ಈ ಜಿಲ್ಲೆಯ ರೈತರಿಗೆ ಉಚಿತ ಭೂಮಿ ಹಂಚಿಕೆ ಮತ್ತು ಹಕ್ಕು ಪತ್ರ ವಿತರಣೆ; ಇಲ್ಲಿದೆ ಮಾಹಿತಿ
ಸಚಿವರು ಶೀಘ್ರದಲ್ಲಿಯೇ ಅರಣ್ಯ ಭೂಮಿ ಮತ್ತು ರೈತರ ಕೃಷಿ ಭೂಮಿ (Agriculture Land) ಸರ್ವೆ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಭೂಮಿಯ (forest land) ಸುತ್ತಮುತ್ತ ಕೃಷಿ ಮಾಡಿಕೊಂಡು ಇರುವ ರೈತರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕಡೆಗೂ ಬಹಳ ವರ್ಷಗಳ ನಂತರ ರೈತರು (farmers) ಸ್ವಂತ ಜಮೀನು (Own Property) ಪಡೆದುಕೊಳ್ಳಲು ಸರ್ಕಾರ ಸಹಕರಿಸುತ್ತಿದೆ.
ಅರಣ್ಯ ಭೂಮಿಯ ಸುತ್ತಮುತ್ತ ಕೃಷಿ ಮಾಡುತ್ತಿರುವ ರೈತರು ಅರಣ್ಯ ಇಲಾಖೆಯಿಂದ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಕಂದಾಯ ಭೂಮಿ (revenue department land) ಯನ್ನು ಅರಣ್ಯ ಭೂಮಿ ಎಂದು ಘೋಷಿಸಿರುವುದೇ ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಅರಣ್ಯ ಭೂಮಿಯ ಸುತ್ತಮುತ್ತ ತಮ್ಮ ಜಮೀನು ಹೊಂದಿದ್ದರು ಕೂಡ ರೈತರು ಸ್ವಂತದಾಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಸಿಹಿ ಸುದ್ದಿ, ಮಾರ್ಚ್ 31ರ ಒಳಗೆ ಕೃಷಿ ಸಾಲದ ಅಸಲು ಪಾವತಿ ಮಾಡಿದ್ರೆ ಬಡ್ಡಿ ಮನ್ನಾ!
ಇದು ಇಂದು ಮೊನ್ನೆಯ ಸಮಸ್ಯೆ ಅಲ್ಲ, ದಶಕಗಳಿಂದಲೂ ಕೂಡ ಈ ಸಮಸ್ಯೆಯನ್ನು ರೈತರು ಎದುರಿಸುತ್ತಲೇ ಬಂದಿದ್ದಾರೆ. ಇದೀಗ ಈ ವರ್ಷದ ರಾಜ್ಯ ಬಜೆಟ್ ನಲ್ಲಿ ರೈತ ಪರವಾಗಿ ಬಜೆಟ್ ಮಂಡಿಸಲಾಗಿದ್ದು, ಅರಣ್ಯ ಇಲಾಖೆಯಿಂದ ರೈತರಿಗೆ ತೊಂದರೆ ಆಗದೆ ಇರುವ ರೀತಿಯಲ್ಲಿ ಉಪಕ್ರಮ ಕೈಗೊಂಡಿರುವ ಬಗ್ಗೆ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಜಂಟಿ ಸರ್ವೆ ಕಾರ್ಯಕ್ಕೆ ಸರ್ಕಾರ ಅಸ್ತು! (Government allowed for survey)
ರೈತರು ಎದುರಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು ಸರ್ವೇ ಕೆಲಸ ನಡೆಯಬೇಕು ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು. ಕೊನೆಗೂ ಫೆಬ್ರವರಿ 17 2024ರಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಹಾಗಾಗಿ ಶೀಘ್ರದಲ್ಲಿಯೇ ಅರಣ್ಯ ಭೂಮಿ ಮತ್ತು ರೈತರ ಕೃಷಿ ಭೂಮಿ (Agriculture Land) ಸರ್ವೆ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇಂತಹ ರೈತರ ಖಾತೆಗೆ ಜಮಾ ಆಗಲಿದೆ 10 ಸಾವಿರ ರೂಪಾಯಿ! ಮಹತ್ವದ ಘೋಷಣೆ
ಜಂಟಿ ಸರ್ವೆಯಿಂದ ಏನು ಪ್ರಯೋಜನ?
ಡ್ರೋನ್ ಮೂಲಕ ಸರ್ವೆ ನಡೆಸಲಾಗುತ್ತದೆ ಹಾಗೂ ಈ ರೀತಿ ಸರ್ವೇ ಮಾಡಿದಾಗ ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ಒತ್ತಾಯಪೂರ್ವಕವಾಗಿ ಹೇಳುತ್ತಿದ್ದರೆ ತಕ್ಷಣ ಆ ಭೂಮಿಯನ್ನು ಕಂದಾಯ ಭೂಮಿ ಹಿಂದೆ ಘೋಷಿಸಿ ಡಿ ನೋಟಿಫಿಕೇಶನ್ (D – notification) ಮಾಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಈ 3 ದಾಖಲೆಗಳನ್ನು ಕೊಟ್ಟು ಪೆಂಡಿಂಗ್ ಗೃಹಲಕ್ಷ್ಮಿ ಹಣ ಪಡೆಯಿರಿ! ಹೊಸ ಅಪ್ಡೇಟ್
ಡಿ ನೋಟಿಫಿಕೇಶನ್ ಮಾಡಿದ ನಂತರ ಕಂದಾಯ ಭೂಮಿಯ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೆ ಬಗೆರ್ ಹುಕುಂ ಯೋಜನೆಯಡಿಯಲ್ಲಿ ಫಾರಂ ನಂಬರ್ 57 ಅಡಿ ಅರ್ಜಿ ಸಲ್ಲಿಸಿರುವವರೆಗೆ ಸಾಗುವಳಿ ಪತ್ರ ನೀಡಲಾಗುವುದು ಎಂದಿದ್ದಾರೆ ಸಚಿವರು.
ಇನ್ನು ಜಂಟಿ ಸರ್ವೆ ಕಾರ್ಯ ನಡೆದರೆ ರೈತರಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ರಸ್ತೆ ಮೊದಲಾದವುಗಳನ್ನು ಕೂಡ ಒದಗಿಸಿಕೊಡಲಾಗುವುದು. ಹಾಗಾಗಿ ಜಂಟಿ ಸರ್ವೆ ಮಾಡಿದಾಗ ಕಂದಾಯ ಭೂಮಿಯಲ್ಲಿ ರೈತರ ಸಾಗುವಳಿ ಕಂಡು ಬಂದರೆ ಅವರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಚಾಮರಾಜನಗರ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸದ್ಯ ಸರ್ವೆ ಕಾರ್ಯ ಆರಂಭಿಸಲಾಗುವುದು ಎಂದು ವರದಿ ಮಾಡಲಾಗಿದೆ.
ಯಾವುದೇ ಕಾರಣಕ್ಕೂ ರೇಷನ್ ಕಾರ್ಡ್ ವಿತರಣೆ ಪ್ರಕ್ರಿಯೆ ಸ್ಥಗಿತಗೊಳ್ಳುವುದಿಲ್ಲ! ಇಲ್ಲಿದೆ ಅಪ್ಡೇಟ್
Allotment of land and distribution of Hakku Patra to the farmers of this district