Karnataka NewsBangalore News

ರದ್ದು ಮಾಡಲಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಮಾರ್ಚ್ ತಿಂಗಳ ಲಿಸ್ಟ್ ಇಲ್ಲಿದೆ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ (guarantee schemes) ಗಳನ್ನು ಜಾರಿಗೆ ತಂದ ಮೇಲೆ ಒಂದಷ್ಟು ಜನರಿಗೆ ಹೆಚ್ಚು ಪ್ರಯೋಜನ ಆಗಿದೆ ಎನ್ನಬಹುದು. ಆದರೆ ಇನ್ನೂ ಕೆಲವರು ಅನಗತ್ಯವಾಗಿ ಅರ್ಹತೆ ಇಲ್ಲದೆ ಇದ್ದರೂ ಪಡಿತರ ಚೀಟಿ ಪಡೆದುಕೊಂಡಿದ್ದಾರೆ, ಅಂತವರ ಕಾರ್ಡ್ ರದ್ದುಪಡಿ ಆಗಿದೆ.

ಇದು ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ಬೆಳಕಿಗೆ ಬಂದಿರುವ ಅಕ್ರಮ ಎಂದು ಹೇಳಬಹುದು. ಇಲ್ವಾದ್ರೆ ಪಡಿತರ ಚೀಟಿ (ration card) ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಗ್ಯಾರಂಟಿ ಯೋಜನೆಗೆ ಪ್ರಮುಖ ದಾಖಲೆಯೇ ಪಡಿತರ ಚೀಟಿ ಆಗಿರುವುದರಿಂದ ಯಾರು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂಬುದನ್ನು ಆಹಾರ ಇಲಾಖೆ (food department) ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

Ration Card: ಯಾವೆಲ್ಲಾ ಜನರ ಬಿಪಿಎಲ್ ಕಾರ್ಡ್ ರದ್ದಾಗುತ್ತೆ? ಇಲ್ಲಿದೆ ಅಪ್ಡೇಟ್

ಈ ಮಿಸ್ಟೇಕ್ ಮಾಡಿದ್ರೆ, ಗೃಹಲಕ್ಷ್ಮಿ ಯೋಜನೆ ಹಣ ಬಂದ್ರೂ ಖಾತೆಯಲ್ಲಿ ಇರೋಲ್ಲ

ರೇಷನ್ ಕಾರ್ಡ್ ರದ್ದು ಮಾಡಿದ ಸರ್ಕಾರ (Ration card cancellation)

ಬಿಪಿಎಲ್ ಪಡಿತರ ಚೀಟಿಯನ್ನು ವಿತರಣೆ ಮಾಡುವುದು ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಅವರ ಹಸಿವನ್ನು ನೀಗಿಸುವ ಸಲುವಾಗಿ. ಅದೇ ರೀತಿ AAY ಕಾರ್ಡ್ ಅನ್ನು ಕೂಡ ನೀಡಲಾಗುತ್ತದೆ. ಈ ಎರಡು ಕಾರ್ಡನ ಹೊರತುಪಡಿಸಿ ಮತ್ತೊಂದು ಕಾರ್ಡ್ ಇದೆ ಅದು ಎಪಿಎಲ್ ಕಾರ್ಡ್. ಎಪಿಎಲ್ (APL Card) ಕಾರ್ಡ್ ಮೂಲಕ ಉಚಿತ ಪಡಿತರ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಸರ್ಕಾರದ ಇತರ ಕೆಲವು ಪ್ರಯೋಜನವನ್ನು ಪಡೆಯಬಹುದು.

ಇನ್ನು ನಿಮಗೆಲ್ಲ ತಿಳಿದಿರುವಂತೆ ಪಡಿತರ ಚೀಟಿ ಬಹಳ ಪ್ರಮುಖ ದಾಖಲೆ ಎನ್ನುವ ಕಾರಣಕ್ಕೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಜನರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹೊಸ ಪಡಿತರ ಚೀಟಿಯನ್ನು ಮಾರ್ಚ್ 1ನೇ ತಾರೀಕಿಗೆ ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗೂ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕೂಡ ಅವಕಾಶ ನೀಡಬಹುದು.

ಇನ್ಮುಂದೆ ಇಂತಹವರಿಗೆ ಸಿಗೋಲ್ಲ ಉಚಿತ ಕರೆಂಟ್! ಕಟ್ಟಬೇಕು ಸಂಪೂರ್ಣ ವಿದ್ಯುತ್ ಬಿಲ್

ಅದೇನೇ ಇರಲಿ ಈಗ ಸಾಕಷ್ಟು ಜನರ ರೇಷನ್ ಕಾರ್ಡ್ ರದ್ದುಪಡಿ ಆಗಿದೆ. ಸುಮಾರು 4.5 ಲಕ್ಷ ಜನರ ರೇಷನ್ ಕಾರ್ಡ್ ಸರ್ಕಾರ ರದ್ದುಪಡಿಸಿದೆ ಎಂದು ಹೇಳಲಾಗಿದೆ. ಈ ರೀತಿ ರೇಷನ್ ಕಾರ್ಡ್ ರದ್ದುಪಡಿ ಮಾಡುವುದಕ್ಕೆ ಯಾವುದೇ ನೋಟಿಸ್ ಕೂಡ ಸರ್ಕಾರ ಕಳುಹಿಸಿರಲಿಲ್ಲ. ಕಳೆದ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದೆ ಇರುವವರ ಕಾರ್ಡ್ ಸಹ ರದ್ದುಪಡಿಸಲಾಗಿದೆ.

BPL Ration Cardನಿಮ್ಮ ಕಾರ್ಡ್ ಇದಿಯಾ ಇಲ್ವಾ ಚೆಕ್ ಮಾಡಿ?

ಸರ್ಕಾರದ ಮಾನದಂಡಗಳನ್ನು ಮೀರಿ ಬಿಪಿಎಲ್ ಕಾರ್ಡ್ ಬಳಸುವವರಿಗೆ ಇನ್ನು ಮುಂದೆ ರೇಷನ್ ಕಾರ್ಡ್ ಇರುವುದಿಲ್ಲ, ಹಾಗಾದ್ರೆ ನಿಮ್ಮ ಕಾರ್ಡ್ ಚಾಲ್ತಿಯಲ್ಲಿ ಇದಿಯೋ ಇಲ್ವೋ ಎಂಬುದನ್ನು ಮೊದಲು ಚೆಕ್ ಮಾಡಿಕೊಳ್ಳಿ.

https://ahara.kar.nic.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ – ಸರ್ವಿಸ್ ವಿಭಾಗದ ಮೇಲೆ ಕ್ಲಿಕ್ ಮಾಡಿ. ಎಡಬಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ್ರೆ ಈ ಪಡಿತರ ಚೀಟಿ ಎನ್ನುವ ಆಯ್ಕೆ ಇದೆ ಅದನ್ನು ಕ್ಲಿಕ್ ಮಾಡಿ.

ಮಾರ್ಚ್ 25ರೊಳಗೆ ಈ ಕೆಲ್ಸ ಮಾಡದಿದ್ರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ

ನಂತರ ರದ್ದುಪಡಿಸಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ ಎನ್ನುವ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಈಗ ನೀವು ನಿಮ್ಮ ಜಿಲ್ಲೆ ತಾಲೂಕು ಮೊದಲಾದ ವಿವರಗಳನ್ನು ನಮೂದಿಸಿದರೆ ನಿಮ್ಮ ಜಿಲ್ಲೆಯಲ್ಲಿ ಅಥವಾ ನಿಮ್ಮ ಗ್ರಾಮದಲ್ಲಿ ಯಾರ ರೇಷನ್ ಕಾರ್ಡ್ ರದ್ದಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ರೇಷನ್ ಕಾರ್ಡ್ ರದ್ದುಪಡಿಸಿರುವ ಕಾರಣವನ್ನು ಕೂಡ ಇಲ್ಲಿ ನಮೂದಿಸಿರಲಾಗುತ್ತದೆ. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಅಸ್ಥಿತ್ವದಲ್ಲಿ ಇದಿಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಕೃಷಿಭಾಗ್ಯ ಯೋಜನೆಯಲ್ಲಿ ನಿಮಗೂ ಸಹ ಹಣ ಸಿಗುತ್ತಾ? ಈ ರೀತಿ ಚೆಕ್ ಮಾಡಿಕೊಳ್ಳಿ

Canceled ration card list released, Here is the list for the month of March

Our Whatsapp Channel is Live Now 👇

Whatsapp Channel

Related Stories