ಈ ತಿಂಗಳ ಗೃಹಲಕ್ಷ್ಮಿ ಹಣ ಬಂದಿದ್ಯಾ? ಮೊಬೈಲ್ ನಲ್ಲೆ ಈ ರೀತಿ ಚೆಕ್ ಮಾಡಿಕೊಳ್ಳಿ
ನೀವು ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಫಲಾನುಭವಿ ಮಹಿಳೆ ಆಗಿದ್ದರೆ ಈ ಲೇಖನ ನಿಮಗಾಗಿ. ಎಷ್ಟೋ ಜನರಿಗೆ ಬ್ಯಾಂಕ್ ಖಾತೆಗೆ (Bank Account) ಗೃಹಲಕ್ಷ್ಮಿ ಹಣ ಜಮಾ ಆಗುತ್ತಿದೆ. ಆದರೆ ಸರಿಯಾದ ಸಮಯಕ್ಕೆ ಸರ್ಕಾರ ಬಿಡುಗಡೆ ಮಾಡಿದಾಗ ತಮ್ಮ ಖಾತೆಗೆ ಹಣ ಬಂದಿದ್ಯ ಇಲ್ವಾ ಅಂತ ತಿಳಿದುಕೊಳ್ಳಲು ಸಾಕಷ್ಟು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ.
ಸಾಮಾನ್ಯವಾಗಿ ನಮ್ಮ ಬ್ಯಾಂಕ್ ಖಾತೆಗೆ ಯಾವುದೇ ಹಣ ಬಂದ್ರೆ ಅಥವಾ ಯಾವುದೇ ಹಣ ಖಾತೆಯಿಂದ ಕಡಿತಗೊಂಡ್ರೆ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗೆ, ಒಂದು ಸಂದೇಶ ಕಳುಹಿಸಲಾಗುತ್ತದೆ.
ಒಂದು ವೇಳೆ ಬ್ಯಾಂಕ್ನಿಂದ ನಿಮಗೆ ನಿಮ್ಮ ಖಾತೆಯ ಬಗ್ಗೆ ಮಾಹಿತಿಯನ್ನು ನೀಡುವ ಸಂದೇಶ ಬಂದಿಲ್ಲ ಎಂದರೆ ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ. ನೀವು ಆನ್ಲೈನ್ ಮೂಲಕ ನಿಮ್ಮ ಖಾತೆಯ DBT ಹಣದ ಬಗ್ಗೆ ಮಾಹಿತಿ ಪಡೆಯಬಹುದು.
ಈ ಅರ್ಹತೆ ಇದ್ರೆ ಮಾತ್ರ ನಿಮಗೆ ಬಿಪಿಎಲ್ ಕಾರ್ಡ್ ಸಿಗುತ್ತೆ; ಹೊಸ ರೇಷನ್ ಕಾರ್ಡ್ ಅಪ್ಡೇಟ್
ಗೃಹಲಕ್ಷ್ಮಿ ಹಣ ಬರಲು ಕೆವೈಸಿ ಕಡ್ಡಾಯ!
ಒಂದು ವೇಳೆ ನಿಮ್ಮ ಖಾತೆಗೆ ಕೆವೈಸಿ ಆಗಿದ್ದರು ಕೂಡ ಅದು ಈಗ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ತಕ್ಷಣ ಬ್ಯಾಂಕ್ ಗೆ ಹೋಗಿ ಕೆವೈಸಿ ಅಪ್ಡೇಟ್ ಮಾಡಿಸಿ. ಈ ರೀತಿ ಮಾಡುವುದರಿಂದ ಮಿಸ್ ಆಗದೆ ನಿಮ್ಮ ಖಾತೆಗೆ ಹಣ ಬರುತ್ತದೆ.
ಆನ್ಲೈನ್ ಮೂಲಕ ಚೆಕ್ ಮಾಡಿ!
ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ ಏಳು ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿಗಳಂತೆ ಮಹಿಳಾ ಫಲಾನುಭವಿಗಳ ಖಾತೆಗೆ (Bank Account) ಜಮಾ (Money Deposit) ಮಾಡಲಾಗಿದೆ. ಅಂದ್ರೆ ಸಾಕಷ್ಟು ಮಹಿಳೆಯರು ಒಟ್ಟು 14,000ಗಳನ್ನು ಸರ್ಕಾರದಿಂದ ಉಚಿತವಾಗಿ ಕಳೆದ ಏಳು ತಿಂಗಳಲ್ಲಿ ಪಡೆದುಕೊಂಡಿದ್ದಾರೆ. ಫೆಬ್ರುವರಿ ತಿಂಗಳ ಹಣ ಮಾರ್ಚ್ ತಿಂಗಳ 15ನೇ ತಾರೀಖಿನಿಂದ ಬಿಡುಗಡೆ ಆಗಿದೆ.
ಬಿಡುಗಡೆ ಆದ ಹಣವನ್ನು ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ಮಾರ್ಚ್ 31 ರ ವರೆಗೂ ನೀವು ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದ್ರೆ ಟೆನ್ಶನ್ ಮಾಡಿಕೊಳ್ಳುವ ಅಗತ್ಯವಿಲ್ಲ ಅಲ್ಲಿಯವರೆಗೆ ಕಾಯಬಹುದು.
ಗೃಹಜ್ಯೋತಿ ಯೋಜನೆಯ ಫ್ರೀ ಕರೆಂಟ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ
* ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ವೋ ಅಂತ ತಿಳಿದುಕೊಳ್ಳಲು ಸೇವಾ ಸಿಂಧು ಅಪ್ಲಿಕೇಶನ್ ಅನ್ನು ಮೊಬೈಲಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಅಲ್ಲಿ ಮುಖಪುಟದಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.
* ಎರಡನೆಯದಾಗಿ ಮಾಹಿತಿ ಕಣಜ ವೆಬ್ಸೈಟ್ನಲ್ಲಿ ಗೃಹಲಕ್ಷ್ಮಿ ಯೋಜನೆ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ಅಲ್ಲಿಯೂ ರೇಷನ್ ಕಾರ್ಡ್ ಸಂಖ್ಯೆಯನ್ನ ನಮೂದಿಸಿ. ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದ್ಯೋ ಇಲ್ವೋ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದ್ಯೋ ಇಲ್ವೋ ಎನ್ನುವ ವಿವರ ಕಾಣಿಸುತ್ತದೆ.
ಈ ಯೋಜನೆಯಲ್ಲಿ ರೈತರಿಗೆ ಸಿಗುತ್ತೆ 10,000 ಸಹಾಯಧನ! ನೇರವಾಗಿ ಖಾತೆಗೆ ಜಮಾ
* ಇನ್ನು ಮೂರನೆಯದಾಗಿ ಕರ್ನಾಟಕ ಸರ್ಕಾರ, ವಿಶೇಷವಾಗಿ ಡಿ ಬಿ ಟಿ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಆಗಿದ್ಯೋ ಇಲ್ವೋ ಎನ್ನುವುದನ್ನು ತಿಳಿದುಕೊಳ್ಳಲು DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.
ಅದನ್ನು ನೀವು ಪ್ಲೇ ಸ್ಟೋರ್ ನಿಮಗೆ ಹೋಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ. ಬಳಿಕ mPIN ರಚಿಸಿ ಲಾಗಿನ್ ಆಗಿ. ಅಲ್ಲಿ ಪ್ರೊಫೈಲ್ ವಿಭಾಗದಲ್ಲಿ ಡಿ ಬಿ ಟಿ ಆಗಿರುವ ಎಲ್ಲಾ ಹಣದ ಬಗ್ಗೆ ನಿಮಗೆ ಮಾಹಿತಿ ಲಭ್ಯವಾಗುತ್ತದೆ.
ಹೊಸದಾಗಿ ಅರ್ಜಿ ಸಲ್ಲಿಸುವವರು ನೆನಪಿಟ್ಟುಕೊಳ್ಳಿ!
ಒಂದು ವೇಳೆ ನೀವಿನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದಾದರೆ ಅಥವಾ ಈ ಹಿಂದೆ ಅರ್ಜಿ ಸಲ್ಲಿಸಿ ನಿಮ್ಮ ಖಾತೆಗೆ ಒಂದು ರೂಪಾಯಿ ಕೂಡ ಹಣ ಜಮಾ ಆಗಿಲ್ಲ ಎಂದಾದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅಂತಹ ಸಂದರ್ಭದಲ್ಲಿ ನೀವು ಕೆಲವು ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
ಆಧಾರ್ ಕಾರ್ಡ್, ರೇಷನ್ ಕಾರ್ಡ್ (ಮನೆಯ ಯಜಮಾನಿಯ ಹೆಸರಿನಲ್ಲಿ ಇರಬೇಕು). ರೇಷನ್ ಕಾರ್ಡ್ ನಲ್ಲಿರುವ ಹೆಸರು ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಹಾಗೂ ಬ್ಯಾಂಕು ಖಾತೆಯಲ್ಲಿ ಇರುವ ಹೆಸರು ಒಂದಕ್ಕೊಂದು ಮ್ಯಾಚ್ ಆಗಬೇಕು.
ಇಂತಹವರಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬಂದ್! ಸರ್ಕಾರ ಖಡಕ್ ವಾರ್ನಿಂಗ್
ಬ್ಯಾಂಕ್ ಖಾತೆಗೆ ಈಕೆ ವೈ ಸಿ ಕಡ್ಡಾಯವಾಗಿ ಆಗಿರಬೇಕು. ಬ್ಯಾಂಕ್ ಖಾತೆ ಆಕ್ಟಿವ್ ಆಗಿರಬೇಕು. ಇಷ್ಟು ದಾಖಲೆಗಳು ಸರಿಯಾಗಿದ್ದರೆ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಹಾಗೂ ಮುಂದಿನ ತಿಂಗಳಿನಿಂದ ನಿಮ್ಮ ಖಾತೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಆರಂಭವಾಗುತ್ತದೆ.
check whether Gruha Lakshmi Yojana money has arrived on your Bank Account