ಯಾವುದೇ ಕಾರಣಕ್ಕೂ ರೇಷನ್ ಕಾರ್ಡ್ ವಿತರಣೆ ಪ್ರಕ್ರಿಯೆ ಸ್ಥಗಿತಗೊಳ್ಳುವುದಿಲ್ಲ! ಇಲ್ಲಿದೆ ಅಪ್ಡೇಟ್
ನೀತಿ ಸಂಹಿತೆ ಜಾರಿಯಾದ ಕಾರಣ ಪಡಿತರ ಚೀಟಿ (Ration Card) ವಿತರಣೆ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇದುವರೆಗೆ 2.95 ಲಕ್ಷ ಪಡಿತರ ಚೀಟಿ ವಿಲೇವಾರಿ ಹಾಗೆಯೇ ಉಳಿದಿದೆ.
ಎಲ್ಲರಿಗೂ ತಿಳಿದಿರುವಂತೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ, ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಲವು ಬದಲಾವಣೆಗಳು ಆಗಬಹುದು. ಜೊತೆಗೆ ಕೆಲವೊಂದಿಷ್ಟು ಕ್ಷೇತ್ರಗಳಲ್ಲಿ ಯಾವೆಲ್ಲ ಕೆಲಸಗಳು ಆಗಬೇಕೋ ಆಗದೆ ಹಾಗೆಯೇ ಉಳಿಯಬಹುದು.
ಇದು ರೇಷನ್ ಕಾರ್ಡ್ ವಿತರಣೆ (ration card distribution) ವಿಚಾರದಲ್ಲಿಯೂ ಸಾರ್ವಜನಿಕರಿಗೆ ಈ ಗೊಂದಲ ಆರಂಭವಾಗಿದೆ. ವಿಧಾನಸಭಾ ಚುನಾವಣೆ (vidhansabha election) ನಡೆಯುವ ಸಮಯದಲ್ಲಿ ನೀತಿ ಸಂಹಿತೆ ಜಾರಿಯಾದ ಕಾರಣ ಪಡಿತರ ಚೀಟಿ (Ration Card) ವಿತರಣೆ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇದುವರೆಗೆ 2.95 ಲಕ್ಷ ಪಡಿತರ ಚೀಟಿ ವಿಲೇವಾರಿ ಹಾಗೆಯೇ ಉಳಿದಿದೆ.
ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದ್ಯಾ? ತಿಳಿಯೋಕೆ ಇಲ್ಲಿದೆ ಡೈರೆಕ್ಟ್ ಲಿಂಕ್
ಹೊಸ ಪಡಿತರ ಚೀಟಿ ವಿತರಣೆಯನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಮತ್ತೆ ಸ್ಥಗಿತಗೊಳ್ಳಬಹುದೇ ಎಂದು ಹಲವರಲ್ಲಿ ಪ್ರಶ್ನೆ ಮೂಡಿತ್ತು. ಆದರೆ ಈಗ DIPR Karnataka ತನ್ನ ಅಧಿಕೃತ “x” ಖಾತೆಯಲ್ಲಿ ಪಡಿತರ ಚೀಟಿ ವಿತರಣೆ ಮಾಡುವ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದೆ.
ಕರ್ನಾಟಕ ಸರ್ಕಾರದ ಅಧಿಕೃತ ಪೋಸ್ಟನಲ್ಲಿ ಏನಿದೆ?
“ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳನ್ನು ಇದೇ March 31ರ ಒಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ, ಇಲಾಕ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ”
ಗೃಹಜ್ಯೋತಿ ಫ್ರೀ ವಿದ್ಯುತ್ ಯೋಜನೆಯ ಬಿಗ್ ಅಪ್ಡೇಟ್; ಪಾವತಿಸಬೇಕು ಸಂಪೂರ್ಣ ಬಿಲ್
ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ವಿತರಣೆ
ಈಗಾಗಲೇ ಸರ್ಕಾರ ಅಧಿಕೃತವಾಗಿ ತಿಳಿಸಿರುವಂತೆ ಏಪ್ರಿಲ್ ಒಂದರಿಂದ ಇದುವರೆಗೆ ಅರ್ಜಿ ಸಲ್ಲಿಸಿ, ನೆನೆಗುದಿಗೆ ಬಿದ್ದಿದ್ದ ಅರ್ಜಿಗಳನ್ನ ವಿಲೇವಾರಿ ಮಾಡಲಾಗುತ್ತದೆ. ಇದರ ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸುವವರೆಗೂ ಕೂಡ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಹೊಸ ಆದ್ಯತಾ ಪಡಿತರ ಚೀಟಿ ಹಾಗೂ ಎಪಿಎಲ್ ಕಾರ್ಡ್ ಪಡೆದುಕೊಳ್ಳಲು ಅವಕಾಶ ಮಾಡಿಕೊಡುವುದಾಗಿ ಸರ್ಕಾರ ತಿಳಿಸಿದೆ.
ಹೊಸ ಪಡಿತರ ಚೀಟಿ ಅರ್ಜಿಗೆ ಈ ದಾಖಲೆಗಳು ಬೇಕು!
ಆಧಾರ್ ಕಾರ್ಡ್
ವೋಟರ್ ಐಡಿ
ವಯಸ್ಸಿನ ಪ್ರಮಾಣ ಪತ್ರ
ಇತ್ತೀಚಿನ ಭಾವಚಿತ್ರ
ಮೊಬೈಲ್ ಸಂಖ್ಯೆ
ಡ್ರೈವಿಂಗ್ ಲೈಸೆನ್ಸ್
ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ
ಆಧಾರ್ ಕಾರ್ಡ್ ಮತ್ತು ಮೊಬೈಲ್ ಲಿಂಕ್ ಆಗಿರುವುದು ಕಡ್ಡಾಯ..
ಗೃಹಲಕ್ಷ್ಮಿ ಹಣ ಯಾರಿಗೆ ಬಂತು, ಯಾರಿಗೆ ಬಂದಿಲ್ಲ! ರೇಷನ್ ಕಾರ್ಡ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಿ
ಯಾರು ಅರ್ಜಿ ಸಲ್ಲಿಸಬಹುದು?
* ಹೊಸದಾಗಿ ಮದುವೆಯಾಗಿ ಜೀವನ ಆರಂಭಿಸುವ ನವದಂಪತಿಗಳು
* ಮದುವೆಯಾದ ನಂತರ ಪ್ರತ್ಯೇಕವಾಗಿ ವಾಸಿಸುವ ದಂಪತಿಗಳು
* ಹಳೆಯ ರೇಷನ್ ಕಾರ್ಡ್ ನಲ್ಲಿ ಇದ್ದ ಹೆಸರನ್ನು ತೆಗೆಸಿ ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳಬಹುದು
* ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ಪ್ರತ್ಯೇಕವಾಗಿ ವಾಸಿಸಲು ಬಯಸಿದರೆ ಅರ್ಜಿ ಸಲ್ಲಿಸಬಹುದು
ಇದರ ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿಗೂ ಕೂಡ ಅವಕಾಶ ಮಾಡಿಕೊಡಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ. ಪಡಿತರ ಚೀಟಿ ತಿದ್ದುಪಡಿ, ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದು ಹಾಗೂ ಈಗಾಗಲೇ ಸಲ್ಲಿಕೆ ಆಗಿರುವ ಪಡಿತರ ಚೀಟಿ ಹೊಡೆದುಕೊಳ್ಳುವುದು ಎಲ್ಲವೂ ಏಪ್ರಿಲ್ ಒಂದರಿಂದ ಆರಂಭವಾಗುತ್ತದೆ. ಹಾಗೂ ನೀವು ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಇತರ ಯಾವುದೇ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದರೆ ಎಲ್ಲಾ ಸಮಯದಲ್ಲಿಯೂ ಆನ್ಲೈನ್ ಪೋರ್ಟಲ್ ತೆರೆದಿರುವುದಿಲ್ಲ. ಹಾಗಾಗಿ ನೀವು ಸೇವಾಕೇಂದ್ರದ ಸಿಬ್ಬಂದಿಗಳೊಂದಿಗೆ ಸಂಪರ್ಕ ಹೊಂದಿದ್ದರೆ ಅದೇ ಸಮಯಕ್ಕೆ ಸೇವಾ ಕೇಂದ್ರಕ್ಕೆ ಹೋಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಏಪ್ರಿಲ್ 1ರಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ! ಆದ್ರೆ ಈ ದಾಖಲೆಗಳು ಕಡ್ಡಾಯ
Ration card distribution process will not stop for any reason, Here is the update