ಮಾರ್ಚ್ 25ರೊಳಗೆ ಈ ಕೆಲ್ಸ ಮಾಡದಿದ್ರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ

ಗ್ಯಾರಂಟಿ ಯೋಜನೆ (guarantee schemes) ಯ ಮೂಲಕ ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಜನರ ಜೀವನಮಟ್ಟ ಸುಧಾರಿಸಲು ಈ ಯೋಜನೆಗಳು ಸಹಕಾರಿಯಾಗಿವೆ.
ಇಂದು ಕೋಟ್ಯಾಂತರ ಸಾರ್ವಜನಿಕರು ಅನ್ನಭಾಗ್ಯ ಯೋಜನೆ (Annabhagya scheme) ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯುವ ನಿಧಿ ಯೋಜನೆ ಮೊದಲಾದ ಯೋಜನೆಯ ಮೂಲಕ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ.
ಇದರ ಜೊತೆಗೆ ಪಿಂಚಣಿ (pension schemes) ಯೋಜನೆಯ ಪ್ರಯೋಜನವನ್ನು ಕೂಡ ನಾವು ಪಡೆದುಕೊಳ್ಳುತ್ತಿದ್ದೇವೆ. ಆದರೆ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಮಾರ್ಚ್ 25ರ ಒಳಕ್ಕೆ ಈ ಕೆಲಸ ಮಾಡಿಕೊಳ್ಳದೆ ಇದ್ದರೆ ಈ ಮೇಲೆ ತಿಳಿಸಲಾಗಿರುವ ಯಾವ ಸರ್ಕಾರಿ ಯೋಜನೆಯ ಹಣ ನಿಮ್ಮ ಖಾತೆಗೆ (Bank Account) ಡಿ ಬಿ ಟಿ ಆಗುವುದಿಲ್ಲ.
ಕೃಷಿಭಾಗ್ಯ ಯೋಜನೆಯಲ್ಲಿ ನಿಮಗೂ ಸಹ ಹಣ ಸಿಗುತ್ತಾ? ಈ ರೀತಿ ಚೆಕ್ ಮಾಡಿಕೊಳ್ಳಿ
ಮಾರ್ಚ್ 25ರ ಒಳಗೆ ಈ ಕೆಲಸ ಮಾಡಿ!
ಸರ್ಕಾರದಿಂದ ಖಾತೆಗೆ ಹಣ ಜಮಾ ಮಾಡುವ ಪ್ರಕ್ರಿಯೆ ಸಂಪೂರ್ಣ ಆಟೋಮ್ಯಾಟಿಕ್ (automatic process) ಆಗಿಯೇ ಇರುತ್ತದೆ ಹಾಗಾಗಿ ನಿಮ್ಮ ಮಾಹಿತಿಗಳು digitalised ಆಗಿರಬೇಕು. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್, ಆಧಾರ್ ಕಾರ್ಡ್ ಲಿಂಕ್, ಕೆ ವೈ ಸಿ ಪ್ರತಿಯೊಂದು ಕಡ್ಡಾಯವಾಗಿರುತ್ತದೆ, ಇದ್ಯಾವುದು ಇಲ್ದಿದ್ರೆ ಸರ್ಕಾರದ ಹಣ ನಿಮ್ಮ ಖಾತೆಗೆ ಜಮಾ (Money Deposit) ಆಗುವುದಿಲ್ಲ.
ಮೊದಲು ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ಚೆಕ್ ಮಾಡಿಕೊಳ್ಳಿ
ಆಧಾರ್ ಕಾರ್ಡ್ ಹತ್ತು ವರ್ಷ ಆಗಿದ್ರೆ ಅಪ್ಡೇಟ್ ಮಾಡಿಸಿ!

ಇಂತಹ ಸಂದರ್ಭದಲ್ಲಿ ನೀವು ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಹೊಂದಿದ್ರೆ ಅದರ ಅಪ್ಡೇಟ್ ಮಾಡಿಸುವುದು ಬಹಳ ಮುಖ್ಯ. ಇಲ್ಲವಾದರೆ ಡಿಬಿಟಿ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಇಲ್ಲದೆ ಇದ್ರೆ ಅಪ್ಡೇಟ್ ಆದ್ರೂ ಮಾಡಿಸಬೇಕು.
ಉಚಿತ ಆಧಾರ್ ಅಪ್ಡೇಟ್ ಗೆ ಸಮಯವನ್ನು ಇನ್ನಷ್ಟು ವಿಸ್ತರಿಸಲಾಗಿದ್ದು ಜೂನ್ 14, 2024 ರ ವರೆಗೆ ಅವಕಾಶವಿದೆ. ಹಾಗಾಗಿ ನಿಮ್ಮ ಖಾತೆಗೆ DBT ಹಣ ಬರಲು ಮೊದಲು ಈ ಕೆಲಸ ಮಾಡಿ.
ಹೊಸ ರೇಷನ್ ಕಾರ್ಡ್ ಪಡೆಯೋಕೆ ಕಾಯ್ತಾ ಇರೋರಿಗೆ ಗುಡ್ ನ್ಯೂಸ್; ವಿತರಣೆಗೆ ದಿನಾಂಕ ಫಿಕ್ಸ್
ಬರುವುದೇ ಇಲ್ಲ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ!
ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅಂದರೆ 7ನೇ ಕಂತಿನ ಹಣವನ್ನು March ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು. ಮಾರ್ಚ್ 15ರಿಂದ ಆರಂಭವಾಗಿ ಮಾತು 31ರವರೆಗೆ ಅವಧಿ ಇರುತ್ತದೆ
ಈ ಅವಧಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಆದರೆ ಈಗ ಮೇಲೆ ತಿಳಿಸಿರುವಂತೆ ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳದಿದ್ದರೆ ನಿಮ್ಮ ಖಾತೆಗೆ ಇನ್ನು ಮುಂದೆ DBT ಹಣ ಬರುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ.
ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ಹಣದ ಮಹತ್ವದ ಅಪ್ಡೇಟ್ ನೀಡಿದ ಸರ್ಕಾರ
If this is not done by March 25, Annabhagya, Gruha Lakshmi Scheme money will not deposit



