ರೈತರ ಖಾತೆಗೆ ನೇರವಾಗಿ ಡಿಬಿಟಿ ಆಗಿದೆ ಬೆಳೆ ವಿಮೆ ಹಣ! ನಿಮ್ಮ ಖಾತೆ ಪರಿಶೀಲಿಸಿ
ಈ ಯೋಜನೆಯ ಅಡಿಯಲ್ಲಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರೆ ನಿಮ್ಮ ಖಾತೆಗೆ (Bank Account) ಹಣ ಬಂದಿದ್ಯೋ ಇಲ್ವೋ ಎನ್ನುವುದನ್ನು ತಿಳಿಯಿರಿ
ರಾಜ್ಯ ಸರ್ಕಾರ (State government) ಅಗತ್ಯ ಇರುವ ರೈತರಿಗೆ ಬೆಳೆ ವಿಮೆ (crop insurance) ಬಿಡುಗಡೆ ಮಾಡುವುದರ ಮೂಲಕ ಕೃಷಿ ಚಟುವಟಿಕೆ (agriculture activities) ಯನ್ನು ಉತ್ತೇಜಿಸಲು ಸಹಕಾರಿಯಾಗಿದೆ.
ಈಗಾಗಲೇ ದೇಶದಲ್ಲಿರುವ 19 ಲಕ್ಷ ರೈತರಿಗಾಗಿ 14 ಕೋಟಿ ರೂಪಾಯಿಗಳ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕೃಷಿ ಸಚಿವ ಎಲ್ ಚೆಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.
ಈ ತಿಂಗಳ ಗೃಹಲಕ್ಷ್ಮಿ ಹಣ ಬಂದಿದ್ಯಾ? ಮೊಬೈಲ್ ನಲ್ಲೆ ಈ ರೀತಿ ಚೆಕ್ ಮಾಡಿಕೊಳ್ಳಿ
ಬೆಳೆ ವಿಮೆ ಹಣ ಬಿಡುಗಡೆ ಮಾಡಿದ ಸರ್ಕಾರ! (Crop Insurance fund released)
ಮಾರ್ಚ್ 31 2024, ಒಳಗೆ ಲಕ್ಷ ರೈತರ ಖಾತೆಗೆ ಹಣ ಬಿಡುಗಡೆ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ (pm fasal Bima Yojana) ಅಡಿಯಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ರೈತರು ನೋಂದಾಯಿಸಿಕೊಂಡಿದ್ದಾರೆ.
ನೋಂದಾಯಿಸಿಕೊಂಡ ಎಂಟು ಲಕ್ಷ ರೈತರಿಗೆ 600 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಹಾಗೂ ಉಳಿದ 800 ಕೋಟಿ ರೂಪಾಯಿಗಳನ್ನು ಮಾರ್ಚ್ ತಿಂಗಳ ಅಂತ್ಯದ ಒಳಗೆ ಬಿಡುಗಡೆ ಮಾಡಲಾಗುವುದು ಹಾಗೂ ಪ್ರತಿಯೊಬ್ಬ ಫಲಾನುಭವಿ ರೈತರು (farmers) ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ವರದಿಯಾಗಿದೆ.
ಈ ಅರ್ಹತೆ ಇದ್ರೆ ಮಾತ್ರ ನಿಮಗೆ ಬಿಪಿಎಲ್ ಕಾರ್ಡ್ ಸಿಗುತ್ತೆ; ಹೊಸ ರೇಷನ್ ಕಾರ್ಡ್ ಅಪ್ಡೇಟ್
ಸಾಮಾನ್ಯವಾಗಿ ರೈತರು ತಮ್ಮ ಫಸಲು ಚೆನ್ನಾಗಿ ಬರುವುದಕ್ಕಾಗಿ ಕೃಷಿ ಭೂಮಿ (agriculture land) ಯಲ್ಲಿ ದುಡಿಯುತ್ತಾರೆ, ಆದರೆ ಈ ಬೆಳೆಗಳಿಗೂ ಕೂಡ ಯಾವುದೇ ಗ್ಯಾರೆಂಟಿ ಇರುವುದಿಲ್ಲ ಹೀಗಾಗಿ ವಿಮೆ ಮಾಡಿಸಿಕೊಳ್ಳುವುದು ಅತ್ಯಗತ್ಯ.
ಒಂದು ವೇಳೆ ಏನಾದರೂ ಪ್ರಕೃತಿ ವಿಕೋಪದಿಂದ ಬೆಳೆ ನಾಶವಾದರೆ ರೈತರಿಗೆ ದೊಡ್ಡ ಸಂಕಷ್ಟ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ವಿಮೆ ಮಾಡಿಸಿಕೊಂಡಿದ್ದರೆ ವಿಮಾ ಕಂಪನಿ ರೈತರಿಗೆ ಪರಿಹಾರವನ್ನು ಒದಗಿಸುತ್ತದೆ.
ಬೆಳೆ ವಿಮೆ ಹಣವನ್ನು ಶೇಕಡ 25 ರಷ್ಟು ರೈತರಿಗೆ ಲಭ್ಯವಾಗಿದ್ದು, ಇನ್ನೂ 75ರಷ್ಟು ಹಣವನ್ನು ರೈತರಿಗೆ ತಲುಪಿಸುವುದು ಬಾಕಿ ಇದೆ. ಈ ಕೆಲಸ ಮಾರ್ಚ್ 31ರ ಒಳಗೆ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆಯ ಫ್ರೀ ಕರೆಂಟ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ
ನಿಮ್ಮ ಖಾತೆಯನ್ನು ಚೆಕ್ ಮಾಡಿ!
ಮುಂಗಾರು ಮತ್ತು ಮುಂಗಾರು ಮಳೆಯ ಭಾವದಿಂದ ರೈತರ ಫಸಲಿನ ಮೇಲೆ ಬಹಳ ದೊಡ್ಡ ಪರಿಣಾಮ ಬೀರಬಹುದು. ಇದಕ್ಕಾಗಿ ಸರ್ಕಾರ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಈ ಯೋಜನೆಯ ಅಡಿಯಲ್ಲಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರೆ ನಿಮ್ಮ ಖಾತೆಗೆ (Bank Account) ಹಣ ಬಂದಿದ್ಯೋ ಇಲ್ವೋ ಎನ್ನುವುದನ್ನು ತಿಳಿದುಕೊಳ್ಳಲು https://samrakshane.karnataka.gov.in/ ಕರ್ನಾಟಕ ಸರ್ಕಾರದ ಈ ಅಧಿಕೃತ ಸೈಟ್ ಗೆ ಭೇಟಿ ನೀಡಿ. ಅಲ್ಲಿಯ ಅಗತ್ಯ ಇರುವ ನಿಮ್ಮ ವೈಯಕ್ತಿಕ ವಿವರ ಗಳನ್ನು ನೀಡಿದರೆ ನಿಮ್ಮ ಖಾತೆಗೆ ಬೆಳೆ ವಿಮೆ ಡಿಬಿಟಿ ಆಗಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಬಹುದು.
ಇಂತಹವರಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬಂದ್! ಸರ್ಕಾರ ಖಡಕ್ ವಾರ್ನಿಂಗ್
Crop insurance money is directly debited to the farmer’s Bank account