Karnataka NewsBangalore News

ಮದುವೆ ಆಗೋದಿದ್ರೆ ಸರ್ಕಾರವೇ ಕೊಡುತ್ತೆ 50 ಸಾವಿರ ರೂಪಾಯಿ; ಹೀಗೆ ಅರ್ಜಿ ಸಲ್ಲಿಸಿ!

ಮದುವೆ (marriage) ಅನ್ನೋದು ಒಂದು ಸುಂದರವಾದ ಅನುಬಂಧ, ಗಂಡ ಹೆಂಡತಿ ನೂರಾರು ವರ್ಷ ಒಟ್ಟಾಗಿ ಬಾಳುತ್ತೇವೆ ಎಂದು ವಚನ ತೆಗೆದುಕೊಂಡು ಒಟ್ಟಾಗಿ ಜೀವನ ನಡೆಸುವಂತಹ ಒಂದು ಸುಂದರವಾದ ಸಂಬಂಧ. ಆದರೆ ಮದುವೆ (wedding) ಯ ಪರಿಕಲ್ಪನೆ ಇತ್ತೀಚಿಗೆ ಬದಲಾಗುತ್ತಿದೆ. ಮದುವೆ ಅಂದರೆ ಹಣ ಖರ್ಚು ಮಾಡುವುದು ಅನ್ನುವಂತಹ ಕಾನ್ಸೆಪ್ಟ್ ಆರಂಭವಾಗಿದೆ.

ಹೌದು, ಇದೀಗ ಮದುವೆ ಮಾಡಬೇಕು ಅಂದ್ರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವವರೇ ಹೆಚ್ಚು. ಇಂಥದೊಂದು ಟ್ರೆಂಡ್ (Trend) ಸ್ಟಾರ್ಟ್ ಆಗಿದೆ. ಹಣ ಇರುವವರು ಖರ್ಚು ಮಾಡಬಹುದು. ಆದರೆ ಹಣ ಇಲ್ಲದೆ ಇರುವವರು ಏನು ಮಾಡಬೇಕು ಅಲ್ವಾ? ಹಾಗಂದ ಮಾತ್ರಕ್ಕೆ ಮದುವೆ ಆಗದೆ ಅಥವಾ ಮದುವೆ ಮಾಡಿಸದೆ ಇರಲು ಸಾಧ್ಯವಿಲ್ಲ.

The government will give 50 thousand rupees for Marriage

ಚಿಂತೆ ಬೇಡ! 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗಲಿದೆ! ಇಲ್ಲಿದೆ ಮಾಹಿತಿ

ಹಾಗಾಗಿ ಸರ್ಕಾರ ಬಡವರಿಗಾಗಿಯೇ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ ನೀವು ವಿವಾಹ (marriage) ಮಾಡಿಕೊಂಡರೆ 50 ಸಾವಿರವರೆಗಿನ ಸಹಾಯಧನ ಪಡೆಯಬಹುದು.

ಇಂತಹ ವಧು ವರರಿಗೆ ಸರ್ಕಾರದಿಂದ ಸಹಾಯಧನ!

marriageಕೆಲವು ನೊಂದಾಯಿತ ಸಂಘ-ಸಂಸ್ಥೆಗಳು ಧಾರ್ಮಿಕ ಸ್ಥಳಗಳಲ್ಲಿ ಸಾಮೂಹಿಕ ವಿವಾಹವನ್ನು ನಡೆಸಲಾಗುತ್ತದೆ. ಇದರಲ್ಲಿ ಯಾರ ಬಳಿ ಆರ್ಥಿಕವಾಗಿ ಹಣ ಇರುವುದಿಲ್ಲವೋ ಅಂತವರು ಮದುವೆ ಆಗುತ್ತಾರೆ. ಇಂತಹ ಸಾಮೂಹಿಕ ವಿವಾಹದಲ್ಲಿ ಪರಿಶಿಷ್ಟ ಜಾತಿಯವರು ಮದುವೆ ಆದರೆ ಅವರಿಗೆ ಸರ್ಕಾರದಿಂದ 50,000ಗಳ ಸಹಾಯವನ್ನು ಸಿಗುತ್ತದೆ.

ಇಂಥವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಯಾವ ಸೌಲಭ್ಯವೂ ಸಿಗೋದಿಲ್ಲ

ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಪರಿಶಿಷ್ಟ ಜಾತಿಯ ಹುಡುಗ – ಹುಡುಗಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಮೂಲಕ ಮದುವೆ ಆದರೆ ತಮ್ಮ ಮುಂದಿನ ಆರ್ಥಿಕ ಜೀವನವನ್ನು ಸ್ವಲ್ಪ ಮಟ್ಟಿಗಾದರೂ ಸುಧಾರಿಸಿಕೊಳ್ಳಲು ಸರ್ಕಾರದಿಂದ 50,000 ಕೊಡಲಾಗುತ್ತದೆ.

https://swdservices.karnataka.gov.in/swincentive/HAhome.aspx ಈ ವೆಬ್ಸೈಟ್‌ನಲ್ಲಿ ನೀವು ಸಹಾಯದನಕ್ಕಾಗಿ ಅರ್ಜಿ ಸಲ್ಲಿಸಬಹುದು. ಮದುವೆಯಾದ ಒಂದು ವರ್ಷದ ಒಳಗೆ ಸರ್ಕಾರದಿಂದ 50,000 ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ.

ಮಾರ್ಚ್ 15ರೊಳಗೆ ಈ ಕೆಲಸ ಮಾಡಿದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮಾ!

ಇನ್ನೂ ಮದುವೆಯ ಹಂತದಲ್ಲಿ ಆಯೋಜಕರು ಮದುವೆ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದರ ಜೊತೆಗೆ ದಂಪತಿಗಳಿಗೆ 2000 ಸಹಾಯಧನವನ್ನು ಕೂಡ ನೀಡುತ್ತಾರೆ. ಈ ವಿಚಾರದ ಬಗ್ಗೆ ನೀವು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕಲ್ಯಾಣ ಮಿತ್ರ ಸಹಾಯವಾಣಿಗೆ ಕರೆ ಮಾಡಬಹುದು
ಸಂಖ್ಯೆ ಹೀಗಿದೆ: 9482 300 400

The government will give 50 thousand rupees for Marriage

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories