆ ಗ್ಯಾರಂಟಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ.
ಇನ್ಮುಂದೆ ಬೆಂಗಳೂರಿನಲ್ಲಿ ಬೋರ್‌ವೆಲ್ ಕೊರೆಸೋದಕ್ಕೆ ಬೇಕು ಪರ್ಮಿಷನ್! ಹೊಸ ರೂಲ್ಸ್
ಮಾರ್ಚ್ 15ರ ಒಳಗೆ ಈ ಕೆಲಸ ಮಾಡಿ!
ಸರ್ಕಾರ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಡಿ ಬಿ ಟಿ (DBT) ಆಗಬೇಕು ಅಂದ್ರೆ ಮಾರ್ಚ್ 15 2024ರ ಒಳಗೆ ಇದೊಂದು ಪ್ರಮುಖ ಕೆಲಸವನ್ನು ಮಾಡಬೇಕು ಎಂದು ತಿಳಿಸಿದೆ. ಅದುವೇ ಆಧಾರ್ ಅಪ್ಡೇಟ್!
ಆಧಾರ್ ಕಾರ್ಡ್ ಎನ್ನುವುದು ಭಾರತೀಯ ನಾಗರಿಕರ ಪ್ರಮುಖ ದಾಖಲೆ ಆಗಿದೆ. ನಮ್ಮ ಎಲ್ಲಾ ಕೆಲಸಕ್ಕೂ ಆಧಾರ್ ಕಾರ್ಡ್ ಆಧಾರವಾಗಿದೆ. ಯಾವುದೇ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳುವುದಿದ್ದರೆ ಅಥವಾ ಯಾವುದೇ ಯೋಜನೆಯಲ್ಲಿ ನಮ್ಮ ಹೆಸರನ್ನ ನೋಂದಾಯಿಸಿಕೊಳ್ಳುವುದಿದ್ದರೆ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ಕೊಡಬೇಕು.
ಮಹಿಳೆಯರಿಗೆ ಸಿಹಿ ಸುದ್ದಿ; ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್!
ಅದರಂತೆ ಗ್ಯಾರಂಟಿ ಯೋಜನೆಗೂ ಕೂಡ ಆಧಾರ್ ಕಾರ್ಡ್ ಪ್ರಮುಖ ದಾಖಲೆ ಆಗಿರುತ್ತದೆ. ಇನ್ನು ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಹತ್ತು ವರ್ಷಗಳ ಹಳೆಯದ್ದು ಎಂದಾದರೆ, ತಕ್ಷಣ ಅದನ್ನು ಅಪ್ಡೇಟ್ ಮಾಡಿಸಬೇಕು.
ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಬಯೋಮೆಟ್ರಿಕ್, ಲಿಂಗ ಜನ್ಮ ದಿನಾಂಕ ಹೀಗೆ ಬೇರೆ ಬೇರೆ ಮಾಹಿತಿಗೆ ಸಂಬಂಧಪಟ್ಟ ಹಾಗೆ ನೀವು ತಿದ್ದುಪಡಿ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಆಧಾರ್ ಅಪ್ಡೇಟ್ (Aadhaar Card update) ಮಾಡಿಸದೆ ಇದ್ದರೆ ಮುಂದಿನ ಅನ್ನಭಾಗ್ಯ ಯೋಜನೆಯ ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ನಿಮ್ಮ ಖಾತೆಗೆ (Bank Account) ತಲುಪಲು ಸಾಧ್ಯವಿಲ್ಲ. ಹಾಗಾಗಿ ತಕ್ಷಣ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ.
ಅನ್ನಭಾಗ್ಯ ಯೋಜನೆ ಹಣ DBT ಆಗದೆ ಇರುವವರಿಗೆ ಸರ್ಕಾರದ ಹೊಸ ಮಾರ್ಗಸೂಚಿ!
ಆಧಾರ್ ಅಪ್ಡೇಟ್ ಎಲ್ಲಿ ಮಾಡಿಸಬೇಕು?
ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ನೀವು ಸುಲಭವಾಗಿ ಆನ್ಲೈನ್ ಮೂಲಕ ಮಾಡಿಕೊಳ್ಳಬಹುದು. ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸಹಾಯದಿಂದ ಯು ಐ ಡಿ ಎ ಐ ವೆಬ್ಸೈಟ್ ಮೂಲಕ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಲು ಸಾಧ್ಯವಿದೆ.
ಇಲ್ಲವಾದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವ ವಿಳಾಸವನ್ನು ಹೋಲುವ ದಾಖಲೆಯನ್ನು ಕೊಟ್ಟು ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕು.
ಬಿಪಿಎಲ್ ಕಾರ್ಡ್ ಇರೋರಿಗೆ ಗುಡ್ ನ್ಯೂಸ್; ಹೊಸ ಕಾರ್ಡ್ ಜೊತೆಗೆ ಅನ್ನಭಾಗ್ಯ ಹಣ ಜಮಾ!
ಮಾರ್ಚ್ 15ಕ್ಕೆ ಬಿಡುಗಡೆ ಆಗಲಿದೆ ಗ್ಯಾರಂಟಿ ಹಣ!
ಸರ್ಕಾರ ಈಗಾಗಲೇ ತಿಳಿಸಿರುವಂತೆ ಮಾರ್ಚ್ 14 ಮತ್ತು 15ನೇ ತಾರೀಖಿನಂದು 7ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಲಿದೆ. ಮಾರ್ಚ್ 31ರ ಒಳಗೆ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಆಗಲಿದೆ.
Annabhagya, Gruha Lakshmi money deposit only if this work is done by March 15