ಏಪ್ರಿಲ್ 1ರಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ! ಆದ್ರೆ ಈ ದಾಖಲೆಗಳು ಕಡ್ಡಾಯ

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಆಹ್ವಾನ; ಹೆಚ್ಚು ದಿನ ಟೈಮ್ ಇಲ್ಲ ಬೇಗ ದಾಖಲೆ ಸಿದ್ಧಪಡಿಸಿಕೊಳ್ಳಿ!

ಪಡಿತರ ಚೀಟಿ (ration card) ಎಷ್ಟು ಮಹತ್ವ ಪಡೆದುಕೊಂಡಿದೆ ಅನ್ನೋದು ನಿಮಗೆಲ್ಲರಿಗೂ ಗೊತ್ತು. ಅದರಲ್ಲೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು (guarantee schemes) ಪ್ರತಿಯೊಬ್ಬರಿಗೂ ಪಡಿತರ ಚೀಟಿಯ ಅಗತ್ಯತೆ ಎಷ್ಟಿದೆ ಎಂಬುದನ್ನು ಅರ್ಥ ಮಾಡಿಸಿದೆ ಎನ್ನಬಹುದು.

ಕೇಂದ್ರ ಸರ್ಕಾರ ಬಡತನ ರೇಖೆಗಿಂತ (below poverty line) ಕೆಳಗಿರುವವರಿಗೆ ಹಾಗೂ ಕಡು ಬಡವರಿಗೆ ಆಹಾರ ಧಾನ್ಯಗಳನ್ನ ಒದಗಿಸುವ ಸಲುವಾಗಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಬಿಡುಗಡೆ ಮಾಡಿದೆ.. ಜೊತೆಗೆ ಎಪಿಎಲ್ ಕಾರ್ಡ್ ಕೂಡ ಪಡೆಯಬಹುದು..

ಆದರೆ ಈ ಕಾರ್ಡ್ ನಿಂದ ಉಚಿತ ಪಡಿತರ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಸರ್ಕಾರದ ಕೆಲವು ಯೋಜನೆಗಳ ಪ್ರಯೋಜನ ಸಿಗಬಹುದು ಅಥವಾ ಸಾಲ ಸೌಲಭ್ಯ (Loan) ಪಡೆದುಕೊಳ್ಳಲು ಸಹಾಯವಾಗಬಹುದು.

ಏಪ್ರಿಲ್ 1ರಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ! ಆದ್ರೆ ಈ ದಾಖಲೆಗಳು ಕಡ್ಡಾಯ - Kannada News

ಇನ್ಮುಂದೆ ಎಲ್ಲರಿಗೂ ಸಿಗೋಲ್ಲ ಉಚಿತ ಕರೆಂಟ್! ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ

ಪಡಿತರ ಚೀಟಿಗಾಗಿ ಕಾಯ್ತಾ ಇರುವವರಿಗೆ ಗುಡ್ ನ್ಯೂಸ್!

ಪಡಿತರ ಚೀಟಿ ಮಹತ್ವ ಅಂತೂ ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ. ಅದರಲ್ಲೂ ಬಿಪಿಎಲ್ ಕಾರ್ಡ್ ಇದ್ರೆ ಮಾತ್ರ ಡಿ ಬಿ ಟಿ (DBT) ಹಣ ನಿಮ್ಮ ಖಾತೆಗೆ (Bank Account) ಜಮಾ ಆಗುತ್ತದೆ. ಹಾಗಾಗಿ ಹೊಸ ಪಡಿತರ ಚೀಟಿ ಗಾಗಿ ನೀವು ಕಾಯ್ತಾ ಇದ್ರೆ ಸರ್ಕಾರ ಗುಡ್ ನ್ಯೂಸ್ ನೀಡಿದೆ ಅದೇನು ಗೊತ್ತಾ?

ಹೌದು, ಹೊಸದಾಗಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ (application for new ration card) ಪಡೆದುಕೊಳ್ಳುವುದಕ್ಕೆ ನೀವು ಅರ್ಜಿ ಸಲ್ಲಿಸುವುದು ಇದ್ದರೆ ಏಪ್ರಿಲ್ ಒಂದರಿಂದ ಸರ್ಕಾರ ಅವಕಾಶ ಮಾಡಿಕೊಡಲಿದೆ.

ಈ ಬಿಪಿಎಲ್ ಕಾರ್ಡ್ ಒಂದು ನಿಮ್ಮ ಬಳಿ ಇದ್ದರೆ ಯಾವುದೇ ಸರ್ಕಾರಿ ಯೋಜನೆಗಳು ನಿಮ್ಮ ಕೈತಪ್ಪಿ ಹೋಗುವುದಿಲ್ಲ. ಹಾಗಾಗಿ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ ಹಾಗೂ ಮುಂದಿನ ವಾರವೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತದೆ, ತಪ್ಪದೆ ನ್ಯಾಯಬೆಲೆ ಅಂಗಡಿ ಅಥವಾ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ. ಆನ್ಲೈನ್ ನಲ್ಲಿಯೂ ಕೂಡ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋದ್ರೆ ಅರ್ಜಿ ಸಲ್ಲಿಸುವ ಅವಕಾಶ ಇದೆ.

ಬೆಳ್ಳಂಬೆಳ್ಳಗೆ ಬಂತು ರೇಷನ್ ಕಾರ್ಡ್ ಡಿಲೀಟ್ ಸಂದೇಶ! ನಿಮ್ಮ ಕಾರ್ಡ್ ಸ್ಥಿತಿ ಚೆಕ್ ಮಾಡಿ

BPL Ration Cardಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Documents to get new ration card)

ಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ವಯಸ್ಸಿನ ಪ್ರಮಾಣ ಪತ್ರ
ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ವಿವರ
ಸ್ವಯಂಘೋಷಿತ ಪ್ರಮಾಣ ಪತ್ರ
ಡ್ರೈವಿಂಗ್ ಲೈಸನ್ಸ್
ಮೊಬೈಲ್ ಸಂಖ್ಯೆ
ಮನೆಯ ಎಲ್ಲಾ ಸದಸ್ಯರ ಫೋಟೋಗಳು
ವಿಳಾಸ ಪುರಾವೆ

ಇವಿಷ್ಟು ದಾಖಲೆಗಳು ನಿಮ್ಮ ಬಳಿ ಇದ್ದರೆ ಏಪ್ರಿಲ್ ಒಂದು 2024ಕ್ಕೆ ಆರಂಭವಾಗುವ, ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ನೀವು ಅರ್ಜಿ ಸಲ್ಲಿಸಿ ಹೊಸ ಪಡಿತರ ಚೀಟಿ ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! 8ನೇ ಕಂತಿನ ಹಣಕ್ಕೆ ಇನ್ನೊಂದು ರೂಲ್ಸ್

ಈ ವಿಷಯ ನೆನಪಿರಲಿ!

ಇನ್ನು ರಾಜ್ಯದಲ್ಲಿ ಇರುವ ಎಲ್ಲರೂ ಕೂಡ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದೇ ಅಂದ್ರೆ ಖಂಡಿತವಾಗಿಯೂ ಇಲ್ಲ.

* ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದಿದ್ದರೆ ಬಡತನ ರೇಖೆಗಿಂತ ಕೆಳಗಿನವರು ಆಗಿರಬೇಕು.

* ಕರ್ನಾಟಕದ ಕಾಯಂ ನಿವಾಸಿಗಳೇ ಆಗಿರಬೇಕು

* ಈಗಾಗಲೇ ಪಡಿತರ ಚೀಟಿ ಹೊಂದಿದ್ದರೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅವಕಾಶ ಇಲ್ಲ.

* ಹೊಸದಾಗಿ ಮದುವೆಯಾದ ನವ ವಿವಾಹಿತ ಜೋಡಿ ಇತರ ಮನೆ ಸದಸ್ಯರಿಂದ ದೂರವಾಗಿ ಜೀವನ ನಡೆಸುವುದಾದರೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.

* ಇನ್ನು ನಿಮ್ಮ ಆದಾಯ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ಬಿಪಿಎಲ್ ಹಾಗೂ ಅದಕ್ಕಿಂತ ಜಾಸ್ತಿ ಇದ್ದರೆ ಎಪಿಎಲ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.

ಈ ಎಲ್ಲ ಮುಖ್ಯವಾಗಿರುವಂತ ವಿಚಾರಗಳನ್ನ ನೀವು ನೆನಪಿಟ್ಟುಕೊಂಡು ಹೊಸ ಪಡಿತರ ಚೀಟಿ ನಿಮಗೆ ಅಗತ್ಯ ಇದ್ದರೆ ಅರ್ಜಿ ಸಲ್ಲಿಸಲು ಸಿದ್ಧರಾಗಿ.

ಕೊನೆಗೂ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

New ration card application starts from April 1, these documents are mandatory

Follow us On

FaceBook Google News

New ration card application starts from April 1, these documents are mandatory