ಇಂತಹವರು ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕು! ಸಿಗೋಲ್ಲ ಗೃಹಜ್ಯೋತಿ ಸೌಲಭ್ಯ
ಇನ್ನು ಮುಂದೆ ಇಂಥವರಿಗೆ ಗೃಹಜ್ಯೋತಿ ಯೋಜನೆಯ 200 ಯೂನಿಟ್ ಉಚಿತ ವಿದ್ಯುತ್ ಲಾಭ ಸಿಗುವುದಿಲ್ಲ; ಸರ್ಕಾರದ ಮಹತ್ವದ ಆದೇಶ!
ಎಲ್ಲರಿಗೂ ತಿಳಿದಿರುವ ಹಾಗೆ ಯಾರು 200 ಯೂನಿಟ್ಗಿಂತಲೂ ಕಡಿಮೆ ವಿದ್ಯುತ್ತನ್ನು ಪ್ರತಿ ತಿಂಗಳು ಬಳಕೆ ಮಾಡುತ್ತಾರೋ ಅವರಿಗೆ ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆ (guarantee schemes) ಯ ಪ್ರಯೋಜನವನ್ನು ನೀಡುತ್ತದೆ
ಅಂದರೆ ಗೃಹ ಜ್ಯೋತಿ ಯೋಜನೆ (Gruha jyothi Yojana) ಯ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (free electricity) ಪಡೆದುಕೊಳ್ಳಲು ಸಾಧ್ಯವಿದೆ. ಇಂದು ಲಕ್ಷಾಂತರ ಕುಟುಂಬಗಳು ಕಳೆದ ಆರು ತಿಂಗಳಿನಿಂದ ಒಂದು ರೂಪಾಯಿ ಕೂಡ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡದೆ ಒಂದಷ್ಟು ಹಣ ಉಳಿತಾಯ ಮಾಡಲು ಸಾಧ್ಯವಾಗಿದೆ.
ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಬಿಗ್ ಅಪ್ಡೇಟ್! ಪೆಂಡಿಂಗ್ ಹಣ ಪಡೆಯಿರಿ
ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದ ನಂತರ ಕೇವಲ ಮನೆಯ ಮಾಲೀಕರು ಮಾತ್ರವಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿರುವವರು ಕೂಡ ಅದೇ ಮನೆಯ ಬಿಲ್ ಸಂಖ್ಯೆಯನ್ನು ಕೊಟ್ಟು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಹಾಗೂ ಪ್ರತಿ ತಿಂಗಳು 2000 ವರೆಗೆ ಬಿಲ್ ಪಾವತಿ ಮಾಡುತ್ತಿದ್ದವರು ಕೂಡ ಉಚಿತವಾಗಿ ವಿದ್ಯುತ್ ಪಡೆದುಕೊಳ್ಳುವಂತಾಗಿದೆ. ಇದೊಂದು ರಾಜ್ಯ ಸರ್ಕಾರದ ಮಹತ್ವದ ಹಾಗೂ ಬಹಳ ಪ್ರಯೋಜನಕಾರಿಯಾದ ಯೋಜನೆ ಎನ್ನಬಹುದು.
ಹೆಚ್ಚುತ್ತಿದೆ ವಿದ್ಯುತ್ ಬಳಕೆ! (Electricity usage increased)
ಬೇಸಿಗೆಯ ತಾಪಮಾನ ಎಲ್ಲಾ ಕಡೆ ಜಾಸ್ತಿಯಾಗಿದೆ ಎನ್ನಬಹುದು. ಇದೇ ಕಾರಣಕ್ಕೆ ಈಗ ಎಸಿ, ಕೂಲರ್, ಫ್ಯಾನ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳ (electronics items) ಬಳಕೆ ಕೂಡ ಜಾಸ್ತಿ ಆಗಿದೆ.
ಈ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಹೆಚ್ಚು ಯೂನಿಟ್ ವಿದ್ಯುತ್ ಅನ್ನು ಬಳಸಿಕೊಂಡು ಚಲಿಸುತ್ತವೆ. ಈ ಕಾರಣದಿಂದಾಗಿ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರು ಕೂಡ ಇಂದು ವಿದ್ಯುತ್ ಬಿಲ್ಲು ಪಾವತಿ ಮಾಡುವಂತಹ ಆಗಿದೆ.
ಇಂತಹ ರೇಷನ್ ಕಾರ್ಡ್ ರದ್ದು, ರಾಜ್ಯ ಸರ್ಕಾರದ ಖಡಕ್ ನಿರ್ಧಾರ! ವಿಶೇಷ ಸೂಚನೆ
ನೀವು 200 ಯೂನಿಟ್ ವಿದ್ಯುತ್ ಒಳಗೆ ಅಂದರೆ 160, 170 ಯೂನಿಟ್ ಬಳಕೆ ಮಾಡಿದರು ಕೂಡ 10% ನಷ್ಟು ಸರ್ಕಾರ ಹೆಚ್ಚುರಿಯಾಗಿ ವಿದ್ಯುತ್ ನೀಡುತ್ತದೆ. ಅಲ್ಲಿಗೆ ನೀವು 200 ಯೂನಿಟ್ ಒಳಗಡೆ ವಿದ್ಯುತ್ ಬಳಕೆ ಮಾಡಿದರೆ ಹಣ ಪಾವತಿಸುವ ಅಗತ್ಯ ಇಲ್ಲ.
ಆದರೆ ಈಗ ವರದಿಯ ಪ್ರಕಾರ 20% ನಷ್ಟು ವಿದ್ಯುತ್ ಬಳಕೆ ಹೆಚ್ಚಾಗಿದೆ. ಒಂದು ವೇಳೆ ನೀವು ಬಳಸುವ ವಿದ್ಯುತ್ 200ಕ್ಕಿಂತ ಒಂದೇ ಒಂದು ಯೂನಿಟ್ ಜಾಸ್ತಿ ಆದ್ರೂ ಕೂಡ ನೀವು ಸಂಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಬೇಕು.
ಅನ್ನಭಾಗ್ಯ ಹಣ ಬಿಡುಗಡೆ ಆಯ್ತು, ಖಾತೆ ಚೆಕ್ ಮಾಡಿಕೊಳ್ಳಿ! ಹಣ ಬಾರದಿದ್ರೆ ಈ ರೀತಿ ಮಾಡಿ
ಹೆಚ್ಚಿದೆ ಯೂನಿಟ್ ಬೆಲೆ!
ಹೆಚ್ಚುವರಿಯಾಗಿ ವಿದ್ಯುತ್ ಬಳಕೆ ಮಾಡಿದ್ರೆ ಪ್ರತಿ ಯೂನಿಟ್ ಗೆ ಏಳು ರೂಪಾಯಿನಷ್ಟು ಪಾವತಿ ಮಾಡಬೇಕು ಹಾಗಾಗಿ 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಸುವವವರ ಸಂಖ್ಯೆ ಹೆಚ್ಚಾಗಿದೆ ಈಗಾಗಲೇ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿರುವವರು ಕೂಡ ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿ ಮಾಡಬೇಕಾದ ಸಂದರ್ಭ ಬಂದಿದೆ.
ಪರಿಹಾರ ಏನು?
ಇದಕ್ಕಿರುವ ಒಂದೇ ಒಂದು ಪರಿಹಾರ ಅಂದ್ರೆ ನೀವು ವಿದ್ಯುತ್ ಬಳಕೆಯನ್ನು ಕಂಟ್ರೋಲ್ ಮಾಡಬೇಕು. ಗೀಸರ್, ಕೂಲರ್, ಫ್ಯಾನ್, ಎ ಸಿ ಮೊದಲಾದವುಗಳನ್ನು ಹೆಚ್ಚಾಗಿ ಬಳಕೆ ಮಾಡಬಾರದು.
ಅದರಲ್ಲೂ ವಿದ್ಯುತ್ ಉಳಿತಾಯ ಮಾಡುವಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನ ಖರೀದಿ ಮಾಡಿದ್ರೆ ಹೆಚ್ಚು ಅನುಕೂಲ. ವಿದ್ಯುತ್ ಬಳಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಯೂನಿಟ್ ಬಳಕೆಯ ನಿಯಮ ಬದಲಾಗುವ ಸಾಧ್ಯತೆ ಇದೆ
ಈ ತಿಂಗಳ ಗೃಹಲಕ್ಷ್ಮಿ ಹಣ ಬಂದಿದ್ಯಾ? ಮೊಬೈಲ್ ನಲ್ಲೆ ಈ ರೀತಿ ಚೆಕ್ ಮಾಡಿಕೊಳ್ಳಿ
ಆದ್ದರಿಂದ 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡಲು ಹೋಗಬೇಡಿ. ಸ್ವಲ್ಪ ಮುತುವರ್ಜಿಯಿಂದ ವಿದ್ಯುತ್ ಬಳಕೆ ಮಾಡಿದರೆ ನೀವು ಇನ್ನು ಮುಂದೆಯೂ ಕೂಡ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
Such people should pay the entire electricity bill, Gruha Jyothi Scheme Update