ಬೆಳ್ಳಂಬೆಳ್ಳಗೆ ಬಂತು ರೇಷನ್ ಕಾರ್ಡ್ ಡಿಲೀಟ್ ಸಂದೇಶ! ನಿಮ್ಮ ಕಾರ್ಡ್ ಸ್ಥಿತಿ ಚೆಕ್ ಮಾಡಿ
ಗ್ಯಾರಂಟಿ ಯೋಜನೆ (guarantee schemes) ಗಳ ಹಣ ನಿಮ್ಮ ಖಾತೆಗೆ (Bank Account) ಬರಬೇಕು ಅಂದ್ರೆ ರೇಷನ್ ಕಾರ್ಡ್ ಹೊಂದಿರಬೇಕು
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ (ration card) ಅಥವಾ ಪಡಿತರ ಚೀಟಿ ಎನ್ನುವ ದಾಖಲೆಯ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಸಾಕಷ್ಟು ಜನ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.
ಅದೇ ರೀತಿ ಹಲವರು ಈಗಾಗಲೇ ಇರುವ ಕಾರ್ಡ್ ಕಳೆದುಕೊಳ್ಳುವ ಪರಿಸ್ಥಿತಿ ಕೂಡ ಎದುರಾಗಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ (guarantee schemes) ಗಳ ಹಣ ನಿಮ್ಮ ಖಾತೆಗೆ (Bank Account) ಬರಬೇಕು ಅಂದ್ರೆ ರೇಷನ್ ಕಾರ್ಡ್ ಹೊಂದಿರಬೇಕು, ಅದರಲ್ಲೂ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಅಥವಾ AAY ರೇಷನ್ ಕಾರ್ಡ್ ಇರಬೇಕು.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! 8ನೇ ಕಂತಿನ ಹಣಕ್ಕೆ ಇನ್ನೊಂದು ರೂಲ್ಸ್
ಆಹಾರ ಇಲಾಖೆ ನಿಮ್ಮ ಆದಾಯಕ್ಕೆ ಅನುಗುಣವಾಗಿ, BPL, APL, AAY ಎಂದು ವಿಭಾಗ ಮಾಡಿ ಕಾರ್ಡ್ ವಿತರಣೆ ಮಾಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರ ರೇಷನ್ ಕಾರ್ಡ್ ರದ್ದಾಗಿರುವ ಬಗ್ಗೆ ನೀವು ಮಾಹಿತಿ ಪಡೆದಿರಬಹುದು. ಇದಕ್ಕೆ ಕಾರಣಗಳು ಇಂತಿವೆ.
* ಕಳೆದ ಆರು ತಿಂಗಳಿನಿಂದ ಪಡಿತರ ವಸ್ತು ಪಡೆದುಕೊಳ್ಳದಿದ್ದರೆ
* ರೇಷನ್ ಕಾರ್ಡ್ ಗೆ ಕೆವೈಸಿ ಆಗದೆ ಇದ್ದರೆ
* ಆಧಾರ್ ಕಾರ್ಡ್ ರೇಷನ್ ಕಾರ್ಡ್ ಲಿಂಕ್ ಆಗದೆ ಇದ್ದರೆ
* ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳದೆ ಇದ್ದರೆ
* ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರುವ ಕುಟುಂಬದವರಾಗಿದ್ದರೆ
* ಸರ್ಕಾರಿ ನೌಕರಿ ಅಥವಾ ಆದಾಯ ತೆರಿಗೆ ಪಾವತಿ ಮಾಡುವವರಾಗಿದ್ದರೆ
* ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿದ್ದರೆ
* ಕೇವಲ ಸರ್ಕಾರದ ಯೋಜನೆ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುವವರಾಗಿದ್ದರೆ.
ಇವಿಷ್ಟು ಕಾರಣಗಳಿಗೆ ಸರ್ಕಾರ ನಿಮ್ಮ ರೇಷನ್ ಕಾರ್ಡ್ ರದ್ದು ಪಡೆ ಮಾಡುತ್ತದೆ ಹಾಗೂ ಈ ರೀತಿ ರದ್ದುಪಡಿ ಮಾಡುವುದಕ್ಕೆ ಯಾವುದೇ ಪೂರ್ವ ನೋಟಿಫಿಕೇಶನ್ ನಿಮಗೆ ಸರ್ಕಾರ ನೀಡುವುದಿಲ್ಲ.
ಕೊನೆಗೂ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!
ನಿಮ್ಮ ರೇಷನ್ ಕಾರ್ಡ್ ಅಸ್ಥಿತ್ವ ಚೆಕ್ ಮಾಡಿ! (Check your ration card status)
ನೀವು ರೇಷನ್ ಕಾರ್ಡ್ ಹೊಂದಿದ್ದು ನಿಮ್ಮ ಹೆಸರಿನಲ್ಲಿ ರೇಷನ್ ಕಾರು ಉಳಿದುಕೊಂಡಿದ್ಯೋ ಅಥವಾ ಡಿಲೀಟ್ ಆಗಿದ್ಯೋ ಅಂತ ಚೆಕ್ ಮಾಡಿಕೊಳ್ಳಲು, ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಭೇಟಿ ನೀಡಿ.
ಈ ಸರ್ವಿಸ್ ವಿಭಾಗದಲ್ಲಿ ಪಡಿತರ ಚೀಟಿ ಸ್ಥಿತಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ರದ್ದುಪಡಿಸಲಾಗಿರುವ /ತಡೆಹಿಡಿಯಲಾಗಿರುವ ರೇಷನ್ ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಊರು, ಹೋಬಳಿ ಮೊದಲಾದ ಮಾಹಿತಿ ನೀಡಿದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯೋ ಇಲ್ವೋ ಎನ್ನುವುದನ್ನು ತಿಳಿಯಬಹುದು.
ಕರೆಂಟ್ ಬಿಲ್ ಬಾಕಿ ಇರಿಸಿಕೊಂಡವರಿಗೆ ಬಿಗ್ ಅಪ್ಡೇಟ್! ಸರ್ಕಾರದ ಹೊಸ ನಿರ್ಧಾರ
ಚಿಂತೆ ಬೇಡ ಏಪ್ರಿಲ್ ಇಂದ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು!
ಇದುವರೆಗೆ ಯಾರು ರೇಷನ್ ಕಾರ್ಡ್ ಪಡೆದುಕೊಂಡಿಲ್ಲವೋ ಅಥವಾ ನಿಮ್ಮ ರೇಷನ್ ಕಾರ್ಡ್ ತಾಂತ್ರಿಕ ದೋಷದಿಂದ ಡಿಲೀಟ್ ಆಗಿದ್ರೆ ನೀವು ಏಪ್ರಿಲ್ ಒಂದರಿಂದ ಮತ್ತು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
ಸರಿಯಾದ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಳ್ಳಿ. ಹಾಗೂ ಆನ್ಲೈನ್ ಮೂಲಕ ಅಥವಾ ಸೇವಾ ಕೇಂದ್ರಗಳಲ್ಲಿ ಮತ್ತೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಹಾಕಬಹುದು.
Ration card Cancellation Update, Check your card status