Karnataka NewsBangalore News

ಗೃಹಲಕ್ಷ್ಮಿ ಹಣ ಯಾರಿಗೆ ಬಂತು, ಯಾರಿಗೆ ಬಂದಿಲ್ಲ! ರೇಷನ್ ಕಾರ್ಡ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಿ

ರಾಜ್ಯ ಸರ್ಕಾರ ಸಾಕಷ್ಟು ಏಳು ಬೀಳುಗಳ ನಡುವೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಸಕ್ಸಸ್ ಕಾಣುವ ಹಾದಿಯಲ್ಲಿ ಇದೆ, ಈಗಾಗಲೇ 90% ನಷ್ಟು ಮಹಿಳೆಯರು ಉಚಿತವಾಗಿ ಪ್ರತಿ ತಿಂಗಳು 2000 ಪಡೆದುಕೊಳ್ಳಲು ಸಾಧ್ಯವಾಗಿದೆ.

ಇಷ್ಟೆಲ್ಲ ಆದ್ರೂ ಇನ್ನೂ ಸಾಕಷ್ಟು ಮಹಿಳೆಯರು ಒಂದು ಕಂತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ, ಇದಕ್ಕಾಗಿ ಪರಿಹಾರ ಸೂಚಿಸಿದ ಸರ್ಕಾರ ಮಾರ್ಚ್ ತಿಂಗಳಿನಲ್ಲಿ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ಬರುವಂತೆ ಮಾಡಲಾಗುವುದು ಎಂದು ಭರವಸೆ ಕೊಟ್ಟಿದೆ.

Update Aadhaar Card to Get the money of all Govt schemes

ಏಪ್ರಿಲ್ 1ರಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ! ಆದ್ರೆ ಈ ದಾಖಲೆಗಳು ಕಡ್ಡಾಯ

ಏಳನೇ ಕಂತಿನ ಹಣ ಜಮಾ! (7th installment released)

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ, ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ನಿಗದಿತ ದಿನಾಂಕ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ (Money Transfer) ಆಗುತ್ತದೆ.

ಪ್ರತಿ ತಿಂಗಳ ಎರಡನೇ ವಾರ ಅಥವಾ ಮೂರನೇ ವಾರ ಫಲಾನುಭವಿಗಳ ಖಾತೆಗೆ ಡಿಬಿಟಿ (DBT) ಮಾಡಲಾಗುವುದು. ಅದೇ ರೀತಿ 7ನೇ ಕಂತಿನ ಹಣ ಕೂಡ ಬಿಡುಗಡೆ ಆಗಿದ್ದು, ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ತಲುಪಿಸುವ ವ್ಯವಸ್ಥೆ ಆಗಿದೆ.

ಯಾರ ಖಾತೆಗೆ ಇದುವರೆಗೆ ಹಣ ಬಂದಿಲ್ವೋ ಅಂತವರಿಗೂ ಪೆಂಡಿಂಗ್ (pending amount) ಇರುವ ಹಣವನ್ನು ಬಿಡುಗಡೆ ಮಾಡುವ ಭರವಸೆ ನೀಡಿತ್ತು ಸರ್ಕಾರ. ಆದರೆ ಇದುವರೆಗೆ ಕೆಲವೇ ಕೆಲವು ಜನರನ್ನು ಹೊರತುಪಡಿಸಿ ಉಳಿದ ಮಹಿಳೆಯರ ಖಾತೆಗೆ ಅರ್ಜಿ ಸಲ್ಲಿಸಿದ ನಂತರ ಹಣ ವರ್ಗಾವಣೆ ಆಗಿಲ್ಲ. ಇದಕ್ಕೆ ಕೆಲವು ತಾಂತ್ರಿಕ ದೋಷಗಳು ಹಾಗೂ ಮಹಿಳೆಯರ ಬ್ಯಾಂಕ ಖಾತೆಯಲ್ಲಿ ಇರುವ ಸಮಸ್ಯೆ ಕಾರಣ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಇನ್ಮುಂದೆ ಎಲ್ಲರಿಗೂ ಸಿಗೋಲ್ಲ ಉಚಿತ ಕರೆಂಟ್! ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ

ಈ ಸಮಸ್ಯೆ ಪರಿಹಾರಕ್ಕೆ ಕೆಲವು ಉಪಕ್ರಮಗಳನ್ನು ಕೈಗೊಂಡ ಸರ್ಕಾರ, ಮನೆ ಮನೆಗೆ ಆಶಾ ಕಾರ್ಯಕರ್ತೆ ಅಥವಾ ಅಂಗನವಾಡಿ ಸಹಾಯಕಿಯರನ್ನ ಕಳುಹಿಸಿ ಯಾವ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದೆ ಎಂಬುದನ್ನ ತಿಳಿದುಕೊಂಡು ಅದನ್ನು ಪರಿಹರಿಸಿ ಕೊಡುವ ಜವಾಬ್ದಾರಿಯನ್ನು ವಹಿಸಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಬಹುತೇಕ ಎಲ್ಲಾ ಮಹಿಳೆಯರ ಖಾತೆಗೂ ಹಣ ವರ್ಗಾವಣೆ ಆಗುವ ಸಾಧ್ಯತೆ ಇದೆ.

Gruha Lakshmi Yojanaಡಿಬಿಟಿ ಸ್ಟೇಟಸ್ ಚೆಕ್ ಮಾಡಿ!

ನಿಮ್ಮ ಮೊಬೈಲ್ ನಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು. ಮೊದಲಿಗೆ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಫೋನಿನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.

ಈಗ ನಿಮ್ಮ ಆಧಾರ್ ಸಂಖ್ಯೆ (Aadhaar number) ಯನ್ನು ಹಾಕಿ ನಂತರ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಕಳುಹಿಸಲಾಗುತ್ತದೆ.

ಓಟಿಪಿಯನ್ನು ನಮೂದಿಸಿದ ನಂತರ 4 ಅಂಕಿ mPIN ಹಾಕಬೇಕು. ಈ ಇನ್ ಸಂಖೆಯನ್ನ ರೀ ಎಂಟರ್ ಮಾಡಿ ಅಪ್ಲಿಕೇಶನ್ ಗೆ ಲಾಗಿನ್ ಆಗಿ.

ಇಲ್ಲಿ ನಿಮಗೆ ನಾಲ್ಕು ಆಯ್ಕೆಗಳು ಇರುತ್ತವೆ ಅದರಲ್ಲಿ “ಪಾವತಿ ಸ್ಥಿತಿ” ಆಯ್ಕೆ ಮೇಲೆ ಕ್ಲಿಕ್ ಮಾಡಿ

ಈಗ ಯಾವ ಯೋಜನೆಯ DBT ಸ್ಥಿತಿ ತಿಳಿಯಬೇಕು ಎನ್ನುವ ಯೋಜನೆಯ ಹೆಸರನ್ನು ಆಯ್ಕೆ ಮಾಡಿ.

ಈಗ ನಿಮ್ಮ ಖಾತೆಗೆ ಯಾವ ತಿಂಗಳಿನಲ್ಲಿ ಎಷ್ಟು ಹಣ ಜಮಾ ಆಗಿದೆ ಎನ್ನುವ ಸಂಪೂರ್ಣ ವಿವರ ಕಾಣಿಸುತ್ತದೆ.

ಹಣ ಜಮಾ ಆಗಲು ಹೊಸದಾಗಿ ಅರ್ಜಿ ಸಲ್ಲಿಸಿ ಅಥವಾ ಹೊಸ ಖಾತೆ ತೆರೆಯಿರಿ!

ಬೆಳ್ಳಂಬೆಳ್ಳಗೆ ಬಂತು ರೇಷನ್ ಕಾರ್ಡ್ ಡಿಲೀಟ್ ಸಂದೇಶ! ನಿಮ್ಮ ಕಾರ್ಡ್ ಸ್ಥಿತಿ ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆಗೆ ಈಗಲೂ ಕೂಡ ಅರ್ಜಿ ಸಲ್ಲಿಸಬಹುದಾಗಿದ್ದು, ನಿಮ್ಮ ಖಾತೆಗೆ ಇದುವರೆಗೆ ಒಂದೇ ಒಂದು ರೂಪಾಯಿ ಕೂಡ ಜಮಾ ಆಗಿಲ್ಲ ಎಂದಾದರೆ ಅರ್ಜಿ ಸಲ್ಲಿಕೆಯಲ್ಲಿ ಸಮಸ್ಯೆ ಆಗಿರಬಹುದು. ಆದ್ರಿಂದ ನೀವು ಹೊಸದಾಗಿ ಎಲ್ಲಾ ಸರಿಯಾದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸುವುದು ಸೂಕ್ತ.

ಇನ್ನು ಎರಡನೆಯ ಪರಿಹಾರ ಅಂದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕೆವೈಸಿ, ಎನ್‌ಪಿಸಿಐ ಮ್ಯಾಪಿಂಗ್ ಸಮಸ್ಯೆಯಾಗಿದ್ರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಮತ್ತೊಂದು ಹೊಸ ಖಾತೆಯನ್ನು ತೆರೆಯುವುದು ಒಳ್ಳೆಯದು. ಈ ರೀತಿ ಮಾಡಿದರೆ ನೇರವಾಗಿ ಹೊಸ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವಂತೆ ಮಾಡಬಹುದು.

ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! 8ನೇ ಕಂತಿನ ಹಣಕ್ಕೆ ಇನ್ನೊಂದು ರೂಲ್ಸ್

Check Gruha Lakshmi money Status By ration card number

Our Whatsapp Channel is Live Now 👇

Whatsapp Channel

Related Stories