ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸ್ವೀಕಾರ; ಹೊಸ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್

ಬಿಪಿಎಲ್ ರೇಷನ್ (BPL Ration card) ಕಾರ್ಡ್ ಅನ್ನು ಸರಿಯಾದ ಬಳಕೆ ಮಾಡಿಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಕಾರ್ಡ್ ಕಳೆದುಕೊಳ್ಳುತ್ತಿದ್ದಾರೆ

ದಿನದಿಂದ ದಿನಕ್ಕೆ ರೇಷನ್ ಕಾರ್ಡ್ (ration card) ಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಒಂದು ಕಡೆ ತಮ್ಮ ಬಳಿ ಇದ್ದ ಬಿಪಿಎಲ್ ರೇಷನ್ (BPL Ration card) ಕಾರ್ಡ್ ಅನ್ನು ಸರಿಯಾದ ಬಳಕೆ ಮಾಡಿಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಕಾರ್ಡ್ ಕಳೆದುಕೊಳ್ಳುತ್ತಿದ್ದಾರೆ.

ಅಂದರೆ ಸರ್ಕಾರ ಅಂತಹ ರೇಷನ್ ಕಾರ್ಡ್ ರದ್ದು ಪಡಿಸುತ್ತಿದೆ. ಇನ್ನೊಂದು ಕಡೆ ಇಷ್ಟು ದಿನಗಳು ಅರ್ಜಿ ಸಲ್ಲಿಸಿ ಕುಳಿತಿದ್ದ ಜನರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು. ಇದರ ಜೊತೆಗೆ ಸರ್ಕಾರ ಮತ್ತೊಂದು ಖುಷಿಯ ವಿಚಾರವನ್ನು ಸಾರ್ವಜನಿಕರಿಗೆ ತಿಳಿಸಿದೆ.

ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್; ಈ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ!

ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸ್ವೀಕಾರ; ಹೊಸ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್ - Kannada News

ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಒಂದಾದರ ಮೇಲೆ ಒಂದರಂತೆ ಬಿಡುಗಡೆ ಮಾಡುತ್ತಾ ಬಂತು. ಈ ಎಲ್ಲ ಯೋಜನೆಗಳು ಸಾಮಾನ್ಯರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ಹೆಚ್ಚು ಅನುಕೂಲ ಮಾಡಿಕೊಡುವಂತಹ ಯೋಜನೆ ಆಗಿದೆ .

ಯಾರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿಲ್ಲವೋ ಅಂತವರಿಗೆ ಸರಕಾರದ ಹಲವು ಯೋಜನೆಗಳ ಪ್ರಯೋಜನ ಸಿಗದೇ ಇರಬಹುದು.

ಹೀಗಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕಾಯುತ್ತಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ, ಕಳೆದ ಎರಡುವರೆ ವರ್ಷಗಳಿಂದ ವಿತರಣೆ ಆಗದೆ ಹಾಗೆ ಉಳಿದಿದ್ದ ಮೂರು ಲಕ್ಷದಷ್ಟು ಹೊಸ ಪಡಿತರ ಕಾರ್ಡ್ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಇದರಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಗಳು ಇದ್ದು ಅದನ್ನು ಫಲಾನುಭವಿಗಳಿಗೆ ಅವರ ಆದಾಯಕ್ಕೆ ತಕ್ಕಂತೆ ವಿತರಣೆ ಮಾಡಲಾಗುವುದು.

ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ರೈತರಿಗೆ 50% ಸಹಾಯಧನ! ಅರ್ಜಿ ಆಹ್ವಾನ

BPL Ration Cardಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ! (Apply for new ration card)

ಇನ್ನು ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಬಯಸುವವರು ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ತಿದ್ದುಪಡಿ ಮಾಡಿಕೊಳ್ಳಲು ಕೂಡ ಅವಕಾಶ ನೀಡಲಾಗುತ್ತದೆ ನೀವು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಹಾಗೂ ಪಡಿತರ ಚೀಟಿಯಲ್ಲಿ ಅಗತ್ಯ ಇರುವ ನವೀಕರಣವನ್ನು ಕೂಡ ಮಾಡಿಸಿಕೊಳ್ಳಬಹುದು.

ಜಮೀನು, ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಕಡ್ಡಾಯ! ಸರ್ಕಾರ ಖಡಕ್ ವಾರ್ನಿಂಗ್

ಪಡಿತರ ಚೀಟಿ ಪಡೆಯಲು ಬೇಕಾಗಿರುವ ದಾಖಲೆಗಳು! (Needed documents)

ಆಧಾರ್ ಕಾರ್ಡ್
ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ಮಾಹಿತಿ
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ವಿಳಾಸ ಪುರಾವೆ
ಅರ್ಜಿ ಸಲ್ಲಿಸುವಾಗ ಕುಟುಂಬದ ಎಲ್ಲಾ ಸದಸ್ಯರು ಸೇವ ಕೇಂದ್ರಕ್ಕೆ ಹೋಗಬೇಕು ಎನ್ನುವುದನ್ನು ನೆನಪಿಡಿ.

ಮಹಿಳೆಯರಿಗೆ ಒಂದು ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ!

ಇನ್ನು ಕೆಲವು ಜಿಲ್ಲೆಗಳಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಮಾರ್ಚ್ 9ನೇ ತಾರೀಖಿನಿಂದ ಅವಕಾಶ ಮಾಡಿಕೊಡಲಾಗಿದೆ. ನೀವು ನಿಮ್ಮ ಹತ್ತಿರದ ಸೇವಾ ಕೇಂದ್ರದಲ್ಲಿ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಹೋಗಿ ಅಲ್ಲಿಯೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ತಿದ್ದುಪಡಿ ಮಾಡಿಕೊಳ್ಳಬಹುದು.

apply for ration card, Big update about new ration card

Follow us On

FaceBook Google News

apply for ration card, Big update about new ration card