ಚಿಂತೆ ಬೇಡ! 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗಲಿದೆ! ಇಲ್ಲಿದೆ ಮಾಹಿತಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಆರು ಮತ್ತು 7ನೇ ಕಂತಿನ ಹಣವನ್ನು ಒಟ್ಟಿಗೆ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡುವ ಭರವಸೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಮಹಿಳೆಯರ ಖಾತೆಗೆ (Bank Account) ಜಮಾ ಮಾಡುತ್ತಿರುವ ಸರ್ಕಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ (independent life) ಯ ಜೀವನಕ್ಕೆ ಎಷ್ಟರಮಟ್ಟಿಗೆ ಒತ್ತು ನೀಡುತ್ತಿದೆ ಎನ್ನುವುದು ಎಲ್ಲರಿಗೂ ಈಗಾಗಲೇ ಗೊತ್ತಾಗಿರಬಹುದು.
ರಾಜ್ಯದಲ್ಲಿ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಸ್ವಾವಲಂಬನೆಯ ಜೀವನ ನಡೆಸಬೇಕು ಎನ್ನುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇದೇ ಕಾರಣಕ್ಕೆ ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ bus ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇಂಥವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಯಾವ ಸೌಲಭ್ಯವೂ ಸಿಗೋದಿಲ್ಲ
ಹಾಗೆಯೇ ಮನೆಯ ನಿರ್ವಹಣೆಗಾಗಿ ಅಥವಾ ತಮ್ಮ ಸ್ವಂತ ಖರ್ಚಿಗಾಗಿ ಪ್ರತಿ ತಿಂಗಳು 2000ಗಳನ್ನು ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.
ಆರಂಭದಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರು ತಮ್ಮ ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿ ಇದ್ದರು. ಆದರೆ ಕೋಟ್ಯಂತರ ಅರ್ಜಿ ಸಲ್ಲಿಕೆ ಆಗಿರುವ ಪೈಕಿ ಬಹುತೇಕ 90% ನಷ್ಟು ಮಹಿಳೆಯರು ಕಳೆದ 5 ತಿಂಗಳ ಹಣವನ್ನು ಪಡೆದುಕೊಂಡಿದ್ದಾರೆ.
6 ಮತ್ತು 7ನೇ ಕಂತಿನ ಹಣ ಒಟ್ಟಿಗೆ ಜಮಾ!
ಎಲ್ಲಾ ಕೆಲಸದಲ್ಲಿಯೂ ಒಂದು ಸಮಸ್ಯೆ ಇದ್ದೇ ಇರುತ್ತೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯಲ್ಲೂ ಕೂಡ ಕೆಲವು ತಾಂತ್ರಿಕ ಸಮಸ್ಯೆ (technical issues) ಗಳಿಂದಾಗಿ ಸುಮಾರು 10% ನಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡುವಲ್ಲಿ ಸರ್ಕಾರ ಹಿಂದೆ ಬಿದ್ದಿದೆ, ಆದರೆ ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಆರು ಮತ್ತು 7ನೇ ಕಂತಿನ ಹಣವನ್ನು ಒಟ್ಟಿಗೆ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡುವ ಭರವಸೆ ನೀಡಿದ್ದಾರೆ.
ಮಾರ್ಚ್ 15ರೊಳಗೆ ಈ ಕೆಲಸ ಮಾಡಿದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮಾ!
ನಿಮ್ಮ ಖಾತೆಗೆ ಈಕೆ ವೈ ಸಿ ಆಗದೇ ಇರಬಹುದು, ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಆಗದೆ ಇರಬಹುದು, ಎನ್ ಪಿ ಸಿ ಐ ಮ್ಯಾಪಿಂಗ್ ಆಗದೆ ಇರಬಹುದು ಇವೆಲ್ಲವನ್ನ ಒಮ್ಮೆ ಬ್ಯಾಂಕ್ ಗೆ ಹೋಗಿ ಪರಿಶೀಲಿಸಿ, ಒಂದು ವೇಳೆ ಲಿಂಕಿಂಗ್ ಪ್ರಕ್ರಿಯೆ ಪೂರ್ಣಗೊಳ್ಳದೆ ಇದ್ದರೆ ತಕ್ಷಣ ಆ ಕೆಲಸ ಮಾಡಿ ಇದರ ಜೊತೆಗೆ ಆಧಾರ್ ಕಾರ್ಡ್ ಅಪ್ಡೇಟ್ ಕೂಡ ಮಾಡಿಸಿ ಇಷ್ಟು ಮಾಡಿದ್ರೆ ತಪ್ಪದೇ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ.
ಮಹಿಳೆಯರಿಗೆ ಸಿಹಿ ಸುದ್ದಿ; ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್!
ಸಮಸ್ಯೆ ಪರಿಹರಿಸುವುದಕ್ಕಾಗಿಯೇ ಅಧಿಕಾರಿಗಳಿಗೆ ಆದೇಶ!
ಪ್ರತಿ ಜಿಲ್ಲೆಯಲ್ಲಿಯೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಮಹಿಳೆಯ ಖಾತೆಗೆ ಬಂದಿಲ್ಲ ಎನ್ನುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸರ್ಕಾರ ತಿಳಿಸಿದೆ. ಅದಕ್ಕಾಗಿಯೇ ಪ್ರತಿ ಜಿಲ್ಲೆಯಲ್ಲಿಯೂ ಕೂಡ ಈಗ ಸಿಡಿಪಿಓ ಅಧಿಕಾರಿಗಳು ಮಹಿಳೆಯರ ಸಮಸ್ಯೆಯನ್ನ ಕೇಳಿ ಅವರ ಖಾತೆಗೆ ಹಣ ವರ್ಗಾವಣೆ ಆಗುವಂತೆ ಮಾಡುತ್ತಿದ್ದಾರೆ.
ಇದರ ಜೊತೆಗೆ ಅಂಗನವಾಡಿ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಹೋಗಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡುತ್ತಿದ್ದಾರೆ. ಒಂದು ವೇಳೆ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ತಕ್ಷಣ ಅವರ ಬಳಿ ದೂರು ಸಲ್ಲಿಸಿದರೆ ಪೆಂಡಿಂಗ್ ಇರುವ ಹಣವನ್ನು ಕೂಡ ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ.
ಅನ್ನಭಾಗ್ಯ ಯೋಜನೆ ಹಣ DBT ಆಗದೆ ಇರುವವರಿಗೆ ಸರ್ಕಾರದ ಹೊಸ ಮಾರ್ಗಸೂಚಿ!
ಏಳನೇ ಕಂತಿನ ಹಣ ಬಿಡುಗಡೆ!
ಸರ್ಕಾರ ನಿರ್ಧರಿಸಿರುವಂತೆ, 7ನೇ ಕಂತಿನ ಹಣ ಮಾರ್ಚ್ 15ನೇ ತಾರೀಕಿನಂದು ಬಿಡುಗಡೆ ಆಗಲಿದೆ. ಫಲಾನುಭವಿ ಮಹಿಳೆಯರು ಮಾರ್ಚ್ ತಿಂಗಳ ಕೊನೆಯ ದಿನಾಂಕದ ಒಳಗೆ 7ನೇ ಕಂತಿನ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿದೆ ಒಟ್ಟಾರೆಯಾಗಿ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ 14,000ಗಳನ್ನ ಮಹಿಳೆಯರು ತಮ್ಮ ಖಾತೆಗೆ ಉಚಿತವಾಗಿ ವರ್ಗಾವಣೆ ಮಾಡಿಸಿಕೊಳ್ಳಲು ಸಾಧ್ಯವಾಗಿದೆ ಎನ್ನಬಹುದು.
ಬಿಪಿಎಲ್ ಕಾರ್ಡ್ ಇರೋರಿಗೆ ಗುಡ್ ನ್ಯೂಸ್; ಹೊಸ ಕಾರ್ಡ್ ಜೊತೆಗೆ ಅನ್ನಭಾಗ್ಯ ಹಣ ಜಮಾ!
6th and 7th installment of Gruha Lakshmi money will be deposited together