Kannada News Karnataka News

ಆಸ್ತಿ, ಜಮೀನಿನ ಪಹಣಿಗೆ ಆಧಾರ್ ಲಿಂಕ್ ಕಾರ್ಯ ಶುರು! ಸರ್ಕಾರದ ಕಟ್ಟುನಿಟ್ಟಿನ ಆದೇಶ

Big update for those who have a house in government land

Story Highlights

ಸ್ಥಿರಾಸ್ತಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ಲಿಂಕ್ ಆಗಲೇಬೇಕು; ಇಲ್ಲಿದೆ ಮಾಹಿತಿ. ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳಿ

ಮಾರ್ಚ್ 12, 2024 ಸ್ಥಿರಾಸ್ತಿ ಪಹಣಿಗೆ ಆಧಾರ್ ಜೋಡಣೆ (Aadhar Card link to land papers) ಆಗಲೇಬೇಕು ಎಂದು ರಾಜ್ಯ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಒಂದು ವೇಳೆ ಆಧಾರ್ ಲಿಂಕ್ ಆಗದೆ ಇದ್ದರೆ ಮುಂದೆ ಎದುರಾಗುವ ಸಮಸ್ಯೆಯನ್ನು ನೀವೇ ಸರಿಪಡಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ನನ್ನ ಆಸ್ತಿ ನನ್ನ ಗುರುತು!

ನನ್ನ ಆಸ್ತಿ ನನ್ನ ಗುರುತು ಯೋಜನೆಯ ಅಡಿಯಲ್ಲಿ ಸ್ಥಿರಾಸ್ತಿ ಪಹಣಿಗೆ ಆಧಾರ್ ಜೋಡಣೆ ಮಾಡುವ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಪ್ರಾಯೋಗಿಕ ಪರೀಕ್ಷೆ (pilot project) ನಡೆಸಲಾಗಿತ್ತು.

ಇದೀಗ ಮಾರ್ಚ್ 12 ರಿಂದ ರಾಜ್ಯದ್ಯಂತ ಸ್ಥಿರಾಸ್ತಿ ಪಹಣಿಗೆ ಆಧಾರ ಜೋಡಣೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಆಸ್ತಿ ನೋಂದಣಿ (property registration) ಸಮಯದಲ್ಲಿ ನಡೆಯುವ ಅಕ್ರಮಕ್ಕೆ ಕಡಿವಾಣ ಹಾಕಲು ಹಾಗೂ ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿ ರೈತರಿಗೆ ತಲುಪಿಸಲು ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಚಿಂತೆ ಬೇಡ! 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗಲಿದೆ! ಇಲ್ಲಿದೆ ಮಾಹಿತಿ

ನನ್ನ ಆಸ್ತಿ ಯೋಜನೆಯ ಅಡಿಯಲ್ಲಿ ನನ್ನ ಆಸ್ತಿ ನನ್ನ ಗುರುತು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಪಹಣಿಗೆ ಆಧಾರ್ ಜೋಡಣೆ ಆಗಬೇಕು ಎನ್ನುವ ನಿಯಮವನ್ನು ಕಡ್ಡಾಯಗೊಳಿಸಿರುವ ಬಗ್ಗೆ ಇತ್ತೀಚಿಗೆ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಮಿತ್ರರಿಗೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ಒದಗಿಸಿದ್ದಾರೆ.

ರಾಜ್ಯದಲ್ಲಿ ಕೆಲವು ಕಡೆ ಪೈಲೆಟ್ ರೀತಿಯಲ್ಲಿ ಅಂದರೆ ಪ್ರಾಯೋಗಿಕವಾಗಿ ಪಹಣಿ ಆಧಾರ್ ಜೋಡಣೆ ನಡೆಸಲಾಗಿತ್ತು. ಈಗ ಮಾರ್ಚ್ 12 ರಿಂದ ಇದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

Property documents“ಕಂದಾಯ ಇಲಾಖೆಯನ್ನು ಆಧುನಿಕರಣಗೊಳಿಸಬೇಕು, ಕೈ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿಗಳು ಜನರಿಗೆ ಲಭ್ಯ ಆಗಬೇಕು ಎನ್ನುವ ಕಾರಣಕ್ಕೆ ಈ ಹೊಸ ಉಪಕ್ರಮ ಕೈಗೊಳ್ಳಲಾಗಿದೆ.

ಈಗಾಗಲೇ ಪಹಣಿಗೆ ಆಧಾರ್ ಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ನಮ್ಮ ಉದ್ಯೋಗಿಗಳು ಸುಮಾರು 19 ಲಕ್ಷ ರೈತರನ್ನು ಸಂಪರ್ಕ ಮಾಡಿದ್ದಾರೆ. ಅದರಲ್ಲಿ ಸುಮಾರು ಆರು ಲಕ್ಷ ಪಹಣಿದಾರರು ಮೃತಪಟ್ಟಿದ್ದಾರೆ.

ಇಂಥವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಯಾವ ಸೌಲಭ್ಯವೂ ಸಿಗೋದಿಲ್ಲ

ಹೀಗೆ ಮೃತಪಟ್ಟವರ ಹೆಸರಿನಲ್ಲಿ ಪಹಣಿ ಇದ್ದರೆ ಅದನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಆಧಾರ್ ಲಿಂಕ್ ಮಾಡಿಬಿಟ್ಟರೆ ಯಾರದ್ದೋ ಆಸ್ತಿಯನ್ನು ಇನ್ಯಾರೋ ದುರುಪಯೋಗಪಡಿಸಿಕೊಳ್ಳುವ ಸಂದರ್ಭ ಇರುವುದಿಲ್ಲ. ಇದರಿಂದ ಸಾಕಷ್ಟು ವಂಚನೆಗಳಿಗೆ ಕಡಿವಾಣ ಹಾಕಬಹುದು ಎಂದು ಆಧಾರ್ ಜೋಡಣೆ ಮಹತ್ವವನ್ನು ಸಚಿವರು ತಿಳಿಸಿದರು.

Aadhaar Cardಲೋಕಸಭಾ ಚುನಾವಣೆ ಸಮಯದಲ್ಲಿಯೂ ಕೂಡ ಪಹಣಿಗೆ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ನಿಲ್ಲಿಸಬಾರದು ಎಂದು ಗ್ರಾಮಾಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಗ್ರಾಮಾಧಿಕಾರಿಗಳು ಮನೆ ಮನೆಗೆ ತೆರಳಿ ಇನ್ಮುಂದೆ ಪಹಣಿಗೆ ಆಧಾರ್ ಜೋಡಣೆ ಮಾಡಿಸುತ್ತಾರೆ.

ಒಟ್ಟಿನಲ್ಲಿ ರೈತರಿಗೆ ಪಹಣಿ ಹಾಗೂ ಆಧಾರ್ ಕಾರ್ಡ್ ಜೋಡಣೆಯಿಂದ ಸರ್ಕಾರದ ಯೋಜನೆಯ ಪ್ರಯೋಜನಗಳು ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ.

ಮಾರ್ಚ್ 15ರೊಳಗೆ ಈ ಕೆಲಸ ಮಾಡಿದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮಾ!

Aadhaar link for RTC of property started, Strict order of the Govt