ಬಿಗ್ ಅಪ್ಡೇಟ್! ಇಂತಹ ಮಹಿಳೆಯರಿಗೆ 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆ ಆಗೋಲ್ಲ
ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿ ಸಮಾನವಾಗಿ ಮಹಿಳೆಯರು ನಿಂತಿದ್ದಾರೆ. ಮಹಿಳಾ ಪೈಲೆಟ್ (pilot) ನಿಂದ ಹಿಡಿದು ಮಹಿಳಾ ಸ್ಕೂಬಾ ಡೈಯಿಂಗ್ (scuba diving) ಟ್ರೈನರ್ ವರೆಗೂ ಕೂಡ ನೀವು ಕಾಣಬಹುದು.
ಆದರೆ ಇನ್ನೊಂದಿಷ್ಟು ಮಹಿಳೆಯರು ಮನೆಯಲ್ಲಿ ಗಂಡ, ಮಕ್ಕಳು ಸಂಸಾರ ಅಂತ ಜೀವನ ನಡೆಸುತ್ತಾರೆ. ಅಂತವರಿಗೆ ಆರ್ಥಿಕವಾಗಿಯೂ ಕೂಡ ಯಾವುದೇ ರೀತಿಯ ನೆರವು ಸಿಕ್ಕಿರದೆ ಇರಬಹುದು.
ಅವರ ತಿಂಗಳ ಖರ್ಚನ್ನು ನಿಭಾಯಿಸುವುದಕ್ಕೆ ಸಾಧ್ಯವಾಗದೇ ಇರಬಹುದು. ವಿಶೇಷವಾಗಿ ಇಂತಹ ಮಹಿಳೆಯರನ್ನೇ ಗಮನಕ್ಕೆ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಅಂಥವರ ಆರ್ಥಿಕ ಸ್ವಾವಲಂಬನೆ (financial empowerment) ಗಾಗಿ ಸಣ್ಣ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುತ್ತಿದೆ.
ರೇಷನ್ ಕಾರ್ಡ್ ಅಪ್ಡೇಟ್ ಬಗ್ಗೆ ಮಹತ್ವದ ಆದೇಶ! ಹೊಸ ನಿಯಮ ತಂದ ಸರ್ಕಾರ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಮೂಲಕ ಮಹಿಳೆಯರ ಖಾತೆಗೆ (Bank Account) ಪ್ರತಿ ತಿಂಗಳು 2,000 ರೂ.ಜಮಾ ಮಾಡುತ್ತಿದೆ.
ಹೌದು, ಇಂದು ಕೋಟ್ಯಾಂತರ ಮಹಿಳೆಯರು ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಆರು ತಿಂಗಳಿನಿಂದ ಪ್ರತಿ ತಿಂಗಳು 2000 ರೂಪಾಯಿಗಳಂತೆ ಸಾಕಷ್ಟು ಮಹಿಳೆಯರ ಖಾತೆಯಲ್ಲಿ 14,000 ಜಮಾ ಆಗಿದೆ. ಇದು ಮಹಿಳೆಯರಿಗೆ ಪ್ರತಿ ತಿಂಗಳು ತಮ್ಮ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ತಕ್ಷಣ ಈ ಕೆಲಸ ಮಾಡಿ ಹಣ ಬರುತ್ತೆ!
ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಾರದೆ ಇದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಥವಾ ಸರ್ಕಾರ ತಿಳಿಸಿರುವ ನಿಯಮಗಳಲ್ಲಿ ಯಾವುದೋ ಒಂದು ಸರಿಯಾಗಿ ಇಲ್ಲ ಎಂದೇ ಅರ್ಥ. ಯಾಕಂದ್ರೆ ಇದೊಂದು ಆಟೋಮ್ಯಾಟಿಕ್ ಪ್ರೋಸೆಸ್ ಆಗಿದ್ದು, ನೀವು ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾಗಿ ಇಟ್ಟುಕೊಳ್ಳದೆ ಇದ್ರೆ ಖಾತೆಗೆ ಹಣ ಜಮಾ ಆಗುವುದಿಲ್ಲ.
ಎರಡು ತಿಂಗಳ ಅನ್ನಭಾಗ್ಯ ಯೋಜನೆ ಹಣ ಬರದೇ ಇದ್ರೆ ತಕ್ಷಣ ಈ ಕೆಲಸ ಮಾಡಿ!
ಸರ್ಕಾರ ಈಗಾಗಲೇ ತಿಳಿಸಿರುವಂತೆ NPCI mapping ಎನ್ನುವುದು ಕಡ್ಡಾಯವಾಗಿದೆ. ಇದನ್ನು ಬ್ಯಾಂಕ್ ಗೆ ಹೋಗಿ ಮಾಡಿಸಬೇಕು. ಒಂದು ವೇಳೆ ಮ್ಯಾಪಿಂಗ್ ಆಗದೆ ಇದ್ರೆ ಹಣ ಜಮಾ ಆಗುವುದಿಲ್ಲ ಅದಕ್ಕಾಗಿ ಬ್ಯಾಂಕ್ ಗೆ ಹೋಗಿ ಇದೊಂದು ಕೆಲಸವನ್ನು ಮಾಡಿಸಿಕೊಳ್ಳಿ.
ರೈತರಿಗಾಗಿ ರಾತ್ರೋ-ರಾತ್ರಿ ಹೊಸ ಯೋಜನೆ ಜಾರಿಗೆ ತಂದ ಸರ್ಕಾರ! ಅರ್ಜಿ ಸಲ್ಲಿಸಿ
7ನೇ ಕಂತಿನ ಹಣ ಬಿಡುಗಡೆ!
ಫೆಬ್ರುವರಿ ತಿಂಗಳ ಹಣ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ ಈಗಾಗಲೇ 7ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರು ಏಳನೇ ಕಂತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಹಾಗಂತ ಮಹಿಳೆಯರು ಟೆನ್ಶನ್ ಮಾಡಿಕೊಳ್ಳುವ ಅಗತ್ಯ ಇಲ್ಲ. ನಿಮಗೆ ಇಲ್ಲಿಯವರೆಗೆ ಆರು ಕಂತಿನ ಹಣ ಬಂದಿದ್ದರೆ, ಮಾರ್ಚ ತಿಂಗಳ 31 ನೇ ತಾರೀಖಿನ ಒಳಗೆ 7ನೇ ಕಂತಿನ ಹಣವು ಜಮಾ ಆಗುತ್ತದೆ.
ಒಂದು ವೇಳೆ ಕಳೆದ ಕೆಲವು ತಿಂಗಳ ಹಣ ಬಂದಿಲ್ಲ ಎಂದರೆ ಅಥವಾ ಅರ್ಜಿ ಸಲ್ಲಿಸಿದ ನಂತರ ಒಂದೇ ಒಂದು ಕಂತಿನ ಹಣ ಬಂದಿಲ್ಲ ಎನ್ನುವುದಾದರೆ ನೀವು ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅಂತಹ ಸಂದರ್ಭದಲ್ಲಿ ನೀವು ಸರ್ಕಾರದ ನಿಯಮಗಳನ್ನು ಮತ್ತೊಮ್ಮೆ ತಿಳಿದುಕೊಂಡು ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಂಡು ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಗೆ ಇನ್ನೂ ಬರದಿದ್ರೆ ಈ ರೀತಿ ಮಾಡಿ
Gruha Lakshmi money of 6th and 7th installment cannot be deposited for such women