ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಂಡ್ರಾ!
ಈ ತಿಂಗಳು ಕೂಡ ಅನ್ನಭಾಗ್ಯ ಯೋಜನೆ (Annabhagya scheme) ಅಡಿಯಲ್ಲಿ ಅಕ್ಕಿ ಬದಲು ಹಣವನ್ನೇ ಫಲಾನುಭವಿಗಳ ಖಾತೆಗೆ (Bank Account) DBT ಮಾಡಲಾಗಿದೆ.
ವಿಧಾನಸಭಾ ಎಲೆಕ್ಷನ್ ಮುಗಿದು ಲೋಕಸಭಾ ಎಲೆಕ್ಷನ್ ಆರಂಭವಾಗಲು ಕೆಲವೇ ದಿನ ಬಾಕಿ, ಆದರೆ ರಾಜ್ಯ ಸರ್ಕಾರ ತಿಳಿಸಿರುವಂತೆ ಇದುವರೆಗೆ ಉಚಿತ ಅಕ್ಕಿ (free rice) ಯನ್ನು ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಈ ತಿಂಗಳು ಕೂಡ ಅನ್ನ ಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಹಣವನ್ನೇ ಫಲಾನುಭವಿಗಳ ಖಾತೆಗೆ (Bank Account) DBT ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆಗಾಗಿ ಕಾಯುತ್ತಿರುವ ಫಲಾನುಭವಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಫೆಬ್ರುವರಿ ತಿಂಗಳಿನ ಹಣವನ್ನು ಮಾರ್ಚ್ ತಿಂಗಳಲ್ಲಿ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗಾಗಿ ಮಾರ್ಚ್ ತಿಂಗಳಲ್ಲಿ ಯಾವಾಗ ಬಿಡುಗಡೆ ಮಾಡುತ್ತಾರೆ ಎನ್ನುವ ಕುತೂಹಲ ಫಲಾನುಭವಿಗಳಿಗೆ ಇದೆ.
ರದ್ದು ಮಾಡಲಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಮಾರ್ಚ್ ತಿಂಗಳ ಲಿಸ್ಟ್ ಇಲ್ಲಿದೆ
ಇದಕ್ಕೆ ಸರ್ಕಾರ ಈಗ ಉತ್ತರ ನೀಡಿದ್ದು ಮಾರ್ಚ್ 15ರಿಂದಲೇ ಅನ್ನಭಾಗ್ಯ ಯೋಜನೆಯ ಹಣ ಜಮಾ ಮಾಡಲು ಆರಂಭಿಸಲಾಗಿದೆ. ಮಾರ್ಚ್ 31ರ ಒಳಗೆ ಪ್ರತಿಯೊಬ್ಬರ ಖಾತಿಗೂ ಈ ಯೋಜನೆಯ ಹಣ ಬಂದು ತಲುಪಲಿದೆ (Money Deposit).
ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೂ ಮೊದಲು ತನ್ನ ಪ್ರಣಾಳಿಕೆಯಲ್ಲಿ 10 ಕೆಜಿ ಉಚಿತವಾಗಿ ಅಕ್ಕಿಯನ್ನು ಪಡಿತರ ಕಾರ್ಡ್ ಹೊಂದಿರುವವರಿಗೆ ವಿತರಣೆ ಮಾಡುವುದಾಗಿ ತಿಳಿಸಿತ್ತು.
ಈಗಾಗಲೇ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ ಹೊಂದಿರುವವರು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಇನ್ನು ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಮತ್ತೆ 5 ಕೆಜಿ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿತ್ತು.
ಈ ಮಿಸ್ಟೇಕ್ ಮಾಡಿದ್ರೆ, ಗೃಹಲಕ್ಷ್ಮಿ ಯೋಜನೆ ಹಣ ಬಂದ್ರೂ ಖಾತೆಯಲ್ಲಿ ಇರೋಲ್ಲ
ಆದರೆ ರಾಜ್ಯ ಸರ್ಕಾರಕ್ಕೆ ಅಷ್ಟು ದೊಡ್ಡ ಪ್ರಮಾಣದ ಅಕ್ಕಿಯನ್ನು ಪ್ರತಿ ತಿಂಗಳು ಹೊಂದಿಸುವುದು ಒಂದು ಸವಾಲಾಗಿತ್ತು. ಅಧಿಕಾರಕ್ಕೆ ಬಂದ ಒಂದು ತಿಂಗಳಾದರೂ ಈ ಯೋಜನೆಯನ್ನು ಈಡೇರಿಸಲು ಸಾಧ್ಯವಾಗದೇ ಇದ್ದ ರಾಜ್ಯ ಸರ್ಕಾರ ಒಂದು ನಿರ್ಣಯಕ್ಕೆ ಬಂತು. Annabhagya scheme ಮೂಲಕ ಫಲಾನುಭವಿಗಳಿಗೆ ಪ್ರತಿ ಕೆಜಿ ಅಕ್ಕಿಗೆ 170ಗಳನ್ನು ಜಮ ಮಾಡಲು ನಿಶ್ಚಯಿಸಲಾಯಿತು. ಅದರಂತೆ ಕಳೆದ ಆರು ತಿಂಗಳಿನಿಂದ ಫಲಾನುಭವಿ ಗಳ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ.
ಇನ್ಮುಂದೆ ಇಂತಹವರಿಗೆ ಸಿಗೋಲ್ಲ ಉಚಿತ ಕರೆಂಟ್! ಕಟ್ಟಬೇಕು ಸಂಪೂರ್ಣ ವಿದ್ಯುತ್ ಬಿಲ್
ಏಳನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ!
ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಹಣವನ್ನು ಡಿಬಿಟಿ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹಾಗಾಗಿ ಈ ತಿಂಗಳ ಕೊನೆಯ ದಿನಾಂಕದ ಒಳಗೆ ಅನ್ನಭಾಗ್ಯ ಯೋಜನೆಯ ಹಣವು ಕೂಡ ನಿಮ್ಮ ಖಾತೆಯನ್ನು ತಲುಪುತ್ತದೆ. ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಅಲ್ಲಿ ಈ ಸ್ಥಿತಿ ವಿಭಾಗದಲ್ಲಿ ಪಡಿತರ ಚೀಟಿ ಎನ್ನುವ ಆಯ್ಕೆ ಮಾಡಿ. ಬಳಿಕ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ತೋರಿಸಲಾಗಿರುವ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆ ಯಾವುದು ಎನ್ನುವುದನ್ನು ಆಯ್ಕೆ ಮಾಡಿಕೊಂಡು ಅದರ ಮೇಲ್ಭಾಗದಲ್ಲಿರುವ ಲಿಂಕ್ ಕ್ಲಿಕ್ ಮಾಡಬೇಕು.
ಮಾರ್ಚ್ 25ರೊಳಗೆ ಈ ಕೆಲ್ಸ ಮಾಡದಿದ್ರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ
ಈಗ ನೀವು DBT ಸ್ಟೇಟಸ್ ತಿಳಿದುಕೊಳ್ಳಬಹುದು. ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ, ಕ್ಯಾಪ್ಚ ಸಂಖ್ಯೆ ಹಾಗೂ ಯಾವ ತಿಂಗಳು ಎಂಬುದನ್ನು ಆಯ್ಕೆ ಮಾಡಿ ಗೋ ಎಂದು ಕ್ಲಿಕ್ ಮಾಡಿ ಈಗ ನಿಮ್ಮ ಖಾತೆಗೆ ಜಮಾ ಆಗಿರುವ ಡಿ ಬಿ ಟಿ ಹಣದ ಸಂಪೂರ್ಣ ವಿವರ ಕಾಣಿಸುತ್ತದೆ.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನಮಗೆ ಹಣ ಬೇಡ ಅದರ ಬದಲು ಇತರ ದವಸ ಧಾನ್ಯವನ್ನಾದರೂ ಕೊಡಿ ಎಂದು ಸಾಕಷ್ಟು ಮಹಿಳೆಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಅಕ್ಕಿ ಹೊಂದಿಸಲು ಸಾಧ್ಯವಾಗದೆ ಇದ್ದರು ಪೋಷಕಾಂಶಯುಕ್ತ ಧಾನ್ಯ ನೀಡುವ ಸಾಧ್ಯತೆ ಇದೆ.
Annabhagya Scheme money released for the month of March