Karnataka NewsBangalore News

ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕೆ ಬ್ಯಾಂಕಿನಿಂದ ಎಸ್ಎಂಎಸ್ ಬಾರದೆ ಇದ್ರೆ ಈ ರೀತಿ ಮಾಡಿ!

ರಾಜ್ಯ ಸರ್ಕಾರ ಮಹಿಳೆಯರಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಅವರ ಆರ್ಥಿಕ ಸ್ವಾವಲಂಬನೆಯನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಅಡಿಯಲ್ಲಿ ಎರಡು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ನೀಡುತ್ತಿದೆ.

ಇಲ್ಲಿವರೆಗೆ 12,000 ರೂಪಾಯಿ ಹಣ ಸಾಕಷ್ಟು ಮಹಿಳೆಯರ ಖಾತೆಯನ್ನು (Bank Account) ತಲುಪಿದೆ. ಅರ್ಜಿ ಸಲ್ಲಿಸಿದ ಒಂದಷ್ಟು ಜನರಿಗೆ ಇಲ್ಲಿಯವರೆಗೆ ಹಣ ವರ್ಗಾವಣೆ ಆಗಿಲ್ಲ. ಇದಕ್ಕೆ ಕಾರಣಗಳು ಕೂಡ ತಿಳಿದು ಬಂದಿದ್ದು ಸರ್ಕಾರ ಅವುಗಳ ಪರಿಹಾರಕ್ಕಾಗಿ ಕೆಲವು ಉಪಕ್ರಮಗಳನ್ನು ಕೈಗೊಂಡಿದೆ.

Gruha Lakshmi pending money is also deposited for the women of this district

ಇಂತಹವರಿಗೆ ಮಾತ್ರ ಏಪ್ರಿಲ್ 1ರಿಂದ ಹೊಸ ರೇಷನ್ ಕಾರ್ಡ್ ವಿತರಣೆ! ಇಲ್ಲಿದೆ ಡೀಟೇಲ್ಸ್

ನಿಮ್ಮ ಖಾತೆಗೆ ಯಾಕೆ ಹಣ ಬರ್ತಿಲ್ಲ ಗೊತ್ತಾ?

* ನೀವು ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ರೆ ಸಾಲೋದಿಲ್ಲ, ಅದು ಆಕ್ಟಿವ್ ಆಗಿರಬೇಕು. ಜೊತೆಗೆ ಆ ಬ್ಯಾಂಕ್ ಖಾತೆಗೆ ಈಕೆ ವೈ ಸಿ ಹಾಗೂ ಎನ್‌ಪಿಸಿಐ ಮ್ಯಾಪಿಂಗ್ ಆಗಿರಬೇಕು.

* ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಹೆಸರು ಇದ್ದರೆ ಮಾತ್ರ ಸಾಕಾಗೋದಿಲ್ಲ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

* ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ಸಾಕಾಗುವುದಿಲ್ಲ, ನೀವು ಸಲ್ಲಿಸಿದ ಅರ್ಜಿ ಸರಿಯಾಗಿರಬೇಕು ಸರಿಯಾದ ದಾಖಲೆಗಳನ್ನು ನೀವು ನೀಡಿರಬೇಕು.

* ಇದೆಲ್ಲದ್ರ ಹೊರತಾಗಿ ಸರ್ವರ್ ಸಮಸ್ಯೆ, ತಾಂತ್ರಿಕ ದೋಷಗಳು ಕೂಡ ನಿಮ್ಮ ಖಾತೆಗೆ ಹಣ ಬಾರದೆ ಇರುವುದಕ್ಕೆ ಕಾರಣ ಆಗಿರಬಹುದು.

ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಂಡ್ರಾ!

ಇಷ್ಟೆಲ್ಲಾ ಸಮಸ್ಯೆ ಇದ್ದಮೇಲೆ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ ಅಂತ ಅಂದ್ಕೊಂಡ್ರೆ ಏನು ಪ್ರಯೋಜನ ಅಲ್ವಾ ? ಹಾಗಾಗಿ ಈಗ ಹೇಳಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ನೀವು ಪ್ರಯತ್ನಿಸಬೇಕು. ಅದಾದ ನಂತರ ನಿಮ್ಮ ಖಾತೆಗೆ ತಪ್ಪದೆ ಹಣ ವರ್ಗಾವಣೆ ಆಗುತ್ತದೆ.

Gruha Lakshmi Yojanaಏಳನೇ ಕಂತಿನ ಹಣ ಬಿಡುಗಡೆ!

ಮಾರ್ಚ್ 15ರಿಂದ 7ನೇ ಕಂತಿನ ಹಣ ಬಿಡುಗಡೆಯಾಗಿದೆ. ಹಣ ಬಿಡುಗಡೆ ಆದ ನಂತರ ಒಂದೊಂದೇ ಜಿಲ್ಲೆಗೆ ಹಣ ಬಂದು ತಲುಪುತ್ತದೆ. ಅಂದ್ರೆ ಆರ್ ಬಿ ಐ ನಿಯಮದ ಪ್ರಕಾರ ಒಂದಷ್ಟು ಲಿಮಿಟ್ ಇರುವುದರಿಂದ ಎಲ್ಲ ಜಿಲ್ಲೆಗೂ ಒಂದೇ ದಿನ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ.

ರದ್ದು ಮಾಡಲಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಮಾರ್ಚ್ ತಿಂಗಳ ಲಿಸ್ಟ್ ಇಲ್ಲಿದೆ

ನಿಮ್ಮ ಖಾತೆಗೆ ಒಂದು ವೇಳೆ ಹಣ ಬಂದಿದ್ಯ ಇಲ್ವಾ? ಅನ್ನುವುದಕ್ಕೆ ಮೊಬೈಲ್ ಗೆ ಎಸ್ಎಂಎಸ್ ಬಾರದೆ ಇದ್ರೆ ಟೆನ್ಶನ್ ಮಾಡಿಕೊಳ್ಳುವ ಅಗತ್ಯ ಇಲ್ಲ. ಮಾರ್ಚ್ 31ರ ಒಳಗೆ ಎಲ್ಲರಿಗೂ ಹಣ ವರ್ಗಾವಣೆ ಆಗುತ್ತದೆ ಅಥವಾ ನೀವು ಬ್ಯಾಂಕಿಗೆ ಹೋಗಿ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಮಾಡಿಸಿ ಮಾಹಿತಿ ತಿಳಿದುಕೊಳ್ಳಬಹುದು.

DBT Karnataka mobile ಅಪ್ಲಿಕೇಶನ್ ಮೂಲಕವೂ ನಿಮ್ಮ ಖಾತೆಗೆ ಜಮಾ ಆಗಿರುವ ಡಿ ಬಿ ಟಿ ಮೊತ್ತದ ಬಗ್ಗೆ ತಿಳಿದುಕೊಳ್ಳಬಹುದು.

do this, If you do not receive the SMS from the bank for Gruha Lakshmi Scheme

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories