ನಿಮ್ಮ ರೇಷನ್ ಕಾರ್ಡ್ E-KYC ಆಗಿದೆಯಾ ಇಲ್ವಾ? ಈ ರೀತಿ ಸುಲಭವಾಗಿ ಚೆಕ್ ಮಾಡಿಕೊಳ್ಳಿ

Story Highlights

ಎಂಟನೇ ಕಂತಿನ ಗೃಹಲಕ್ಷ್ಮಿ, ಅನ್ನ ಭಾಗ್ಯ DBT ಹಣ ಖಾತೆಗೆ ಬರಬೇಕು ಅಂದ್ರೆ ರೇಷನ್ ಕಾರ್ಡ್ E-KYC ಆಗಿರಬೇಕು

ಇಷ್ಟು ದಿನ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಮತ್ತು ಅನ್ನಭಾಗ್ಯ ಯೋಜನೆ (Annabhagya scheme) ಹಣ ಸರಿಯಾದ ಸಮಯಕ್ಕೆ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿರಲಿಲ್ಲ. ಆದರೆ ಈಗ ಸರ್ಕಾರ ಬಹುತೇಕ ಎಲ್ಲಾ ತಾಂತ್ರಿಕ ದೋಷ (technical issues) ಗಳನ್ನು ಪರಿಹರಿಸಿಕೊಂಡಿದ್ದು, ಫಲಾನುಭವಿಗಳ ಖಾತೆಗೆ ಬಹಳ ಬೇಗ ಹಣ ಜಮಾ ಆಗುತ್ತಿದೆ.

ಫೆಬ್ರುವರಿ ತಿಂಗಳಿನ ಹಣ ಅಂದರೆ 7ನೇ ಕಂತಿನ ಹಣ ಮಾರ್ಚ್ ಮೂರನೇ ವಾರದಿಂದ DBT ಮಾಡಲಾಗಿತ್ತು. ಇದೀಗ ಮಾರ್ಚ್ ಕೊನೆಯ ವಾರದಲ್ಲಿ 8ನೇ ಕಂತಿನ ಹಣವು ಕೂಡ ಬಿಡುಗಡೆ ಆಗಿದೆ.

ಗೃಹಲಕ್ಷ್ಮಿ 8ನೇ ಕಂತಿನ ಬಿಗ್ ಅಪ್ಡೇಟ್; ಈ ಮಹಿಳೆಯರಿಗೆ ಹಣ ಜಮಾ ಆಗೋದು ಡೌಟ್

ನಿಮ್ಮ ಖಾತೆಗೆ ಹಣ ಬೇಕು ಅಂದ್ರೆ ಈ ಕೆಲಸ ಮಾಡಿ!

ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿದ್ರೆ ಅನ್ನಭಾಗ್ಯ ಯೋಜನೆಯ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಬಹುದು.

ಇನ್ನು ಎಪಿಎಲ್ ಕಾರ್ಡ್ ಇರುವವರು ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸಾಕಷ್ಟು ಜನರ ಖಾತೆಗೆ (Bank Account) ಇನ್ನೂ ಹಣ ಬಂದಿಲ್ಲ ಎನ್ನುವ ಸಮಸ್ಯೆ ಇದೆ. ಇದಕ್ಕೆ ನೀವು ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳಬೇಕು. ಅದರಲ್ಲೂ ನಿಮ್ಮ ರೇಷನ್ ಕಾರ್ಡ್ ಗೆ ಇದೊಂದು ಲಿಂಕ್ ಆಗದೆ ಇದ್ರೆ ಮುಂದಿನ ತಿಂಗಳಿನಿಂದ ಯಾವ ಹಣವು ನಿಮ್ಮ ಖಾತೆಗೆ ಬರುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ರೇಷನ್ ಕಾರ್ಡ್ ಈಕೆ ವೈ ಸಿ! (Ekyc to ration card)

ರೇಷನ್ ಕಾರ್ಡ್ ಬಹಳ ಮಹತ್ವದ ದಾಖಲೆ ಆಗಿದೆ. ಯಾವುದೇ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಮುಖ್ಯವಾಗಿ ಬೇಕೇ ಬೇಕು.

ರೇಷನ್ ಕಾರ್ಡ್ ಹೊಂದಿದ್ರೆ ಸಾಲೋದಿಲ್ಲ ಅದಕ್ಕೆ ಈ ಕೆ ವೈ ಸಿ ಕೂಡ ಆಗಿರಬೇಕು ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಸಾಕಷ್ಟು ಜನ ರೇಷನ್ ಕಾರ್ಡ್ ಈಕೆ ವೈ ಸಿ ಮಾಡಿಸಿಕೊಂಡಿದ್ದಾರೆ. ಒಂದು ವೇಳೆ ನಿಮ್ಮ ಖಾತೆಗೆ ಈಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬುದನ್ನ ನೀವು ಚೆಕ್ ಮಾಡಿಕೊಳ್ಳಲು ಬಯಸಿದರೆ ಆನ್ಲೈನ್ ನಲ್ಲಿಯೇ ಮಾಡಬಹುದು.

ಅಪ್ಲೈ ಮಾಡಿದ ಎಲ್ಲರಿಗೂ ಸಿಗಲ್ಲ ರೇಷನ್ ಕಾರ್ಡ್, ಇಂತವರಿಗೆ ಮಾತ್ರ ಹೊಸ ಕಾರ್ಡ್

BPL Ration Cardಹೌದು, ನಿಮ್ಮ ರೇಷನ್ ಕಾರ್ಡ್ ಗೆ ಈಕೆ ವೈ ಸಿ ಆಗಿದ್ಯೋ ಇಲ್ಲವೋ ಎನ್ನುವುದನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಸರ್ಕಾರ ಅವಕಾಶ ನೀಡಿದೆ ಇದಕ್ಕಾಗಿ ನೀವು ಆಹಾರ ಇಲಾಖೆಯ ಅಧಿಕೃತ https://ahara.kar.nic.in/lpg/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಬೇರೆ ಬೇರೆ ಜಿಲ್ಲೆಗಳು ಹಾಗೂ ಆ ಜಿಲ್ಲೆಗಳ ಮೇಲೆ ಲಿಂಕ್ ಗಳನ್ನು ಕೊಡಲಾಗಿದೆ. ನೀವು ಯಾವ ಜಿಲ್ಲೆಯವರು ಎನ್ನುವುದನ್ನು ನೋಡಿ ಅದರ ಮೇಲ್ಭಾಗದಲ್ಲಿ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಈಗ ಪಡಿತರ ಸಂಖ್ಯೆಯನ್ನು ಹಾಕಿ ವಿತ್ ಓಟಿಪಿ /ವಿತ್ ಔಟ್ ಓಟಿಪಿ ಎರಡು ಆಯ್ಕೆಗಳು ಕಾಣಿಸುತ್ತವೆ. ವಿತ್ ಓಟಿಪಿ ಎಂದು ಆಯ್ಕೆ ಮಾಡಿ. ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಕಳುಹಿಸಲಾಗುತ್ತದೆ ಅದನ್ನು ನಮೂದಿಸಿ. ಈ ರೀತಿ ಮಾಡುವುದರಿಂದ ನೀವು ನಿಮ್ಮ ರೇಷನ್ ಕಾರ್ಡ್ ಗೆ ಈಕೆ ವೈ ಸಿ ಆಗಿದೆಯೋ ಇಲ್ಲವೋ ಅಂತ ಚೆಕ್ ಮಾಡಬಹುದು.

ಅನ್ನಭಾಗ್ಯ ಯೋಜನೆ ಅಪ್ಡೇಟ್; ಪೆಂಡಿಂಗ್ ಇರೋ ಹಣ ಯಾವಾಗ ಜಮಾ! ಇಲ್ಲಿದೆ ಮಾಹಿತಿ

ನೆನಪಿಡಿ, ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಅಥವಾ ಈಕೆ ವೈ ಸಿ ಆಗುವುದು ಕಡ್ಡಾಯವಾಗಿದೆ. ಇಂದು ಡಿಜಿಟಲ್ ಮೂಲಕ ಹಣಕಾಸಿನ ವ್ಯವಹಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀವು ನಿಮ್ಮ ಎಲ್ಲಾ ಮಾಹಿತಿಯನ್ನು ಸರ್ಕಾರದ ಡೇಟಾಬೇಸ್ ನಲ್ಲಿ ಉಳಿಸಿಕೊಳ್ಳುವುದು ಮುಖ್ಯ, ಹೀಗಾಗಿ ರೇಷನ್ ಕಾರ್ಡ್ ಗೆ ಈಕೆ ವೈ ಸಿ ಆದ್ರೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಸರ್ಕಾರದ ವೆಬ್ಸೈಟ್ ಗೆ ಹಾಕುತ್ತಿದ್ದಂತೆ ಎಲ್ಲಾ ವಿವರಗಳನ್ನು ನೀವು ಸುಲಭವಾಗಿ ಆನ್ಲೈನ್ ನಲ್ಲಿಯೇ ತಿಳಿದುಕೊಳ್ಳಬಹುದು.

ನಿಮ್ಮ ರೇಷನ್ ಕಾರ್ಡಿಗೆ ಈಕೆ ವೈ ಸಿ ಮಾಡಿಸಲು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಈ ಕೆ ವೈ ಸಿ ಮಾಡಿಸಿಕೊಳ್ಳಬಹುದು. ಇದಕ್ಕೆ ಫಲಾನುಭವಿಗಳ ಬಯೋಮೆಟ್ರಿಕ್ (biometric) ದಾಖಲೆಯನ್ನು ತೆಗೆದುಕೊಳ್ಳಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆ ಅಪ್ಡೇಟ್; 8ನೇ ಕಂತಿನ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ

Check Your Ration Card E-KYC Done or not

Related Stories