ರೇಷನ್ ಕಾರ್ಡ್ ಆಕ್ಟಿವ್ ಇದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದು! ಹೊಸ ನಿಯಮ
ರೇಷನ್ ಕಾರ್ಡ್ ಸ್ಟೇಟಸ್ ಚೆಕ್ (check your ration card status) ಮಾಡಲು https://ahara.kar.nic.in/ ಈ ಅಧಿಕೃತ ಆಹಾರ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ.
ನೀವು ಕಳೆದ ಆರು ತಿಂಗಳಿನಿಂದ ಅನ್ನಭಾಗ್ಯ (AnnaBhagya scheme) ಮತ್ತು ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣವನ್ನು ಪಡೆದುಕೊಳ್ಳುತ್ತಿರುವ ಫಲಾನುಭವಿಗಳಾಗಿದ್ದರೆ ಈ ಸುದ್ದಿ ನಿಮಗಾಗಿ.
ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ (ration card) ಇದ್ದು ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ ಇದ್ದಲ್ಲಿ ಆಗ ಆ ರೇಷನ್ ಕಾರ್ಡ್ ಆಕ್ಟಿವ್ ಆಗಿ ಇರುವುದಿಲ್ಲ. ಒಂದು ವೇಳೆ ರೇಷನ್ ಕಾರ್ಡ್ ಆಕ್ಟಿವ್ ಆಗಿ ಇಲ್ಲದೆ ಇದ್ದಲ್ಲಿ ಅಂತವರ ಖಾತೆಗೆ (Bank Account) ಹಣ ಬರುವುದಿಲ್ಲ.
ಪೆಂಡಿಂಗ್ ಹಣದ ಜೊತೆಗೆ 7ನೇ ಕಂತಿನ ಗೃಹಲಕ್ಷ್ಮಿ ಹಣ ಕೂಡ ಬಿಡುಗಡೆ! ಚೆಕ್ ಮಾಡಿ
ರೇಷನ್ ಕಾರ್ಡ್ ಆಕ್ಟಿವ್ ಇರಬೇಕು!
ಎಲ್ಲರಿಗೂ ತಿಳಿದಿರುವಂತೆ ಯಾವುದೇ ಗ್ಯಾರಂಟಿ ಯೋಜನೆಯ ಹಣ ವರ್ಗಾವಣೆ ( DBT ) ಆಗಲು ನಿಮ್ಮ ಬಳಿ ಇರುವ ರೇಷನ್ ಕಾರ್ಡ್ ಬಿಪಿಎಲ್ (BPL Ration card) ಆಗಿರಬೇಕು. ಇತ್ತೀಚಿನ ದಿನಗಳಲ್ಲಿ ಉಳ್ಳವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು, ಪಡಿತರ ಪಡೆದುಕೊಳ್ಳಲು ಆ ರೇಷನ್ ಕಾರ್ಡ್ ಅನ್ನು ಬಳಸದೆ ಕೇವಲ ಸರ್ಕಾರದಿಂದ ನೀಡಲ್ಪಡುತ್ತಿರುವ ಹಣ ಪಡೆದುಕೊಳ್ಳಲು ಮಾತ್ರ ಬಳಸಿಕೊಳ್ಳುತ್ತಿದ್ದಾರೆ.
ಹೀಗೆನಾದ್ರೂ ನೀವು ಕಳೆದ ಆರು ತಿಂಗಳಿನಿಂದ ಪಡಿತರ ವಸ್ತುಗಳನ್ನ ನ್ಯಾಯಬೆಲೆ ಅಂಗಡಿಯಲ್ಲಿ ತೆಗೆದುಕೊಳ್ಳದಿದ್ದರೆ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿರುವುದಿಲ್ಲ. ರೇಷನ್ ಕಾರ್ಡ್ ಆಕ್ಟಿವ್ ಆಗಿರದೆ ಇದ್ದರೆ ಇನ್ನು ಮುಂದೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಉಚಿತ ಹಣವು ಕೂಡ ನಿಮ್ಮ ಖಾತೆಗೆ ಡಿ ಬಿ ಟಿ ಆಗುವುದಿಲ್ಲ.
ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಖಡಕ್ ಸೂಚನೆ
ರೇಷನ್ ಕಾರ್ಡ್ ಆಕ್ಟಿವ್ ಆಗಿದ್ಯೋ ಇಲ್ಲವೋ ತಿಳಿದುಕೊಳ್ಳಿ!
ಇದನ್ನ ತಿಳಿದುಕೊಳ್ಳುವುದಕ್ಕೆ ನೀವು ನ್ಯಾಯ ಬೆಲೆ ಅಂಗಡಿ ಅಥವಾ ಸೇವ ಕೇಂದ್ರಕ್ಕಾಗಲಿ ಹೋಗಬೇಕಾಗಿಲ್ಲ ಮನೆಯಲ್ಲಿ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು.
ರೇಷನ್ ಕಾರ್ಡ್ ಸ್ಟೇಟಸ್ ಚೆಕ್ (check your ration card status) ಮಾಡಲು https://ahara.kar.nic.in/ ಈ ಅಧಿಕೃತ ಆಹಾರ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ. ಇಲ್ಲಿ ನೀವು ಪಡಿತರ ಸ್ಥಿತಿ ವಿಭಾಗದಲ್ಲಿ ನಿಮ್ಮ ಪಡಿತರ ಚೀಟಿ ಆಕ್ಟಿವ್ ಆಗಿದ್ಯೋ ಇಲ್ವೋ ಎಂಬುದನ್ನು ತಿಳಿದುಕೊಳ್ಳಬಹುದು
ಇಂತಹವರು ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕು! ಸಿಗೋಲ್ಲ ಗೃಹಜ್ಯೋತಿ ಸೌಲಭ್ಯ
ಇದಕ್ಕಾಗಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ನಂತರ ಪಡಿತರ ಚೀಟಿ ಸಂಖ್ಯೆಯನ್ನು ಹಾಕಿದರೆ ನಿಮ್ಮ ಮೊಬೈಲ್ಗೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿದ ನಂತರ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಬಹುದು.
Annabhagya, Gruha Lakshmi Scheme money only if the ration card is active