Karnataka NewsBangalore News

ಜಮೀನು, ಆಸ್ತಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವವರಿಗೆ ಸರ್ಕಾರದಿಂದ ಹೊಸ ರೂಲ್ಸ್!

ನಾವು ಜಮೀನು ಅಥವಾ ಆಸ್ತಿ ಖರೀದಿ ಮಾಡಿದರೆ ಸಾಕಾಗುವುದಿಲ್ಲ ಅದನ್ನು ಸರ್ಕಾರದ ಡೇಟಾ ಬೇಸ್ ನಲ್ಲಿ ಉಳಿದುಕೊಳ್ಳುವಂತೆ, ರಿಜಿಸ್ಟ್ರೇಷನ್ (property registration mandatory) ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯ. ನೀವು ನಿಮ್ಮ ಹೆಸರಿಗೆ ಆಸ್ತಿ ಮಾಡಿಕೊಂಡಿದ್ದರೆ ನಂತರ ಅದನ್ನು ಯಾರು ಬದಲಾಯಿಸಲು ಅಥವಾ ವಂಚನೆ ಮಾಡಲು ಸಾಧ್ಯವಿಲ್ಲ.

ಆಸ್ತಿ ವಿಚಾರಕ್ಕೆ ಬಂದ್ರೆ ಸಾಕಷ್ಟು ವಂಚನೆಗಳು ನಡೆಯುತ್ತಲೇ ಇರುತ್ತದೆ. ಇವುಗಳನ್ನು ತಪ್ಪಿಸುವುದಕ್ಕೆ ಸರ್ಕಾರ ಬದ್ಧವಾಗಿದ್ದು ಹೀಗಾಗಿ ಬೇರೆ ಬೇರೆ ಬದಲಾವಣೆಗಳನ್ನು ಕಂದಾಯ ಇಲಾಖೆ (revenue department) ಜಾರಿಗೆ ತಂದಿದೆ.

Big update for those who have a house in government land

ಇದೀಗ ಜನರ ಆಸ್ತಿ ನೋಂದಣಿ ಮಾಡಿಕೊಳ್ಳುವ ಜಿಲ್ಲಾ ನೋಂದಣಾಧಿಕಾರಿ (district registrar office) ಕಚೇರಿಯನ್ನು ಭಾನುವಾರ ತೆರೆದಿರುವುದರ ಬಗ್ಗೆ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ.

ನಿಮ್ಮ ಆಸ್ತಿ, ಜಮೀನಿನ ದಾಖಲೆಗಳನ್ನು ಒಂದೇ ಕ್ಲಿಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ! ಡೈರೆಕ್ಟ್ ಲಿಂಕ್

ರಿಜಿಸ್ಟ್ರೇಷನ್ ಬಗ್ಗೆ ಸರ್ಕಾರದ ಹೊಸ ರೂಲ್ಸ್!

ಆಸ್ತಿ ಖರೀದಿ ಮಾಡಿದ ಮೇಲೆ ಅದನ್ನು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು ಅಲ್ಲಿಗೆ ನೀವು ಬೇರೆಯಿಂದ ಅದನ್ನ ಖರೀದಿ ಮಾಡಿದ್ದರೆ, ಯಾವುದೇ ಸಮಸ್ಯೆ ಇಲ್ಲದೆ ಆ ಆಸ್ತಿ ನಿಮ್ಮದೇ ಎಂದಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಆಸ್ತಿ ನೋಂದಣಿ (property registration) ಕಾರ್ಯ ಬಹಳ ಹೆಚ್ಚಾಗಿದೆ. ಇದರಿಂದ ಜಿಲ್ಲಾ ನೋಂದಣಾಧಿಕಾರಿ ಕಚೇರಿ ಸದಾ ಜನರಿಂದ ತುಂಬಿರುತ್ತದೆ. ಹೀಗಾಗಿ ಜನರು ಸಕಾಲಕ್ಕೆ ಆಸ್ತಿ ಪತ್ರ ನೋಂದಣಿ ಮಾಡಿಸಿಕೊಳ್ಳುವುದಕ್ಕೆ ಸಾಕಷ್ಟು ಸಮಯ ಕಾಯಬೇಕು.

ಸಾರ್ವಜನಿಕರಿಗೆ ಆಗುತ್ತಿರುವ ಈ ತೊಂದರೆಯನ್ನು ನಿವಾರಿಸುವ ಸಲುವಾಗಿ ಸರ್ಕಾರ ಜಿಲ್ಲಾ ನೋಂದಣಾಧಿಕಾರಿ ಕಚೇರಿಯನ್ನು ಭಾನುವಾರವು ತೆರೆದಿಡಲು ನಿರ್ಧರಿಸಿದೆ. ಇದು ಸರ್ಕಾರದ ಐತಿಹಾಸಿಕ ನಿರ್ಣಯಗಳಲ್ಲಿ ಒಂದು ಎನ್ನಬಹುದು. ಯಾಕೆಂದರೆ ಸರ್ಕಾರದ ಒಂದು ಕಚೇರಿ ಭಾನುವಾರವೂ ಕೂಡ ಕಾರ್ಯ ನಿರ್ವಹಿಸುತ್ತಿರುವುದು ಹಿಸ್ಟರಿಯಲ್ಲೇ ಮೊದಲು ಎನ್ನುವುದು.

ಮಾರ್ಚ್ ತಿಂಗಳ ಎಲ್ಲಾ ಪಿಂಚಣಿ ಹಣ ಬಿಡುಗಡೆ! ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ

Property Documentsಹೌದು, ಸರ್ಕಾರದ ಆದೇಶದ ಮೇರೆಗೆ ಬೆಂಗಳೂರಿನ ಐದು ನೋಂದಣಿ ಕಚೇರಿಗಳು ಅಲ್ಟರ್ನೇಟಿವ್ ವಾರಗಳಲ್ಲಿ ಭಾನುವಾರವೂ ಕೂಡ ಕಾರ್ಯ ನಿರ್ವಹಿಸಲಿವೆ. ಇನ್ನು ಭಾನುವಾರದ ದಿನ ಕೆಲಸ ಮಾಡಿದ ಸಿಬ್ಬಂದಿಗಳು ಮಂಗಳವಾರ ರಜೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಉಪ ನೋಂದಣಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ, ಮಹಾಪರಿ ವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಿಗೆ ಸರ್ಕಾರದ ಆದೇಶದ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಇನ್ನು ಕಚೇರಿಯ ವೆಬ್ಸೈಟ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಲು ಸರ್ಕಾರ ತಿಳಿಸಿದೆ.

ಬಿಗ್ ಅಪ್ಡೇಟ್! ಇಂತಹ ಮಹಿಳೆಯರಿಗೆ 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆ ಆಗೋಲ್ಲ

ಇದೊಂದು ಜನಸ್ನೇಹಿ ಬದಲಾವಣೆ ಆಗಿದ್ದು ಆಸ್ತಿ ನೋಂದಣಿ ಮಾಡಿಸಿಕೊಳ್ಳುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಇನ್ನು ಸರ್ಕಾರ ತಂದಿರುವ ಈ ಬದಲಾವಣೆಗೆ ಸಂಬಂಧಪಟ್ಟ ಹಾಗೆ ಎಲ್ಲಾ ಕಚೇರಿಗೆ ಮಾಹಿತಿ ರವಾನಿಸಲಾಗಿದೆ.

ಇನ್ನು ಈ ಬದಲಾವಣೆಯಿಂದ ಯಾವುದೇ ರೀತಿಯ ಸಮಸ್ಯೆ ಆಗದೆ ಇರುವಂತೆ ಸರಕಾರ ಮುತುವರ್ಜಿವಹಿಸಿದೆ. ಇನ್ನು ಸಾರ್ವಜನಿಕರು ತಮ್ಮ ದಸ್ತಾವೇಜುಗಳನ್ನು ಯಾವುದೇ ಸಮಸ್ಯೆ ಇಲ್ಲದೆ ರಿಜಿಸ್ಟರ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಒಟ್ಟಿನಲ್ಲಿ ಇನ್ನು ಮುಂದೆ ಸಬ್ ರಿಜಿಸ್ಟ್ರಾರ್ ಕಚೇರಿಗಳು ಅಗತ್ಯ ಇದ್ದಾಗ ಭಾನುವಾರವೂ ಕೂಡ ತೆರೆದಿರುತ್ತದೆ ಎಂಬುದನ್ನು ಗಮನಿಸಿ.

ರೇಷನ್ ಕಾರ್ಡ್ ಅಪ್ಡೇಟ್ ಬಗ್ಗೆ ಮಹತ್ವದ ಆದೇಶ! ಹೊಸ ನಿಯಮ ತಂದ ಸರ್ಕಾರ

New rules from the government for those who register land and property

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories