ಜಮೀನು, ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಕಡ್ಡಾಯ! ಸರ್ಕಾರ ಖಡಕ್ ವಾರ್ನಿಂಗ್

ಈಗಾಗಲೇ ಖರೀದಿ ಮಾಡಿರುವ, ಮುಂದೆ ಖರೀದಿ ಮಾಡುವ ಅಸ್ತಿ ಪತ್ರಗಳಿಗೆ ಆಧಾರ್ ಲಿಂಕ್ ಕಡ್ಡಾಯ!

ನೀವು ನಿಮ್ಮದೇ ಆಗಿರುವ ಸ್ವಂತ ಆಸ್ತಿ (Own property) ಯನ್ನು ಹೊಂದಿದ್ದರೆ ಅಥವಾ ಇನ್ನು ಮುಂದೆ ಸ್ವಂತ ಆಸ್ತಿಯನ್ನು ಖರೀದಿಸಿ ಅದನ್ನ ನೋಂದಣಿ (property registration) ಮಾಡಿಸಿಕೊಳ್ಳಲು ಬಯಸಿದರೆ, ಇದೊಂದು ವಿಚಾರವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ.

ನೀವು ನಿಮ್ಮ ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ (Aadhar link for property papers) ಮಾಡಿಸಿಕೊಳ್ಳಲೇಬೇಕು. ಒಂದು ವೇಳೆ ಆಧಾರ್ ಲಿಂಕ್ ಆಗದೆ ಇದ್ದಲ್ಲಿ ಅಂತಹ ಆಸ್ತಿ ಇಂದ ನೀವು ಸಮಸ್ಯೆ ಅನುಭವಿಸ ಬೇಕಾಗಬಹುದು.

ಮಹಿಳೆಯರಿಗೆ ಒಂದು ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ!

ಜಮೀನು, ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಕಡ್ಡಾಯ! ಸರ್ಕಾರ ಖಡಕ್ ವಾರ್ನಿಂಗ್ - Kannada News

ಕಂದಾಯ ಇಲಾಖೆಯಿಂದ ಮಹತ್ವದ ನಿರ್ಧಾರ!

ರಾಜ್ಯ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಕಂದಾಯ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ ಕೆಲವು ಪ್ರಮುಖ ನಿಯಮಗಳು ಜನರ ಹಿತಾಸಕ್ತಿ ಕಾಯ್ದುಕೊಳ್ಳುವಲ್ಲಿ ಸಹಾಯಕವಾಗಿದೆ ಎನ್ನಬಹುದು.

ಆಸ್ತಿ ನೋಂದಣಿ ಅಥವಾ ಮಾರಾಟ ವಿಚಾರದಲ್ಲಿ ಯಾವಾಗಲೂ ಸಾಮಾನ್ಯವಾಗಿ ವಂಚನೆ ಸಂಭವಿಸುತ್ತದೆ. ಸಾಮಾನ್ಯರು ಬಡವರು ಈ ವಂಚನೆಯಲ್ಲಿ ಸಿಲುಕಿ ಕೊಳ್ಳುತ್ತಾರೆ. ಅದೇ ರೀತಿ ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲಾ ಯೋಜನೆಗಳು ಸಾರ್ವಜನಿಕರ ಕೈ ಸೇರುತ್ತದೆ ಎಂದರೆ ಖಂಡಿತವಾಗಿಯೂ ಇಲ್ಲ. ಆದರೆ ಇಂಥ ತಪ್ಪುಗಳು ಇನ್ನು ಮುಂದೆ ಆಗುವುದಿಲ್ಲ..

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಜಮಾ! ಖಾತೆ ಚೆಕ್ ಮಾಡಿಕೊಳ್ಳಿ

ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ!

Aadhaar Card
ರಾಜ್ಯದಲ್ಲಿ ಆಸ್ತಿ ನೋಂದಣಿ ಸಂಬಂಧ ಪಟ್ಟ ಹಾಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ರಾಜ್ಯದಲ್ಲಿ ಯಾರಿಗೂ ಕೂಡ ಸರ್ಕಾರದ ಸೌಲಭ್ಯಗಳು ಸಿಗದೇ ಇರುವಂತೆ ಆಗಬಾರದು ಜೊತೆಗೆ ರೈತರಿಗೆ ಸರ್ಕಾರದ ಪ್ರತಿಯೊಂದು ಯೋಜನೆಯ ಲಾಭ ಸಿಗಬೇಕು ಇದೇ ಉದ್ದೇಶದಿಂದ ರೈತರ ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.

ಆರಂಭದಲ್ಲಿ ಪಹಣಿಗೆ ಆಧಾರ್ ಲಿಂಕ್ ಮಾಡುವ ಪೈಲೆಟ್ ಪ್ರಾಜೆಕ್ಟ್ ಅಂದ್ರೆ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಇದೀಗ ಈ ಪ್ರಕ್ರಿಯೆ ಯಶಸ್ವಿಯಾಗಿದ್ದು ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಕಡ್ಡಾಯಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕ್ಯಾನ್ಸಲ್ ಮಾಡಲಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಚಿವರು, ನನ್ನ ಆಸ್ತಿ ಯೋಜನೆ ಅಡಿಯಲ್ಲಿ ನನ್ನ ಆಸ್ತಿ ನನ್ನ ಗುರುತು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ನಿರ್ಧಾರವನ್ನ ಕೈಗೊಳ್ಳಲಾಗಿದೆ ಪ್ರಾಯೋಗಿಕ ಪರೀಕ್ಷೆಯು ಗೆಲುವನ್ನು ಕಂಡಿದ್ದು ರಾಜ್ಯದ್ಯಂತ ಇದನ್ನ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Property documentsಎಲ್ಲವೂ ಇರುತ್ತೆ ಸರ್ಕಾರದ ಡಾಟಾಬೇಸ್ ನಲ್ಲಿ

ನೀವು ಸರ್ಕಾರ ಬಿಡುಗಡೆ ಮಾಡುವ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಅಂದ್ರೆ ನಿಮ್ಮ ಬಳಿ ಎಷ್ಟು ಆಸ್ತಿ ಇದೆ ನೀವು ಎಲ್ಲಿ ವಾಸಿಸುತ್ತೀರಿ ನಿಮ್ಮ ಜೀವನ ಹೇಗಿದೆ ಎಲ್ಲವನ್ನು ಸರ್ಕಾರಕ್ಕೆ ತಿಳಿಸಬೇಕು ಹಾಗಂದ ಮಾತ್ರಕ್ಕೆ ನೀವು ವೈಯಕ್ತಿಕವಾಗಿ ಹೋಗಿ ತಿಳಿಸುವುದಲ್ಲ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಡಿಜಿಟಲೀಕರಣ ಮುಂದುವರೆದಿದ್ದು ಕಂದಾಯ ಇಲಾಖೆಯಲ್ಲಿಯೂ ಕೂಡ ಇದನ್ನ ಅಳವಡಿಸಿಕೊಳ್ಳಲಾಗಿದೆ.

ಕೈ ಬೆರಳ ತುದಿಯಎಲ್ಲಿ ಎಲ್ಲ ರೀತಿಯ ಮಾಹಿತಿಗಳು ಸಿಗುವಂತೆ ಆಗಬೇಕು. ಜೊತೆಗೆ ಯಾವುದೇ ರೀತಿಯ ವಂಚನೆಗಳು ನಡೆಯಬಾರದು ಎನ್ನುವ ಕಾರಣಕ್ಕೆ ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ ಎಂದು ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ! ಇಂತಹ ಮಹಿಳೆಯರಿಗೆ ಮಾತ್ರ ಹಣ ಜಮಾ

ಮೃತರ ಹೆಸರಿನಲ್ಲಿ ಈಗಲೂ ಇದೆ ಆಸ್ತಿ

ಆಸ್ತಿ ನೋಂದಣಿ ವಿಚಾರದಲ್ಲಿ ಪಾರದರ್ಶಕತೆ (transparency) ಯನ್ನು ಇಟ್ಟುಕೊಳ್ಳಬೇಕು ಎಂದು ಸಾಕಷ್ಟು ಮರಣ ಹೊಂದಿದ ಜನರ ಹೆಸರಿನಲ್ಲಿ ಆಸ್ತಿಪತ್ರ ಇದೆ ಅದನ್ನ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಆದರೆ ಒಂದು ವೇಳೆ ಆಧಾರ್ ಜೋಡಣೆ ಆದರೆ ಆ ವ್ಯಕ್ತಿಯ ಸಂಪೂರ್ಣ ಜಾತಕವೇ ಸರ್ವರ್ ನಲ್ಲಿ ಲಭ್ಯವಾಗುತ್ತದೆ. ಈ ಕಾರಣಕ್ಕೆ ಕೃಷಿ ಭೂಮಿಯನ್ನು ಹೊಂದಿದ್ರೆ ಅಥವಾ ಯಾವುದೇ ರೀತಿಯ ಜಮೀನನ್ನು ನೀವು ಹೊಂದಿದ್ದರೆ ಆಧಾರ್ ಜೊತೆಗೆ ತಕ್ಷಣ ಲಿಂಕ್ ಮಾಡಿಕೊಳ್ಳಬೇಕು.

ಭಾನುವಾರವು ನೋಂದಣಿ ಕಚೇರಿ ತೆರೆದಿರುತ್ತದೆ!

ಈ ರೀತಿ ಪಹಣಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಲು ಪ್ರತಿದಿನ ಉಪ ನೋಂದಣಾಧಿಕಾರಿ ಕಚೇರಿಗೆ ಜನ ಬರುತ್ತಲೇ ಇರುತ್ತಾರೆ. ಹಾಗಾಗಿ ಭಾನುವಾರ ಕೂಡ ಇನ್ನು ಮುಂದೆ ಸಬ್ ರಿಜಿಸ್ಟರ್ ಕಚೇರಿ ತೆರೆದಿರುತ್ತದೆ.

Aadhaar linking is mandatory for land and property Documents

Follow us On

FaceBook Google News

Aadhaar linking is mandatory for land and property Documents