ಅನ್ನಭಾಗ್ಯ ಯೋಜನೆ ಅಪ್ಡೇಟ್; ಪೆಂಡಿಂಗ್ ಇರೋ ಹಣ ಯಾವಾಗ ಜಮಾ! ಇಲ್ಲಿದೆ ಮಾಹಿತಿ
ಗ್ಯಾರಂಟಿ ಯೋಜನೆ (guarantee schemes) ಯಲ್ಲಿ ಅನ್ನಭಾಗ್ಯ (Annabhagya scheme) ಕೂಡ ಒಂದು ಯಶಸ್ವಿಯಾಗಿರುವ ಯೋಜನೆ ಎನ್ನಬಹುದು.
ರಾಜ್ಯದ ಗ್ಯಾರಂಟಿ ಯೋಜನೆ (guarantee schemes) ಯಲ್ಲಿ ಅನ್ನಭಾಗ್ಯ (Annabhagya scheme) ಕೂಡ ಒಂದು ಯಶಸ್ವಿಯಾಗಿರುವ ಯೋಜನೆ ಎನ್ನಬಹುದು. ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಉಚಿತವಾಗಿ ಧಾನ್ಯಗಳನ್ನು ಪಡೆದುಕೊಳ್ಳಬಹುದು. ಆದರೆ ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ರಾಜ್ಯದಲ್ಲಿ ಹಣವನ್ನು ಕೂಡ ಫಲಾನುಭವಿಗಳು ಪಡೆದುಕೊಳ್ಳುವಂತೆ ಆಗಿದೆ.
ಹೌದು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ, 10 ಕೆಜಿ ಅಕ್ಕಿಯನ್ನು ಸರ್ಕಾರ ಉಚಿತವಾಗಿ ನೀಡಬೇಕಿತ್ತು. ಅದರಲ್ಲೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಅಕ್ಕಿ ಕೊಡಬೇಕಿತ್ತು. ಆದ್ರೆ ಈಗ ಐದು ಕೆಜಿ ಅಕ್ಕಿ ಮಾತ್ರ ಉಚಿತವಾಗಿ ಲಭ್ಯವಿದೆ. ಇನ್ನು ಐದು ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಒದಗಿಸಿಲ್ಲ, ನಮ್ಮ ಬಳಿ ಅಕ್ಕಿ ದಾಸ್ತಾನು ಕೂಡ ಇಲ್ಲ ಎಂದು ಹೇಳಿರುವ ರಾಜ್ಯ ಸರ್ಕಾರ ಫಲಾನುಭವಿಗಳ ಖಾತೆಗೆ (Bank Account) ಹಣವನ್ನು ಜಮಾ ಮಾಡುತ್ತಿದೆ.
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್; 8ನೇ ಕಂತಿನ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ
ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಾ!
ಇನ್ನು ಎಷ್ಟು ತಿಂಗಳುಗಳವರೆಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣವನ್ನು ಡಿಬಿಟಿ (DBT) ಮಾಡುತ್ತದೆಯೋ ಸರ್ಕಾರ ಗೊತ್ತಿಲ್ಲ, ಆದರೆ ಸದ್ಯಕಂತು ಫಲಾನುಭವಿಗಳು ಪ್ರತಿ ತಿಂಗಳು ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಕ್ಕಿಯ ಬದಲು ಸರ್ಕಾರ ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿರುವವರ ಖಾತೆಗೆ ಜಮಾ ಮಾಡುತ್ತಿದೆ.
ಪೆಂಡಿಂಗ್ ಇರುವ ಹಣ ಜಮಾ
ಇನ್ನು ಸರ್ಕಾರ ಈಗಾಗಲೇ ತಿಳಿಸಿರುವಂತೆ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಅನ್ನಭಾಗ್ಯ ಹಣ ಜಮಾ ಆಗದೇ ಇದ್ದರೆ ಮಾರ್ಚ್ ತಿಂಗಳಲ್ಲಿ ಒಟ್ಟಿಗೆ ಪೆಂಡಿಂಗ್ ಇರುವ ಹಣವನ್ನು ಕೂಡ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆ ನಿಮ್ಮ ಖಾತೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಇದ್ದರೆ ಅಂದರೆ E-KYC, NPCI mapping ಇವೆಲ್ಲವನ್ನು ಸರಿಯಾಗಿ ಮಾಡಿಸಿಕೊಂಡಿದ್ದರೆ ಕಳೆದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಜಮಾ ಆಗದೇ ಇರುವ ಹಣ ಮಾರ್ಚ್ ತಿಂಗಳಲ್ಲಿ ಒಟ್ಟಿಗೆ ಫಲಾನುಭವಿಗಳ ಖಾತೆಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.
ಇನ್ನು ಕೇವಲ ಎರಡು ದಿನಗಳಲ್ಲಿ ಮಾರ್ಚ್ ತಿಂಗಳು ಕೊನೆಗೊಳ್ಳುತ್ತದೆ ಹಾಗಾಗಿ ಈ ಸಮಯದಲ್ಲಿ ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಬರಬಹುದು ನಿಮ್ಮ ಖಾತೆಯನ್ನು ಚೆಕ್ ಮಾಡಿ.
ರೇಷನ್ ಕಾರ್ಡ್ ಅರ್ಜಿಗೆ ಈ ದಾಖಲೆಗಳು ಕಡ್ಡಾಯ; ಕೆಲವೇ ದಿನಗಳು ಮಾತ್ರ ಅವಕಾಶ
ಮನೆಯ ಯಜಮಾನನ ಬದಲು ಇವರ ಖಾತೆಗೆ ಹಣ ಜಮಾ!
ಮನೆಯ ಯಜಮಾನನ ಬ್ಯಾಂಕ್ ಖಾತೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ, ಅಥವಾ ಮನೆಯ ಮೊದಲ ಹಿರಿಯ ಸದಸ್ಯರ ಅನುಪಸ್ಥಿತಿಯಲ್ಲಿ ಮನೆಯ ಎರಡನೆಯ ಹಿರಿಯ ಸದಸ್ಯರ ಖಾತೆಗೆ ಹಣ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿದೆ. ಇದಕ್ಕೆ ಎರಡನೇ ಹಿರಿಯ ಸದಸ್ಯರ ಬ್ಯಾಂಕ್ ಖಾತೆಗಳು ಕೂಡ ಈಕೆ ವೈ ಸಿ ಅಪ್ಡೇಟ್ ಆಗಿರುವುದು ಕಡ್ಡಾಯ.
ನಿಮ್ಮ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! (Check your DBT status)
ಮಾರ್ಚ್ 31ರ ಒಳಗೆ ಫೆಬ್ರುವರಿ ತಿಂಗಳ ಹಣವೂ ಕೂಡ ಜಮಾ ಆಗಬೇಕು, ಬ್ಯಾಂಕ್ ನೋಟಿಫಿಕೇಶನ್ ಬಾರದಿದ್ದರೆ ಬ್ಯಾಂಕ್ ಗೆ ಹೋಗಿ ನಿಮ್ಮ ಪಾಸ್ ಬುಕ್ ಎಂಟ್ರಿ ಮಾಡಿಸಿ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದರೆ ತಿಳಿಯುತ್ತದೆ.
ಆರ್‌ಟಿಇ ಅಡಿ ನಿಮ್ಮ ಮಕ್ಕಳನ್ನು ಉಚಿತವಾಗಿ ಖಾಸಗಿ ಶಾಲೆಗೆ ಸೇರಿಸಿ! ಇಲ್ಲಿದೆ ಮಾಹಿತಿ
ಇನ್ನು ಅನ್ನಭಾಗ್ಯ ಯೋಜನೆ DBT ಸ್ಟೇಟಸ್ ತಿಳಿದುಕೊಳ್ಳಲು, https://ahara.kar.nic.in/ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ನಿಮ್ಮ ಖಾತೆಗೆ ಯಾವಾಗಿನಿಂದ ಎಷ್ಟು ಹಣ ಜಮಾ ಆಗಿದೆ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು.
Annabhagya Yojana Update, information about Pending money Release