Karnataka NewsBangalore News

ಗೃಹಲಕ್ಷ್ಮಿ 8ನೇ ಕಂತಿನ ಬಿಗ್ ಅಪ್ಡೇಟ್; ಈ ಮಹಿಳೆಯರಿಗೆ ಹಣ ಜಮಾ ಆಗೋದು ಡೌಟ್

ಸಾಮಾನ್ಯವಾಗಿ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ಮಹಿಳೆಯರು ತಮ್ಮ ಅಗತ್ಯಗಳನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಅಥವಾ ಹಣಕಾಸಿನ ಸಹಾಯ (financial help) ಬೇಕಾದಾಗ ಪ್ರತಿ ಬಾರಿ ಗಂಡನ ಮುಂದೆ ಕೈಚಾಚಲು ಇಷ್ಟಪಡುವುದಿಲ್ಲ.

ಇದಕ್ಕಾಗಿಯೇ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಜಾರಿಗೆ ಬಂದಿತು, ಈ ಮೂಲಕ ಮಹಿಳೆಯರು 2000 ಪ್ರತಿ ತಿಂಗಳು ಪಡೆದುಕೊಂಡು ತಮ್ಮ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ನೆರವು ನೀಡಲಾಯಿತು. ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಏಳು ತಿಂಗಳು ಕಳೆದಿದೆ ಹಾಗೂ ಇಲ್ಲಿಯವರೆಗೆ 14,000 ರೂಪಾಯಿಗಳು ಮಹಿಳೆಯರ ಖಾತೆಗೆ (Bank Account) ಉಚಿತವಾಗಿ ಜಮಾ ಆಗಿದೆ.

Gruha Lakshmi Yojana funds have been released, Check the women of this district

ಅಪ್ಲೈ ಮಾಡಿದ ಎಲ್ಲರಿಗೂ ಸಿಗಲ್ಲ ರೇಷನ್ ಕಾರ್ಡ್, ಇಂತವರಿಗೆ ಮಾತ್ರ ಹೊಸ ಕಾರ್ಡ್

ಎಲ್ಲಾ ಮಹಿಳೆಯರ ಖಾತೆಗೆ ಬರ್ತಿಲ್ಲ ಹಣ!

ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಎಲ್ಲಾ ಮಹಿಳೆಯರ ಖಾತೆಗೂ ಅರ್ಜಿ ಸಲ್ಲಿಸಿದ ನಂತರ ಹಣ ಜಮಾ ಆಗಬೇಕಿತ್ತು, ಆದರೆ ಅರ್ಜಿ ಸಲ್ಲಿಸಿದ ನಂತರವೂ ಹಲವು ಮಹಿಳೆಯರಿಗೆ ಹಣ ಬಂದಿಲ್ಲ. ಇದಕ್ಕೆ ಸರ್ಕಾರ ಕೆಲವು ಪ್ರಮುಖ ಕಾರಣಗಳನ್ನು ಕೂಡ ಹೇಳುತ್ತೆ. ಕೆಲವರ ಖಾತೆಗೆ ಮೊದಲು ಒಂದೆರಡು ಕಂತಿನ ಹಣ ಬಂದಿದೆ, ಇನ್ನು ಕೆಲವರಿಗೆ ಅರ್ಜಿ ಸಲ್ಲಿಸಿದ್ದು ಮಾತ್ರ ಒಂದು ರೂಪಾಯಿ ಕೂಡ ಜಮಾ ಆಗಿಲ್ಲ.

ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡಿ!

ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಸರ್ವರ್ ಸಮಸ್ಯೆ (server problem) ಯಿಂದಾಗಿ ಅರ್ಜಿ ಸ್ವೀಕಾರ ಆಗದೇ ಇರಬಹುದು. ಅಥವಾ ಸೇವಾ ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರಗೊಂಡಿದೆ ಎಂದು ತಿಳಿಸಲಾಗಿದ್ದರೂ ಸರ್ಕಾರದ ಡೇಟಾಬೇಸ್ ನಲ್ಲಿ ನಿಮ್ಮ ಅರ್ಜಿ ಸಲ್ಲಿಕೆ ಆಗದೆ ಇರಬಹುದು.

ಹಾಗಾಗಿ ನೀವು ಮೊದಲು ನಿಮ್ಮ ಅರ್ಜಿ ಸ್ಟೇಟಸ್ ತಿಳಿದುಕೊಳ್ಳಬೇಕು ಇದಕ್ಕಾಗಿ 8147500500 ಈ ಸಂಖ್ಯೆಗೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ HI ಎಸ್ಎಂಎಸ್ ಕಳುಹಿಸಿ. ನಿಮ್ಮ ಗೃಹಲಕ್ಷ್ಮಿಯ ಅರ್ಜಿ ಸ್ಟೇಟಸ್ ತಿಳಿಯುತ್ತದೆ. ಒಂದು ವೇಳೆ ಅರ್ಜಿ ಸ್ವೀಕಾರ ಗೊಂಡಿಲ್ಲ ಎನ್ನುವ ಸಂದೇಶ ಬಂದಿದ್ದರೆ ಸೇವಾ ಕೇಂದ್ರಕ್ಕೆ ಹೋಗಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅನ್ನಭಾಗ್ಯ ಯೋಜನೆ ಅಪ್ಡೇಟ್; ಪೆಂಡಿಂಗ್ ಇರೋ ಹಣ ಯಾವಾಗ ಜಮಾ! ಇಲ್ಲಿದೆ ಮಾಹಿತಿ

Gruha Lakshmi Yojanaದಾಖಲೆಗಳಲ್ಲಿ ಹೆಸರುಗಳು ಮ್ಯಾಚ್ ಆಗಬೇಕು!

ಇದು ಬಹಳ ಮುಖ್ಯವಾಗಿರುವ ವಿಚಾರವಾಗಿದೆ. ಮೊದಲನೇದಾಗಿ ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲಿ ಇರಬೇಕು. ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯ ಹೆಸರು ರೇಷನ್ ಕಾರ್ಡ್, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಗಳಲ್ಲಿ ಒಂದೇ ರೀತಿಯಲ್ಲಿ ಇರಬೇಕು.

ಹೆಸರುಗಳು ಮ್ಯಾಚ್ ಆಗದೆ ಇದ್ದರೆ ಹಣ ಬಾರದೆ ಇರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಎಲ್ಲಾ ದಾಖಲೆಗಳಲ್ಲಿಯೂ ನಿಮ್ಮ ಹೆಸರು ಒಂದೇ ರೀತಿಯಾಗಿ ಇದೆಯಾ ಎನ್ನುವುದನ್ನು ಚೆಕ್ ಮಾಡಿ. ಒಂದು ವೇಳೆ ಇಲ್ಲ ಎಂದಾದರೆ ಆಯಾ ದಾಖಲೆಗಳನ್ನು ಆಯಾ ಕೇಂದ್ರಗಳಲ್ಲಿ ಅಪ್ಡೇಟ್ ಮಾಡಿಸಿ ಸರಿ ಮಾಡಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆ ಅಪ್ಡೇಟ್; 8ನೇ ಕಂತಿನ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ

8ನೇ ಕಂತಿನ ಹಣ ಬಿಡುಗಡೆಗೆ ಚರ್ಚೆ!

ಫೆಬ್ರುವರಿ ತಿಂಗಳ ಹಣವನ್ನು ಈಗಾಗಲೇ ಮಹಿಳೆಯರ ಖಾತೆಗೆ ಸರ್ಕಾರ ಜಮಾ ಮಾಡಿದೆ. ಮಾರ್ಚ್ ತಿಂಗಳು ಮುಗಿಯಲು ಇನ್ನೂ ಎರಡು ದಿನಗಳು ಬಾಕಿ ಇದ್ದು ಅಷ್ಟರಲ್ಲಿ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಇದೆ. ಏಳನೇ ಕಂತಿನ ಹಣ ಪಡೆದುಕೊಂಡ, ಮಹಿಳೆಯರು 8ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾದು ಕುಳಿತಿದ್ದಾರೆ.

ಏಪ್ರಿಲ್ ಮೊದಲ ಅಥವಾ ಎರಡನೇ ವಾರ 8ನೇ ಕಂತಿನ ಹಣವು ಕೂಡ ಬಿಡುಗಡೆಯಾಗಲಿದ್ದು ಫಲಾನುಭವಿ ಮಹಿಳೆಯರ ಖಾತೆಯಲ್ಲಿ ಒಟ್ಟು 16,000ರೂ. ಉಳಿಯಲಿದೆ.

ರೇಷನ್ ಕಾರ್ಡ್ ಅರ್ಜಿಗೆ ಈ ದಾಖಲೆಗಳು ಕಡ್ಡಾಯ; ಕೆಲವೇ ದಿನಗಳು ಮಾತ್ರ ಅವಕಾಶ

Gruha Lakshmi 8th Installment Big Update, money will not deposit for Such People

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories