ಆಸ್ತಿ ನೋಂದಣಿಗೆ ಇನ್ಮುಂದೆ ಸರ್ಕಾರದ ಹೊಸ ರೂಲ್ಸ್! ಹೊಸ ನಿಮಯ ತಿಳಿಯಿರಿ

ಆಸ್ತಿ ನೋಂದಣಿ ಮಾಡಿಕೊಳ್ಳುವಾಗ ಈ ಕೆಲಸ ಮಾಡುವುದು ಕಡ್ಡಾಯ! ರಾಜ್ಯ ಸರ್ಕಾರದ ಹೊಸ ರೂಲ್ಸ್!

ಸಾರ್ವಜನಿಕರ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರ (State government) , ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಅದರಲ್ಲೂ ಆಸ್ತಿ (property) ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಬಡವರಿಗೆ ಅಥವಾ ಸಾಮಾನ್ಯರಿಗೆ ಮೋಸ ಆಗಬಾರದು ಎನ್ನುವ ಕಾರಣಕ್ಕೆ ಆಸ್ತಿ ನೊಂದಣಿ (property registration) ವಿಚಾರದಲ್ಲಿಯೂ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಇದನ್ನ ಪಾಲನೆ ಮಾಡುವುದು ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ! ಇಂತಹ ಮಹಿಳೆಯರಿಗೆ ಮಾತ್ರ ಹಣ ಜಮಾ

ಆಸ್ತಿ ನೋಂದಣಿಗೆ ಇನ್ಮುಂದೆ ಸರ್ಕಾರದ ಹೊಸ ರೂಲ್ಸ್! ಹೊಸ ನಿಮಯ ತಿಳಿಯಿರಿ - Kannada News

ಆಸ್ತಿ ನೋದಣಿಗೆ ಆಧಾರ್ ದೃಢೀಕರಣ (Aadhaar link with property registration)

ಆಸ್ತಿ ವಿಚಾರಕ್ಕೆ ಬಂದರೆ ವಂಚನೆ ಮೋಸ ಪ್ರಕರಣಗಳು ಜಾಸ್ತಿ ಆಗುತ್ತದೆ, ಯಾರದ್ದೋ ಆಸ್ತಿಯನ್ನು ಇನ್ಯಾರೋ ಮಾರಾಟ (Sale Property) ಮಾಡುವುದು, ಬೇರೆಯವರ ಆಸ್ತಿಯನ್ನು ತಮ್ಮದು ಎಂದು ಹೇಳಿಕೊಳ್ಳುವುದು ಹಾಗೂ ಇಲ್ಲ ಸಲ್ಲದ ಬೆಲೆಗೆ ಆಸ್ತಿ ಮಾರಾಟ (Buy Property) ಮಾಡುವುದು ಹೀಗೆ ಸಾಕಷ್ಟು ವಂಚನೆ ಪ್ರಕರಣಗಳು ದಾಖಲಾಗಿವೆ.

ಇದನ್ನ ಗಮನಿಸಿರುವ ರಾಜ್ಯ ಸರ್ಕಾರ ಇದೀಗ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಇನ್ನು ಮುಂದೆ ಯಾರೇ ಆಗಿರಲಿ ತಮ್ಮ ಆಸ್ತಿಯನ್ನು ಮಾಡಿಸಿಕೊಳ್ಳಬೇಕಾದರೆ ಅದಕ್ಕೆ ಆಧಾರ್ ದೃಢೀಕರಣ ಆಗಲೇಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನಾವು ಇಂದು ಯಾವುದೇ ಕೆಲಸ ಮಾಡಿಕೊಳ್ಳುತ್ತಿದ್ದರು ಆಧಾರ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ.

ಕ್ಯಾನ್ಸಲ್ ಮಾಡಲಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

Property documentsನಮ್ಮ ವೈಯಕ್ತಿಕ ವಿವರಗಳನ್ನು ಹೊಂದಿರುವ ಆಧಾರ್ ಕಾರ್ಡ್ ಅನ್ನು ಆಸ್ತಿ ಪಹಣಿಗೂ ಕೂಡ ಲಿಂಕ್ ಮಾಡಿಕೊಂಡರೆ ಆ ಆಸ್ತಿಯನ್ನು ಯಾರು ತಮ್ಮ ಸ್ವಂತಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲ ಹಾಗೂ ತಮ್ಮ ಆಸ್ತಿ ಎಂದು ಸುಳ್ಳು ಹೇಳಲು ಸಾಧ್ಯವಿಲ್ಲ.

ಇಷ್ಟು ಮಾತ್ರವಲ್ಲದೆ ಆಸ್ತಿ ನೋಂದಣಿ ಸಮಯದಲ್ಲಿ ಆಧಾರ್ ಲಿಂಕ್ ಮಾಡಿಕೊಂಡರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ. ಸಚಿವ ಕೃಷ್ಣ ಬೈರೇಗೌಡ ಹೇಳುವಂತೆ, ಆರ್ ಸಿ ನೋಂದಣಿ ಮಾಡಿಕೊಳ್ಳುವಾಗ ಆಧಾರ್ ದೃಢೀಕರಣ ಮಾಡಿಕೊಂಡರೆ ಸರ್ಕಾರದಿಂದ ಸಿಗುವ ಯೋಜನೆಯ ಪ್ರಯೋಜನವನ್ನು ಯಾವುದೇ ವಂಚನೆ ಇಲ್ಲದೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಆಸ್ತಿ, ಜಮೀನಿನ ಪಹಣಿಗೆ ಆಧಾರ್ ಲಿಂಕ್ ಕಾರ್ಯ ಶುರು! ಸರ್ಕಾರದ ಕಟ್ಟುನಿಟ್ಟಿನ ಆದೇಶ

ಆಸ್ತಿ ನೊಂದಣಿ ಮಾಡುವಾಗ ಆಧಾರ್ ಲಿಂಕ್ ಮಾಡಿಸಿ!

ನನ್ನ ಆಸ್ತಿ ಯೋಜನೆಯ ಅಡಿಯಲ್ಲಿ ಈ ಕ್ರಮವನ್ನು ಜಾರಿಗೆ ತರಲಾಗಿದ್ದು ಆಸೆಯನ್ನು ಒಂದನೇ ಮಾಡಿಸಿಕೊಳ್ಳುವಾಗ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಿ ದೃಢೀಕರಿಸಿಕೊಳ್ಳಿ. ಇದರ ಜೊತೆಗೆ ಈಗಾಗಲೇ ಇರುವ ಆಸ್ತಿ ಪತ್ರಕ್ಕೆ ನೀವು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು.

ಇದು ಸುಪ್ರೀಂ ಕೋರ್ಟ್ ಹೊರಡಿಸಿರುವ ಕಡ್ಡಾಯ ನಿಯಮ ಅಲ್ಲ. ಆದರೆ ಈ ರೀತಿ ಮಾಡಿಕೊಳ್ಳುವುದರಿಂದ ವಂಚನೆಯಿಂದ ನೀವು ದೂರ ಉಳಿಯುತ್ತೀರಿ ಎಂದು ಸಚಿವರು ತಿಳಿಸಿದ್ದಾರೆ.

ಉಪ ನೋಂದಾವಣಾಧಿಕಾರಿ ಕಚೇರಿ ಭಾನುವಾರವು ತೆರೆಯಲಿದೆ!

ಸಾಮಾನ್ಯವಾಗಿ ಆರು ದಿನಗಳ ಕಾಲ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ ಆದರೆ ಜನರು ಹಿತ ಶಕ್ತಿಯ ದೃಷ್ಟಿಯಿಂದ ಇನ್ನೂ ಮುಂದೆ ಉಪ ನೋಂದಾವಣಾಧಿಕಾರಿ (sub registrar office) ಕಚೇರಿ ಭಾನುವಾರ ಕೂಡ ಕಾರ್ಯ ನಿರ್ವಹಿಸಲಿದೆ.

ಹಾಗಾಗಿ ನೀವು ಸುಲಭವಾಗಿ ಯಾವುದೇ ರೀತಿಯ ಆಸ್ತಿಗೆ ಸಂಬಂಧಪಟ್ಟ ಕೆಲಸವನ್ನು ಮಾಡಿಕೊಳ್ಳಬಹುದು. ಈ ಬಗ್ಗೆ ರಾಜ್ಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಚಿಂತೆ ಬೇಡ! 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗಲಿದೆ! ಇಲ್ಲಿದೆ ಮಾಹಿತಿ

New government rules for property registration, know the details

Follow us On

FaceBook Google News