ಕೃಷಿಭಾಗ್ಯ ಯೋಜನೆಯಲ್ಲಿ ನಿಮಗೂ ಸಹ ಹಣ ಸಿಗುತ್ತಾ? ಈ ರೀತಿ ಚೆಕ್ ಮಾಡಿಕೊಳ್ಳಿ
ರಾಜ್ಯದಲ್ಲಿ ರೈತರು ಅನುಭವಿಸುತ್ತಿರುವ ಬರಗಾಲದ ಸಮಸ್ಯೆ ಪರಿಹರಿಸುವ ಸಲುವಾಗಿ ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಅಡಿಯಲ್ಲಿ ರೈತರಿಗೆ ಸಹಾಯಧನ ನೀಡಲಾಗುವುದು.
ಯಾರಿಗೆ ಸಿಗಲಿದೆ ಕೃಷಿ ಭಾಗ್ಯ ಯೋಜನೆ! (Krishi Bhagya scheme)
ರಾಜ್ಯದ 24 ಜಿಲ್ಲೆಯ ನೂರಾರು ಪ್ರದೇಶಗಳನ್ನು ಆಯ್ಕೆ ಮಾಡಿ ಒಂದು ಪ್ಯಾಕೇಜ್ ನಂತೆಯೇ ಸಿದ್ಧಪಡಿಸಲಾಗಿದೆ. ಈ ಯೋಜನೆಯ ಮೂಲಕ ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಹನಿ ನೀರಾವರಿ ಘಟಕ ಸ್ಥಾಪನೆ, ಪಂಪ್ಸೆಟ್ ಮೊದಲಾದವುಗಳಿಗೆ ಸಹಾಯಧನ ಪಡೆಯಬಹುದು.
ಮೊದಲು ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ಚೆಕ್ ಮಾಡಿಕೊಳ್ಳಿ
ಐದು ನೀರಾವರಿ ಘಟಕಗಳಿಗೆ ನೀಡಲಾಗಲಿದೆ ಸಹಾಯಧನ!
* ಕ್ಷೇತ್ರ ಬದು ನಿರ್ಮಾಣ – ರೈತರ ಜಮೀನಿನಲ್ಲಿ ಮಳೆಯಿಂದ ಬಿದ್ದ ನೀರು ಪೋಲಾಗದಂತೆ ತಡೆಗಟ್ಟಲು ಕೃಷಿ ಹೊಂಡಕ್ಕೆ ಸುತ್ತಲೂ ಬದು ನಿರ್ಮಾಣ ಮಾಡಿಕೊಳ್ಳಬೇಕು. ಇದಕ್ಕೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ.
* ಕೃಷಿ ಹೊಂಡ ನಿರ್ಮಾಣ – ಮಳೆಯ ನೀರು ಎಲ್ಲಾ ರೀತಿಯ ಮಣ್ಣಿನ ಜಮೀನಿನಲ್ಲಿ ಸಂಗ್ರಹವಾಗುವಂತೆ ಕೃಷಿ ಹೊಂಡ ನಿರ್ಮಾಣ ಮಾಡಲು ನಿಗದಿತ ಅಳತೆಯ ಕೃಷಿ ಹೊಂಡಕ್ಕೆ ಸಹಾಯಧನ ಪಡೆಯಬಹುದು.
* ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ – ಕೃಷಿ ಹೊಂಡದಲ್ಲಿ ರಾತ್ರಿಯ ಸಮಯದಲ್ಲಿ ಅಥವಾ ಇತರ ಸಮಯದಲ್ಲಿ ಯಾವುದೇ ವ್ಯಕ್ತಿ ಅಥವಾ ಜಾನುವಾರುಗಳು ಬಿದ್ದು ಅನಾಹುತ ಆಗಬಾರದು ಎನ್ನುವ ಕಾರಣಕ್ಕೆ ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ ಮಾಡಿಕೊಳ್ಳಬೇಕು.
* ಪಂಪ್ಸೆಟ್ – ಕೃಷಿಹೊಂಡದಲ್ಲಿ ಸಂಗ್ರಹವಾದ ನೀರನ್ನು ಮೇಲೆತ್ತಲು ಮೋಟಾರ್ ಚಾಲಿತ ಅಥವಾ ಪೆಟ್ರೋಲ್ ಹಾಗೂ ಸೋಲಾರ್ ಪಂಪ್ಸೆಟ್ ಖರೀದಿಸಲು ಸಹಾಯಧನ
* ತುಂತುರು ನೀರಾವರಿ – ಅಗತ್ಯ ಇದ್ದಾಗ ತೋಟಕ್ಕೆ ನೀರಾವರಿ ಸೌಲಭ್ಯ ಒದಗಿಸಲು ನೀರಾವರಿ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸಹಾಯಧನ.
ಹೊಸ ರೇಷನ್ ಕಾರ್ಡ್ ಪಡೆಯೋಕೆ ಕಾಯ್ತಾ ಇರೋರಿಗೆ ಗುಡ್ ನ್ಯೂಸ್; ವಿತರಣೆಗೆ ದಿನಾಂಕ ಫಿಕ್ಸ್
ಒಟ್ಟಾಗಿ ರೈತರು ತಮ್ಮ ಜಮೀನಿನಲ್ಲಿ ಫಸಲು ಬರಲು ಸರಿಯಾಗಿ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಹಾಗೂ ಮಳೆಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಕ್ಕೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಹಾಗೂ ಇದಕ್ಕೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ.
ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ಹಣದ ಮಹತ್ವದ ಅಪ್ಡೇಟ್ ನೀಡಿದ ಸರ್ಕಾರ
ಅರ್ಜಿ ಸಲ್ಲಿಸುವುದು ಹೇಗೆ?
ಕೃಷಿ ಭೂಮಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನೀವು ಹೊಂದಿರಬೇಕು, ಇದರ ಜೊತೆಗೆ ಬ್ಯಾಂಕ್ ಖಾತೆಯ (Bank Account) ವಿವರ ಆಧಾರ್ ಕಾರ್ಡ್ ವಿಳಾಸ ಪುರಾವೆ ಮೊದಲಾದವುಗಳ ಜೊತೆಗೆ https://raitamitra.karnataka.gov.in/info-2/Raitha+Samparka+Kendra/kn ಈ ವೆಬ್ ಸೈಟ್ ನಲ್ಲಿ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು
ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಹೊಸ ಅಪ್ಡೇಟ್
Will you also get money in Krishibhagya Yojana, Check like this
Our Whatsapp Channel is Live Now 👇