ಇಂತಹ ರೇಷನ್ ಕಾರ್ಡ್ ರದ್ದು, ರಾಜ್ಯ ಸರ್ಕಾರದ ಖಡಕ್ ನಿರ್ಧಾರ! ವಿಶೇಷ ಸೂಚನೆ

ರೇಷನ್ ಕಾರ್ಡ್ (ration card) ಇಲ್ಲದೇ ಇದ್ರೆ ಅದರಲ್ಲೂ ಬಿಪಿಎಲ್ (BPL Ration Card) ಅಥವಾ ಅಂತ್ಯೋದಯ ಕಾರ್ಡ್ ಇಲ್ಲದೆ ಇದ್ರೆ ನೀವು ಸುಲಭವಾಗಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.

ಉದಾಹರಣೆಗೆ ಅನ್ನಭಾಗ್ಯ (Annabhagya scheme) ಯೋಜನೆಯ ಹಣ ನಿಮ್ಮ ಖಾತೆಗೆ (Bank Account) ಬರಬೇಕು ಅಂದ್ರೆ ಗೃಹಲಕ್ಷ್ಮಿ ಹಣ (Gruha lakshmi scheme) ಸಿಗಬೇಕು ಅಂದ್ರೆ ಅಥವಾ ಬೆಳೆ ವಿಮೆ (crop Insurance) ಮೊದಲಾದ ರೈತರಿಗೆ ಅನುಕೂಲವಾಗುವ ಯೋಜನೆ ಪ್ರಯೋಜನ ಪಡೆಯಬೇಕು ಅಂದ್ರೆ ನಿಮ್ಮ ಬಳಿಯ ರೇಷನ್ ಕಾರ್ಡ್ ಇರುವುದು ಕಡ್ಡಾಯ.

ಅನ್ನಭಾಗ್ಯ ಹಣ ಬಿಡುಗಡೆ ಆಯ್ತು, ಖಾತೆ ಚೆಕ್ ಮಾಡಿಕೊಳ್ಳಿ! ಹಣ ಬಾರದಿದ್ರೆ ಈ ರೀತಿ ಮಾಡಿ

ಇದೇ ಕಾರಣಕ್ಕೆ ಈಗ ಸಾಕಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ನೀವು ಕಳೆದ ವರ್ಷ ಅಥವಾ ಅದಕ್ಕಿಂತ ಹಿಂದೆ ರಾಜ್ಯ ಸರ್ಕಾರಕ್ಕೆ ಹೊಸ ಪಡಿತರ ಚೀಟಿ ಬೇಕು ಎಂದು ಅರ್ಜಿ ಸಲ್ಲಿಸಿದ್ದರೆ ಅದನ್ನು ಈಗ ಪಡೆದುಕೊಳ್ಳಲು ಅವಕಾಶ ಇದೆ.

ಆದರೆ ಇದರ ಬೆನ್ನಲ್ಲೇ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರ ಕಾರ್ಡ್ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ ಹಾಗೂ ನೋಟಿಸ್ ಇಲ್ಲದೆ ಈಗಾಗಲೇ ಹಲವರ ಕಾರ್ಡ್ ರದ್ದಾಗಿದೆ, ಹಾಗಾದ್ರೆ ಯಾವ ಕಾರಣಕ್ಕೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಹುದು ಎನ್ನುವುದನ್ನು ನೋಡೋಣ.

ರೈತರ ಖಾತೆಗೆ ನೇರವಾಗಿ ಡಿಬಿಟಿ ಆಗಿದೆ ಬೆಳೆ ವಿಮೆ ಹಣ! ನಿಮ್ಮ ಖಾತೆ ಪರಿಶೀಲಿಸಿ

* ರೇಷನ್ ಕಾರ್ಡ್ ಗೆ ಈಕೆ ವೈ ಸಿ ಆಗದೆ ಇದ್ದರೆ

* ಮನೆಯ ಸದಸ್ಯರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಲಿಂಕ್ ಆಗದೆ ಇದ್ದರೆ

* ಕಳೆದ ಆರು ತಿಂಗಳಿನಿಂದ ಪಡಿತರ ವಸ್ತುಗಳನ್ನು ಪಡೆದುಕೊಳ್ಳದೆ ಇದ್ದರೆ

* ಸರ್ಕಾರದ ಮಾನದಂಡವನ್ನು ಮೀರಿ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದರೆ

* ನೀವು ಟ್ಯಾಕ್ಸ್ ಪೇಯರಾಗಿದ್ದರೆ

* ಸರ್ಕಾರಿ ನೌಕರಿಯಲ್ಲಿ ಇದ್ದರೆ

BPL Ration Cardಈ ಎಲ್ಲಾ ಕಾರಣಗಳಿಂದಾಗಿ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು, ರದ್ದು ಪಡಿಸುವುದಕ್ಕೂ ಮೊದಲು ಸರ್ಕಾರ ಯಾವುದೇ ರೀತಿಯ ನೋಟಿಸ್ ಕಳುಹಿಸುವುದಿಲ್ಲ. ಹಾಗಾಗಿ ನೀವು ನಿಮ್ಮ ಕಾರ್ಡ್ ರದ್ದಾಗಿದಿಯೋ ಅಥವಾ ಈಗಲೂ ಚಾಲ್ತಿಯಲ್ಲಿ ಇದೆಯೋ ಎನ್ನುವುದನ್ನು ತಿಳಿದುಕೊಳ್ಳಲು https://ahara.kar.nic.in/ ಆಹಾರ ಇಲಾಖೆಯ ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ರದ್ದು ಪಡಿಸಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಎನ್ನುವ ಆಯ್ಕೆಯಲ್ಲಿ ನೀವು ರದ್ದುಪಡಿಸಲಾಗಿರುವ ಹೆಸರುಗಳನ್ನು ತಿಳಿದುಕೊಳ್ಳಬಹುದು.

ಈ ತಿಂಗಳ ಗೃಹಲಕ್ಷ್ಮಿ ಹಣ ಬಂದಿದ್ಯಾ? ಮೊಬೈಲ್ ನಲ್ಲೆ ಈ ರೀತಿ ಚೆಕ್ ಮಾಡಿಕೊಳ್ಳಿ

ಹೊಸ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ!

ಇನ್ನು ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಏಪ್ರಿಲ್ ಒಂದರಿಂದ ಈಗಾಗಲೇ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು. ಜೊತೆಗೆ ಯಾರಿಗೆ ನಿಜಕ್ಕೂ ರೇಷನ್ ಕಾರ್ಡ್ ಅಗತ್ಯ ಇದೆಯೋ ಅಂತವರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

ಈ ಅರ್ಹತೆ ಇದ್ರೆ ಮಾತ್ರ ನಿಮಗೆ ಬಿಪಿಎಲ್ ಕಾರ್ಡ್ ಸಿಗುತ್ತೆ; ಹೊಸ ರೇಷನ್ ಕಾರ್ಡ್ ಅಪ್ಡೇಟ್

Cancellation of such ration card, a decision of the state government

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories