ಇಂತಹವರಿಗೆ ಮಾತ್ರ ಏಪ್ರಿಲ್ 1ರಿಂದ ಹೊಸ ರೇಷನ್ ಕಾರ್ಡ್ ವಿತರಣೆ! ಇಲ್ಲಿದೆ ಡೀಟೇಲ್ಸ್

ನಿಮ್ಮ ಬಳಿ ಬಿಪಿಎಲ್ ರೇಷನ್ (BPL Ration Card) ಕಾರ್ಡ್ ಇದೆ ಎಂದಾದರೆ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಹೊಸ ಪಡಿತರ ಚೀಟಿಗಾಗಿ ಸಾಕಷ್ಟು ಜನ ಕಾಯುತ್ತಿದ್ದು, ಅಂತವರಿಗೆ ಮಾನ್ಯ ಆಹಾರ ಸಚಿವ ಕೆ. ಹೆ ಚ್ ಮುನಿಯಪ್ಪ ಹೊಸ ಅಪ್ಡೇಟ್ ನೀಡಿದ್ದಾರೆ, ರೇಷನ್ ಕಾರ್ಡ್ (ration card) ಅಗತ್ಯ ಇರುವವರಿಗೆ ಹಾಗೂ ಅರ್ಜಿ ಸಲ್ಲಿಕೆ ಮಾಡಿರುವವರಿಗೆ ಇನ್ನು ಕಾಯಿಸುವುದಿಲ್ಲ ಅಂತವರಿಗೆ ರೇಷನ್ ಕಾರ್ಡ್ ವಿತರಣೆ ಮಾಡುತ್ತೇವೆ ಎಂದು ಭರವಸೆಯನ್ನು ಕೊಟ್ಟಿದ್ದಾರೆ. ಇತ್ತೀಚಿಗೆ ನಡೆದ ವಿಧಾನಸಭಾ ಕಲಾಪದಲ್ಲಿ ಅವರು ಮಾತನಾಡಿ ಸ್ಪಷ್ಟನೆ ನೀಡಿದ್ದರು.

ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಂಡ್ರಾ!

ಹೊಸ ಪಡಿತರ ಚೀಟಿ ಯಾವಾಗಿನಿಂದ ವಿತರಣೆ!

ಪಡಿತರ ಚೀಟಿ ಬಹಳ ಪ್ರಮುಖ ದಾಖಲೆ ಎನಿಸಿಕೊಂಡಿದೆ. ಅದರಲ್ಲೂ ಇತ್ತೀಚಿಗೆ ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಅಂದ್ರೆ ಪಡಿತರ ಚೀಟಿ ಬೇಕೆ ಬೇಕು. ಅದರಲ್ಲೂ ನಿಮ್ಮ ಬಳಿ ಬಿಪಿಎಲ್ ರೇಷನ್ (BPL Ration Card) ಕಾರ್ಡ್ ಇದೆ ಎಂದಾದರೆ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇಂತಹವರಿಗೆ ಮಾತ್ರ ಏಪ್ರಿಲ್ 1ರಿಂದ ಹೊಸ ರೇಷನ್ ಕಾರ್ಡ್ ವಿತರಣೆ! ಇಲ್ಲಿದೆ ಡೀಟೇಲ್ಸ್ - Kannada News

ರಾಜ್ಯ ಸರ್ಕಾರಕ್ಕೆ ಸುಮಾರು 2 ಲಕ್ಷ 96 ಸಾವಿರದಷ್ಟು ಪಡಿತರ ಚೀಟಿ ಅರ್ಜಿಗಳು ಇಲ್ಲಿಯವರೆಗೆ ಸಲ್ಲಿಕೆ ಆಗಿದೆ, ಆದರೆ ಕಾರಣಾಂತರಗಳಿಂದ ಅವುಗಳನ್ನು ಪರಿಶೀಲಿಸಿ ಜನರಿಗೆ ವಿತರಣೆ ಮಾಡುವ ಕಾರ್ಯ ಮಾತ್ರ ನಡೆದಿರಲಿಲ್ಲ

ರದ್ದು ಮಾಡಲಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಮಾರ್ಚ್ ತಿಂಗಳ ಲಿಸ್ಟ್ ಇಲ್ಲಿದೆ

ಇದನ್ನ ಗಮನಿಸಿದ ಸರ್ಕಾರ ಇದೀಗ ದೇಶದ ಪ್ರತಿಯೊಬ್ಬರಿಗೂ ಅನುಕೂಲವಾಗುವಂಥ ಪಡಿತರ ವಿತರಣೆಗಾಗಿ ಹಾಗೂ ಸರ್ಕಾರದ ಇತರ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ಅಗತ್ಯ ಇರುವ ಪಡಿತರ ಚೀಟಿ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.

ಇದಕ್ಕಾಗಿ ಏಪ್ರಿಲ್ ಒಂದು ಮೂರ್ತ ಫಿಕ್ಸ್ ಮಾಡಲಾಗಿದ್ದು ಮಾರ್ಚ್ 31ರ ಒಳಗೆ ಎಲ್ಲಾ ಸಲ್ಲಿಕೆ ಆಗಿರುವ ರೇಷನ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ಒಂದರಿಂದ ವಿತರಣೆ ಮಾಡಲಾಗುವುದು.

ಹೊಸ ಕಾರ್ಡ್ ಪಡೆದುಕೊಳ್ಳಲು ಇಂತವರು ಅರ್ಜಿ ಸಲ್ಲಿಸಬಹುದು

ಇನ್ನು ಹೊಸ ಪಡಿತರ ಚೀಟಿ (New Ration card) ಪಡೆದುಕೊಳ್ಳಲು ಬಯಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಅದನ್ನು ಕೂಡ ಶೀಘ್ರವಾಗಿಯೇ ಪರಿಶೀಲಿಸಿ ವಿತರಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಹಾಗಾದ್ರೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ನೋಡೋಣ.

ಈ ಮಿಸ್ಟೇಕ್ ಮಾಡಿದ್ರೆ, ಗೃಹಲಕ್ಷ್ಮಿ ಯೋಜನೆ ಹಣ ಬಂದ್ರೂ ಖಾತೆಯಲ್ಲಿ ಇರೋಲ್ಲ

BPL Ration Card* ಈಗಾಗಲೇ ರೇಷನ್ ಕಾರ್ಡ್ ಹೊಂದಿದ್ರೆ ಮತ್ತೆ ಅರ್ಜಿ ಹಾಕಲು ಸಾಧ್ಯವಿಲ್ಲ

* ಹೊಸದಾಗಿ ಮದುವೆಯಾಗಿ ಮನೆಗೆ ಸೇರಿಕೊಂಡಿದ್ದರೆ ಅಂತವರು ಹೊಸ ರೇಷನ್ ಕಾರ್ಡ್ ಮಾಡಿಸಬಹುದು. ಆದರೆ ಕುಟುಂಬದಿಂದ ಪ್ರತ್ಯೇಕವಾಗಿರಬೇಕು

* ಈಗಿರುವ ಕುಟುಂಬದಿಂದ ಮನೆಯಿಂದ ಹೊರಕ್ಕೆ ಹೋಗಿ ಬೇರೆಯದೇ ಸಂಸಾರ ಕಟ್ಟಿಕೊಳ್ಳುವ ಗಂಡ ಹೆಂಡತಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಆದರೆ ಹಳೆಯ ಪಡಿತರ ಚೀಟಿಯಲ್ಲಿ ಹೆಸರು ತೆಗೆಸಿ ಹಾಕಬೇಕಾಗುತ್ತದೆ.

* ನಿಮ್ಮ ಕುಟುಂಬದ ಆದಾಯದ ಆಧಾರದ ಮೇಲೆ ನಿಮಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಬೇಕು ಅಥವಾ ಎಪಿಎಲ್ ಕಾರ್ಡ್ ಎನ್ನುವುದನ್ನು ಸರ್ಕಾರ ನಿರ್ಧಾರ ಮಾಡುತ್ತದೆ.

ಇನ್ಮುಂದೆ ಇಂತಹವರಿಗೆ ಸಿಗೋಲ್ಲ ಉಚಿತ ಕರೆಂಟ್! ಕಟ್ಟಬೇಕು ಸಂಪೂರ್ಣ ವಿದ್ಯುತ್ ಬಿಲ್

ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

ಕುಟುಂಬದ ಎಲ್ಲಾ ಸದಸ್ಯರ ಸಂಖ್ಯೆ
ಕುಟುಂಬದ ಎಲ್ಲಾ ಸದಸ್ಯರಾಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಕುಟುಂಬದ ಎಲ್ಲಾ ಸದಸ್ಯರ ಫೋಟೋ
ಮೊಬೈಲ್ ಸಂಖ್ಯೆ

ಮಾರ್ಚ್ 25ರೊಳಗೆ ಈ ಕೆಲ್ಸ ಮಾಡದಿದ್ರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ

https://ahara.kar.nic.in/ ಆಹಾರ ಇಲಾಖೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಎಲ್ಲಾ ಸಮಯದಲ್ಲಿಯೂ ಆನ್ಲೈನ್ ಪೋರ್ಟಲ್ ವರ್ಕ್ ಆಗುವುದಿಲ್ಲ ಹಾಗಾಗಿ ನೀವು ನ್ಯಾಯಬೆಲೆ ಅಂಗಡಿಯಲ್ಲಿ ಅಥವಾ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವುದು ಸೂಕ್ತ.

New ration card distribution from April 1 only for such people

Follow us On

FaceBook Google News

New ration card distribution from April 1 only for such people