ರೇಷನ್ ಕಾರ್ಡ್ ಅಪ್ಡೇಟ್ ಬಗ್ಗೆ ಮಹತ್ವದ ಆದೇಶ! ಹೊಸ ನಿಯಮ ತಂದ ಸರ್ಕಾರ
ಇಂದು ನಾವು ಎಲ್ಲಾ ವಿಷಯದಲ್ಲಿ ಹೇಗೆ up to date ಆಗಿರ್ಬೇಕೋ ಅದೇ ರೀತಿ ನಮ್ಮ ಬಳಿ ಇರುವ ದಾಖಲೆಗಳು ಕೂಡ ಹೊಸದಾಗಿಯೇ ಇರಬೇಕು. ಉದಾಹರಣೆಗೆ ನಾವು ಎಲ್ಲಾ ವಿಷಯಕ್ಕೂ ಆಧಾರ್ ಕಾರ್ಡ್ (Aadhaar Card) ಬಳಸುತ್ತೇವೆ ಆದರೆ ಆಧಾರ್ ಕಾರ್ಡ್ ನಲ್ಲಿ 10 ವರ್ಷಕ್ಕಿಂತ ಹಳೆಯದಾಗಿರುವ ಮಾಹಿತಿ ಇದ್ದರೆ ಅದು ಈಗಿನ ದಿನಕ್ಕೆ ಸರಿ ಹೋಗದೆ ಇದ್ದಲ್ಲಿ ಆ ಆಧಾರ್ ಕಾರ್ಡ್ ವ್ಯರ್ಥವಾಗುತ್ತದೆ. ಅದನ್ನು ನೀವು ಬೇರೆ ಎಲ್ಲಿಯೂ ದಾಖಲೆಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ.
ಇದೇ ರೀತಿ ಇನ್ನೊಂದು ಮುಖ್ಯವಾಗಿರುವ ದಾಖಲೆ ರೇಷನ್ ಕಾರ್ಡ್ (ration card),, ಹೌದು, ಬಡತನ ರೇಖೆಗಿಂತ ಕೆಳಗಿರುವವರು ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುತ್ತಾರೆ. ಅದೇ ರೀತಿ ಸ್ವಲ್ಪ ಉಳ್ಳವರು ದಾಖಲೆಗಾಗಿ ಎಪಿಎಲ್ ಕಾರ್ಡ್ (APL Card) ಪಡೆದುಕೊಳ್ಳಬಹುದು.
ಆದರೆ ಈ ಕಾರ್ಡ್ ಕೂಡ ಅಪ್ಡೇಟ್ ಆಗಿರದೆ ಇದ್ದರೆ ಸರ್ಕಾರ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
ಎರಡು ತಿಂಗಳ ಅನ್ನಭಾಗ್ಯ ಯೋಜನೆ ಹಣ ಬರದೇ ಇದ್ರೆ ತಕ್ಷಣ ಈ ಕೆಲಸ ಮಾಡಿ!
ಈ ಕೆಲಸಗಳಿಗೆ ಬೇಕು ರೇಷನ್ ಕಾರ್ಡ್!
ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮೊದಲ ಜವುಗಳನ್ನು ಪಡೆದುಕೊಳ್ಳುವುದಕ್ಕೂ ಕೂಡ ವಿಳಾಸದ ಪುರಾವೆಯಾಗಿ ರೇಷನ್ ಕಾರ್ಡ್ ವಿತರಣೆ ಮಾಡಬಹುದು. ಅದರಲ್ಲೂ ಹೊಸದಾಗಿ ವಿತರಣೆ ಆಗಲಿರುವ ರೇಷನ್ ಕಾರ್ಡ್ ಅನ್ನು ಏರ್ಪೋರ್ಟ್ ನಲ್ಲಿ ದಾಖಲೆಯಾಗಿಯೂ ಬಳಸಿಕೊಳ್ಳಬಹುದು ಎಂದು ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಇದೆಲ್ಲದರ ಹೊರತಾಗಿ ಸರ್ಕಾರದ ಯೋಜನೆಗಳು ನಿಮ್ಮ ಕೈ ಸೇರಬೇಕು ಅಂದ್ರೆ ರೇಷನ್ ಕಾರ್ಡ್ ಇದ್ಯಾ ಅನ್ನೋದು ಬಹಳ ಮುಖ್ಯವಾಗಿರುತ್ತೆ. ನೀವೇನಾದರೂ ಬಿಪಿಎಲ್ ಕಾರ್ಡ್ ಹೋಲ್ಡರ್ ಆಗಿದ್ರೆ ಯಾವುದೇ ಕಾರಣಕ್ಕೂ ಸರ್ಕಾರದ ಯಾವ ಸ್ಕಿಮ್ ಕೂಡ ನಿಮ್ಮ ಕೈತಪ್ಪಿ ಹೋಗುವುದಿಲ್ಲ.
ಅಷ್ಟೇ ಅಲ್ಲ ಕಡಿಮೆ ಬಡ್ಡಿ ದರದಲ್ಲಿ ಸಾಲ (Loan) ಸೌಲಭ್ಯ ಪಡೆದುಕೊಳ್ಳುವುದಕ್ಕೂ ಕೂಡ ನಿಮ್ಮ ಬಳಿ ಇರುವ ಪಡಿತರ ಚೀಟಿಯಿಂದ ಸಾಧ್ಯ!
ರೈತರಿಗಾಗಿ ರಾತ್ರೋ-ರಾತ್ರಿ ಹೊಸ ಯೋಜನೆ ಜಾರಿಗೆ ತಂದ ಸರ್ಕಾರ! ಅರ್ಜಿ ಸಲ್ಲಿಸಿ
ಪಡಿತರ ಚೀಟಿ ಅಪ್ಡೇಟ್!
ಇಷ್ಟೆಲ್ಲಾ ಪ್ರಯೋಜನಕಾರಿಯಾಗಿರುವ ಪಡಿತರ ಚೀಟಿ ನಿಮ್ಮ ಬಳಿ ಇದ್ದರೆ ಅದನ್ನು ಅಪ್ಡೇಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿತ್ತು.
ಈಗ ಮತ್ತೊಮ್ಮೆ ತಿದ್ದುಪಡಿ ಮಾಡಿಕೊಳ್ಳಲು ಸರ್ಕಾರದಿಂದ ಅನುಮತಿ ಸಿಕ್ಕಿದ್ದು ಅಗತ್ಯ ಇರುವ ಬದಲಾವಣೆಗಳನ್ನು ನೀವು ಪಡಿತರ ಜೊತೆಯಲ್ಲಿ ಮಾಡಿಕೊಳ್ಳಬಹುದು.
ಪಡಿತರ ಚೀಟಿಯಲ್ಲಿ ಬದಲಾವಣೆಯನ್ನು ನೀವು ನಿಮ್ಮ ಹತ್ತಿರದ ಸೇವಾಕೇಂದ್ರಕ್ಕೆ ಹೋಗಿ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಮುಖ್ಯ ದಾಖಲೆಯಾಗಿ ನೀಡಬೇಕಾಗುತ್ತದೆ.
ರೈತರಿಗೆ ಸಿಹಿ ಸುದ್ದಿ! 19 ಲಕ್ಷ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ; ಖಾತೆ ಚೆಕ್ ಮಾಡಿಕೊಳ್ಳಿ
ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್!
ಸಾಕಷ್ಟು ಜನ ಅನ್ನೋ ವಾಕ್ಯ ಯೋಜನೆಯ ಹಣ ತಮ್ಮ ಖಾತೆಗೆ (Bank Account) ಡಿ ಬಿ ಟಿ ಆಗುತ್ತಿಲ್ಲ ಎಂದು ಕಂಪ್ಲೇಂಟ್ ಮಾಡುತ್ತಾರೆ, ಆದರೆ ಈ ರೀತಿ ಹಣ ವರ್ಗಾವಣೆ ಆಗದೆ ಇರುವುದಕ್ಕೆ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು ಕೂಡ ಒಂದು ಕಾರಣ ಆಗಿರಬಹುದು. ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅಲ್ಲಿ ಮಾಡಿಸಿಕೊಳ್ಳಬಹುದು.
ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಗೆ ಇನ್ನೂ ಬರದಿದ್ರೆ ಈ ರೀತಿ ಮಾಡಿ
ಆಧಾರ್ ಅಪ್ಡೇಟ್ ಮಾಡಿಸಿ!
ನಿಮ್ಮ ಬಳಿ ಇರುವ ರೇಷನ್ ಕಾರ್ಡ್ ಅಪ್ಡೇಟೆಡ್ ಆಗಿದ್ದು ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಳೆಯದಾಗಿದ್ದರೆ ಲಿಂಕ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಕೂಡ ಬಹಳ ಮುಖ್ಯವಾಗಿರುತ್ತದೆ
ಇದಕ್ಕಾಗಿ ಸರ್ಕಾರ ಗಡುವನ್ನು ವಿಸ್ತರಿಸಿದೆ. ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿಸಿಕೊಳ್ಳಬಹುದು. ಈ ರೀತಿ ನಿಮ್ಮ ಬಳಿ ಇರುವ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಎರಡು ಅಪ್ಡೇಟ್ ಆಗಿದ್ರೆ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು.
ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸ್ವೀಕಾರ; ಹೊಸ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್
Important order about ration card update, Government brought new rules