ಆರ್‌ಟಿಇ ಅಡಿ ನಿಮ್ಮ ಮಕ್ಕಳನ್ನು ಉಚಿತವಾಗಿ ಖಾಸಗಿ ಶಾಲೆಗೆ ಸೇರಿಸಿ! ಇಲ್ಲಿದೆ ಮಾಹಿತಿ

ಆರ್ ಟಿ ಇ ಯೋಜನೆಯ ಅಡಿಯಲ್ಲಿ 14 ವರ್ಷದವರೆಗೆ ಉಚಿತ ಶಿಕ್ಷಣ (Education) ಪಡೆದುಕೊಳ್ಳಬಹುದು.

Bengaluru, Karnataka, India
Edited By: Satish Raj Goravigere

ಶಿಕ್ಷಣ (Education) ಅನ್ನುವುದು ಪ್ರತಿಯೊಬ್ಬರ ಹಕ್ಕು (rights) ಅದನ್ನ ಯಾರು ಯಾರಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಹಾಗೆ ಯಾರು ಬೇಕಾದರೂ ಶಿಕ್ಷಣವನ್ನ ಪಡೆದುಕೊಳ್ಳುವುದಕ್ಕೆ ಅಧಿಕಾರ ಇರುತ್ತದೆ.

ಇದಕ್ಕಾಗಿ ಆರ್ ಟಿ ಇ (right to education) act ಜಾರಿಗೆ ತರಲಾಗಿದೆ, ಇದರ ಅಡಿಯಲ್ಲಿ ಆರಂಭಿಕ ಶಿಕ್ಷಣವನ್ನು ಮಕ್ಕಳು ಖಾಸಗಿ ಶಾಲೆಯಲ್ಲಿ (free education in private school) ಪಡೆದುಕೊಳ್ಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡುತ್ತದೆ.

Enroll your kids in a private school under RTE for free, Here is the information

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಂತಹವರಿಗೆ ಉಚಿತ ಕರೆಂಟ್ ಸೌಲಭ್ಯ ಸಿಗೋದಿಲ್ಲ

ಆರ್ ಟಿ ಇ ಅಡಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ!

ನಿಮ್ಮ ಮಗುವಿಗೆ ಕನಿಷ್ಠ ನಾಲ್ಕು ವರ್ಷ ವಯಸ್ಸಾಗಿದ್ದರೆ ಎಲ್ಕೆಜಿ ಶಿಕ್ಷಣವನ್ನು ಕೊಡಿಸಬಹುದು ಹಾಗೂ ಐದರಿಂದ ಆರು ವರ್ಷದ ಮಕ್ಕಳು ಒಂದನೇ ತರಗತಿಗೆ ಉಚಿತ ಪ್ರವೇಶಾತಿ ಪಡೆದುಕೊಳ್ಳಬಹುದು. ನೀವು ಆನ್ಲೈನ್ ಮೂಲಕವೇ ಅರ್ಜಿ ಹಾಕಬಹುದು.

ಮಗುವಿನ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವಿಳಾಸ ಪುರಾವೆ ಮೊದಲಾದ ದಾಖಲೆಗಳು ಬೇಕಾಗುತ್ತವೆ. ಇದರ ಜೊತೆಗೆ ಮಗುವಿನ ಭಾವಚಿತ್ರ ಹಾಗೂ ತಂದೆ ತಾಯಿಯ ಆಧಾರ್ ಕಾರ್ಡ್ ಕೂಡ ಕಡ್ಡಾಯ.

ಈ ಜಿಲ್ಲೆಯ ರೈತರಿಗೆ ಉಚಿತ ಭೂಮಿ ಹಂಚಿಕೆ ಮತ್ತು ಹಕ್ಕು ಪತ್ರ ವಿತರಣೆ; ಇಲ್ಲಿದೆ ಮಾಹಿತಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ! (Last date to apply)

free education under RTEಉಚಿತ ಎಲ್ ಕೆ ಜಿ (LKG) ಮತ್ತು ಒಂದನೇ ತರಗತಿ (1st standard) ವಿದ್ಯಾಭ್ಯಾಸ ಕೊಡಿಸಲು ಏಪ್ರಿಲ್ 22 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಏಪ್ರಿಲ್ 30 2024 ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತದೆ.

ಆಯ್ಕೆಯಾದ ಮಕ್ಕಳು ಮೇ 30, 2024 ಒಳಗೆ ಶಾಲೆಗೆ ದಾಖಲಾತಿ ಪಡೆದುಕೊಂಡಿರಬೇಕು. ನಂತರ ಎರಡನೇ ಸುತ್ತಿನ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಕುಟುಂಬದ ಆದಾಯದ ಆಧಾರದ ಮೇಲೆ ಶೇಕಡ 25% ನಷ್ಟು ಬಡ ಕುಟುಂಬಕ್ಕೆ ಸೀಟು ಮೀಸಲಾಗಿರುತ್ತದೆ.

ಸಿಹಿ ಸುದ್ದಿ, ಮಾರ್ಚ್ 31ರ ಒಳಗೆ ಕೃಷಿ ಸಾಲದ ಅಸಲು ಪಾವತಿ ಮಾಡಿದ್ರೆ ಬಡ್ಡಿ ಮನ್ನಾ!

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಆರ್ ಟಿ ಇ ಯೋಜನೆಯ ಅಡಿಯಲ್ಲಿ 14 ವರ್ಷದವರೆಗೆ ಉಚಿತ ಶಿಕ್ಷಣ (Education) ಪಡೆದುಕೊಳ್ಳಬಹುದು. ಮಿತಿಗಿಂತ ಹೆಚ್ಚು ಅರ್ಜಿ ಬಂದರೆ ದಾಖಲಾತಿ ಆಧಾರದ ಮೇಲೆ ಅರ್ಜಿ ಪರಿಗಣಿಸಲಾಗುವುದು. ಪೋಷಕರು ತಮ್ಮ ಮಕ್ಕಳ ಎಲ್ಲಾ ಮಾಹಿತಿಯೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಛೇರಿ, ಅಥವಾ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

http://www.schooleducation.kar.nic.in/ ಸರ್ಕಾರ ಈ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆದುಕೊಂಡು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಸರ್ಕಾರದ ಒಂದು ಅತ್ಯುತ್ತಮ ಯೋಜನೆ ರೈಟ್ ಟು ಎಜುಕೇಶನ್ ಯೋಜನೆ ಆಗಿದ್ದು ಬಡವರು ಕೂಡ ಎಲ್ ಕೆ ಜಿ ಮತ್ತು ಖಾಸಗಿ ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾಭ್ಯಾಸ ಪಡೆದುಕೊಳ್ಳಲು ಸಾಧ್ಯವಿದೆ.

ಈ 3 ದಾಖಲೆಗಳನ್ನು ಕೊಟ್ಟು ಪೆಂಡಿಂಗ್ ಗೃಹಲಕ್ಷ್ಮಿ ಹಣ ಪಡೆಯಿರಿ! ಹೊಸ ಅಪ್ಡೇಟ್

Enroll your kids in a private school under RTE for free, Here is the information