ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ಹಣದ ಮಹತ್ವದ ಅಪ್ಡೇಟ್ ನೀಡಿದ ಸರ್ಕಾರ
ಅನ್ನಭಾಗ್ಯ ಯೋಜನೆ (Annabhaugya scheme) ರಾಜ್ಯದ ಜನತೆಗೆ ಬಹಳ ಅನುಕೂಲವಾಗಿದೆ ಎನ್ನಬಹುದು. ಕೇಂದ್ರ ಸರ್ಕಾರದ ಕಡೆಯಿಂದ ಪಡೆದುಕೊಳ್ಳಬಹುದು. ಅದರ ಜೊತೆಗೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುತ್ತದೆ
ಇದರಿಂದಲೂ ಕೂಡ ಸಾಕಷ್ಟು ಜನರಿಗೆ ಅನುಕೂಲವಾಗಿದೆ ಎನ್ನಬಹುದು. ಇದೀಗ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಆಗಲಿರುವ ಅನ್ನಭಾಗ್ಯ ಯೋಜನೆಗಾಗಿ ಕಾಯುತ್ತಿರುವವರಿಗೆ ಸರ್ಕಾರ ಮಹತ್ವದ ನಿರ್ಧಾರವನ್ನು ತಿಳಿಸಿದೆ.
ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಹೊಸ ಅಪ್ಡೇಟ್
ರಾಜ್ಯ ಸರ್ಕಾರ ಹೇಳಿಕೊಂಡಂತೆ 5 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ (BPL Ration Card) ಹೊಂದಿರುವ ಕುಟುಂಬಕ್ಕೆ ನೀಡಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಸರ್ಕಾರಕ್ಕೆ ಅಷ್ಟು ಅಕ್ಕಿಯನ್ನು ಹೊಂದಿಸಲು ಆಗದೆ ಇರುವ ಕಾರಣ ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಪ್ರತಿಯೊಬ್ಬ ಸದಸ್ಯ 5 ಕೆಜಿಗೆ 170ಗಳನ್ನು ಪಡೆದುಕೊಳ್ಳುತ್ತಾರೆ. ಇದೇ ರೀತಿ ಈಗಾಗಲೇ ಆರು ತಿಂಗಳವರೆಗೆ ಸಾಕಷ್ಟು ಹಣ ಅನ್ನಭಾಗ್ಯ ಯೋಜನೆಗಾಗಿ ಸರ್ಕಾರ ಬಿಡುಗಡೆ ಮಾಡಿದೆ.
ಹೊಸ ಅಪ್ಡೇಟ್ ನೀಡಿದ ರಾಜ್ಯ ಸರ್ಕಾರ! (New update)
ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಸಿಗಬೇಕು ಅಂದ್ರೆ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿರಬೇಕು ಹಾಗೂ ಅದಕ್ಕೆ ಈಕೆ ವೈ ಸಿ (E-KYC) ಆಗಿರಬೇಕು. ಇತ್ತೀಚೆಗೆ ಒಬ್ಬ ಫಲಾನುಭವಿ ಮಹಿಳೆ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.
“ನಾನು ಅರ್ಜಿ ಸಲ್ಲಿಸಿದ್ದು ಸರಿಯಾಗಿಯೇ ಇತ್ತು. ಆದರೆ ಬ್ಯಾಂಕ್ ಖಾತೆ ಸಾಮಾನ್ಯ ಬ್ಯಾಂಕ್ ನದ್ದಾಗಿತ್ತು. ಅದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆಯನ್ನು ತೆರೆದೆ, ಅಲ್ಲಿಂದ ನನಗೆ ಹಣ ಬರಲು ಆರಂಭವಾಯಿತು ಎಂದಿದ್ದಾರೆ. ಸರ್ಕಾರವು ಕೂಡ ಇದನ್ನ ಸೂಚಿಸುತ್ತದೆ ಮತ್ತು ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆದರು ಹಣ ಜಮಾ ಆಗುತ್ತದೆ (Money Deposit) ಎಂದು ತಿಳಿಸಲಾಗಿತ್ತು.
ಬರ ಪರಿಹಾರ ಹಣ ಪಡೆದುಕೊಳ್ಳಲು ಈ ದಾಖಲೆಗಳನ್ನು ಸಲ್ಲಿಸಿ! ಇಲ್ಲಿದೆ ಮಾಹಿತಿ
ಮಾರ್ಚ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ ಅನ್ನಭಾಗ್ಯ ಯೋಜನೆಯು ಹಣವನ್ನು ಕೂಡ ಈ ಕೆ ವೈ ಸಿ, ಎನ್ ಪಿ ಸಿ ಐ ಮ್ಯಾಪಿಂಗ್ ಮಾಡಿಕೊಳ್ಳುವುದರ ಮೂಲಕ ಪಡೆದುಕೊಳ್ಳಬಹುದು.
ಗ್ರಾಮ ಪಂಚಾಯತ್ ಉದ್ಯೋಗಕ್ಕೆ ಅರ್ಜಿ ಆಹ್ವಾನ! 63,000 ಸಂಬಳ; ತಕ್ಷಣ ಅರ್ಜಿ ಸಲ್ಲಿಸಿ
ಅನ್ನಭಾಗ್ಯ ಹಣ ಜಮಾ ಆಗಿದ್ಯಾ ಅಂತ ಚೆಕ್ ಮಾಡಿ!
https://ahara.kar.nic.in/lpg/ ನಿಮ್ಮ ಅನ್ನ ಭಾಗ್ಯ DBT ಸ್ಟೇಟಸ್ ಚೆಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಬೇರೆ ಬೇರೆ ಜಿಲ್ಲೆಗೆ ಬೇರೆ ಬೇರೆ ಲಿಂಕ್ ಗಳು ಕಾಣಿಸುತ್ತವೆ, ನಿಮ್ಮ ಜಿಲ್ಲೆ ಯಾವುದು ಎನ್ನುವುದನ್ನು ಆಯ್ಕೆ ಮಾಡಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ಹೊಸ ಪುಟ ತೆರೆದುಕೊಳ್ಳುತ್ತಿದೆ. ಅಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಕ್ಯಾಪ್ಚ ನಂಬರ್ ನಮೂದಿಸಿದರೆ, ನೀವು ಯಾವ ತಿಂಗಳನ್ನು ಆಯ್ಕೆ ಮಾಡಿರುತ್ತಿರೋ ಆ ತಿಂಗಳಿನಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಇಲ್ವಾ ಅಂತ ತಿಳಿಯಬಹುದು.
ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಹೀಗೆ ಅರ್ಜಿ ಸಲ್ಲಿಸಿ
The government has given an important update of Annabhagya Yojana