ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಜಮಾ! ಖಾತೆ ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಮೂಲಕ ಪ್ರತಿ ಮಹಿಳೆ ರಾಜ್ಯದಲ್ಲಿ 2000 ಪಡೆದುಕೊಳ್ಳುತ್ತಿದ್ದಾರೆ.
ಕಳೆದ 24, 25, 26ನೇ ತಾರೀಕಿನಂದು ಪ್ರತಿ ದಿನ 2000ಗಳಂತೆ ಮಹಿಳೆಯರ ಖಾತೆಗೆ ಪೆಂಡಿಂಗ್ (pending amount released) ಇರುವ ಹಣ ಜಮಾ ಆಗಿದೆ. ಹಾವೇರಿ ಜಿಲ್ಲೆಯ ಮಹಿಳೆ ಒಬ್ಬರ ಖಾತೆಗೆ (Bank Account) ಹಣ ಜಮಾ ಆಗಿದ್ದು, ಆಕೆಯ ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಂಡ ಹಿನ್ನೆಲೆಯಲ್ಲಿ ಹಣ ಜಮಾ ಆಗಿದೆ ಎಂದು ಹೇಳಲಾಗಿದೆ.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಮೂಲಕ ಪ್ರತಿ ಮಹಿಳೆ ರಾಜ್ಯದಲ್ಲಿ 2000 ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಆಕೆಯ ಸ್ವಾವಲಂಬನೆಯ ಜೀವನಕ್ಕೆ ಸಾಕಷ್ಟು ಅನುಕೂಲವಾಗಿದೆ.
ಆಸ್ತಿ ನೋಂದಣಿಗೆ ಇನ್ಮುಂದೆ ಸರ್ಕಾರದ ಹೊಸ ರೂಲ್ಸ್! ಹೊಸ ನಿಮಯ ತಿಳಿಯಿರಿ
ಇದೊಂದು ರಾಜ್ಯ ಸರ್ಕಾರದ ಮೈಲುಗಲ್ಲು ಎಂದು ಹೇಳಬಹುದು. ಇನ್ನು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿಯನ್ನು ಉಚಿತವಾಗಿ ಒದಗಿಸಲು ಸಾಧ್ಯವಾಗದೆ ಇದ್ದರೂ ಕೂಡ ರಾಜ್ಯ ಸರ್ಕಾರ, ಪ್ರತಿ ವ್ಯಕ್ತಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 170ಗಳನ್ನ ಅವರ ಖಾತೆಗೆ ನೇರವಾಗಿ ಜಮಾ ಮಾಡುತ್ತಿದೆ. ಇದು ಕೂಡ ಜನರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಹಾಗೂ ಜನರಿಗೆ ಅನುಕೂಲ ಮಾಡಿಕೊಡುವಂತಹ ಯೋಜನೆ ಆಗಿದೆ ಎನ್ನಬಹುದು.
ನಿಮ್ಮ ಖಾತೆಗೆ ಹಣ ಬಂದಿಲ್ವಾ?
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಸುಮಾರು 1.20 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದು, 90% ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿದೆ. ಆದರೆ ಇನ್ನೂ 10% ನಷ್ಟು ಮಹಿಳೆಯರ ಖಾತೆಗೆ ಹಣ ಬಂದಿಲ್ಲ. ಯಾಕಂದ್ರೆ ಅವರ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬಂದಿದೆ ಇದರ ಜೊತೆಗೆ ಸರ್ಕಾರದ ತಾಂತ್ರಿಕ ದೋಷದಿಂದಾಗಿಯೂ ಕೂಡ ಹಣ ವರ್ಗಾವಣೆ ಆಗುತ್ತಿಲ್ಲ.
ಬ್ಯಾಂಕ್ ಖಾತೆಗೆ ಈಕೆ ವೈ ಸಿ ಮಾಡಿಸಿಕೊಳ್ಳುವುದು, ಎನ್ ಪಿ ಸಿ ಸಿ ಮ್ಯಾಪಿಂಗ್, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಜೋಡಣೆ, ಬ್ಯಾಂಕ ಖಾತೆಯನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳುವುದು ಹೀಗೆ ಕೆಲವು ಪ್ರಮುಖ ವಿಷಯಗಳನ್ನ ಮಾಡಬೇಕಿತ್ತು ಆದರೆ ಸಾಕಷ್ಟು ಜನ ಇದರ ಬಗ್ಗೆ ಹೆಚ್ಚು ಮುತುವರ್ಜಿ ವಹಿಸದೆ ಇರುವ ಹಿನ್ನೆಲೆಯಲ್ಲಿ ಹಣ ಖಾತೆಗೆ ಜಮಾ ಆಗಿಲ್ಲ.
ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ! ಇಂತಹ ಮಹಿಳೆಯರಿಗೆ ಮಾತ್ರ ಹಣ ಜಮಾ
ಪೆಂಡಿಂಗ್ ಇರುವ ಹಣ ಬಿಡುಗಡೆ!
ನಿಮ್ಮ ಖಾತೆಗೆ (Bank Account) ಹಣ ವರ್ಗಾವಣೆ ಆಗಿಲ್ಲ ಎಂದರೆ ಸರ್ಕಾರದಿಂದ ಬಿಡುಗಡೆ ಆಗಿಲ್ಲ ಎಂದು ಅರ್ಥವಲ್ಲ. ಸರ್ಕಾರ ಒಟ್ಟಾರೆಯಾಗಿ ಎಷ್ಟು ಫಲಾನುಭವಿಗಳಿಗೆ ಎಷ್ಟು ಮೊತ್ತವನ್ನು ಬಿಡುಗಡೆ ಮಾಡಬೇಕು ಅಷ್ಟನ್ನು ಮಾಡಿರುತ್ತದೆ.
ಆದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದಾಗ ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಗೆ ಬರುವ ಹಣ ತಡೆಹಿಡಿಯಲ್ಪಡುತ್ತದೆ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆ ಪರಿಹಾರವಾದರೆ, ನಿಮ್ಮ ಖಾತೆಗೆ ತಕ್ಷಣ ಪೆಂಡಿಂಗ್ ಇರುವ ಹಣವು ಕೂಡ ಬಿಡುಗಡೆ ಆಗುತ್ತದೆ.
ಈಗಾಗಲೇ ಹಾವೇರಿ ಜಿಲ್ಲೆಯ ಮಹಿಳೆಯೊಬ್ಬಳ ಖಾತೆಗೆ ಪೆಂಡಿಂಗ್ ಇರುವ ಹಣ ಬಂದಿದೆ, ಹಾಗಾಗಿ ನೀವು ಕೂಡ ನಿಮ್ಮ ಖಾತೆಗೆ ಸಂಬಂಧಪಟ್ಟ ಸಮಸ್ಯೆಯನ್ನು ಪರಿಹರಿಸಿಕೊಂಡು ಹಿಂದಿನ ಕಂತಿನ ಹಣವು ನಿಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಿ.
ಕ್ಯಾನ್ಸಲ್ ಮಾಡಲಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಏಳನೇ ಕಂತಿನ ಹಣ ಬಿಡುಗಡೆ!
ಸರ್ಕಾರ ಈಗಾಗಲೇ ತಿಳಿಸಿರುವಂತೆ ಮಾರ್ಚ್ ಎರಡು ಮತ್ತು ಮೂರನೇ ವಾರದ ಒಳಗೆ 7ನೆ ಕಂತಿನ ಕೂಡ ಬಿಡುಗಡೆ ಆಗುತ್ತದೆ. ಇನ್ನು ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಕೆಲವು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.
ಏಕಕಾಲಕ್ಕೆ ಎಲ್ಲಾ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Deposit) ಆಗುವುದಿಲ್ಲ. ಹಾಗಾಗಿ ಮಾರ್ಚ್ ಕೊನೆಯವರೆಗೂ ನೀವು ನಿಮ್ಮ ಖಾತೆಗೆ ಏಳನೇ ಕಂತಿನ ಹಣ ಜಮಾ ಆಗುವುದಕ್ಕೆ ಕಾಯಬಹುದು.
ಈ ಕೆಲಸಗಳನ್ನು ಮಾಡಿ!
ನಿಮ್ಮ ಖಾತೆಗೆ ಎನ್ ಪಿ ಸಿ ಐ ಮ್ಯಾಪಿಂಗ್ ಆಗಿದ್ಯೋ ಇಲ್ಲವೋ ಎನ್ನುವುದನ್ನು, UIDAI ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಿ ತಿಳಿದುಕೊಳ್ಳಬಹುದು. ಅದೇ ರೀತಿ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಲ್ಲಿ DBT Karnataka ಎನ್ನುವ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು, ಲಾಗಿನ್ ಆಗಿ ಗೃಹಲಕ್ಷ್ಮಿ ಯೋಜನೆಯ ಎಷ್ಟು ಕಂತಿನ ಹಣ ಬಿಡುಗಡೆ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
Gruha Lakshmi Scheme, Annabhagya Yojana Pending Money Deposit, Check Your Bank account