ಇಂತಹವರಿಗೆ ಸಿಗದೇ ಇರಬಹುದು ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆ ಹೊಸ ಅಪ್ಡೇಟ್

Story Highlights

ಉಚಿತ ವಿದ್ಯುತ್ತನ್ನು (Free Electricity) ನೀಡುವ ಯೋಜನೆ ಇದಾಗಿದ್ದು ಸಾಕಷ್ಟು ಕುಟುಂಬಗಳು ಇಂದು ರಾಜ್ಯದಲ್ಲಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ (Gruha Jyothi scheme)ಯೋಜನೆ ಕೂಡ ಒಂದಾಗಿದ್ದು ಸಾಕಷ್ಟು ಬಡ ಕುಟುಂಬಗಳ ಮನೆಯನ್ನು ಉಚಿತವಾಗಿ ಬೆಳಕು ನೀಡುವುದರ ಮೂಲಕ ಸಾರ್ವಜನಿಕರಿಗೆ ಸಹಾಯಕವಾಗಿದೆ ಎನ್ನಬಹುದು.

200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ತನ್ನು (Free Electricity) ನೀಡುವ ಯೋಜನೆ ಇದಾಗಿದ್ದು ಸಾಕಷ್ಟು ಕುಟುಂಬಗಳು ಇಂದು ರಾಜ್ಯದಲ್ಲಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಸಿಹಿ ಸುದ್ದಿ! ಇಂತಹ ರೈತರಿಗೆ ಸರ್ಕಾರದಿಂದ ಭೂಮಿ ಹಂಚಿಕೆ, ಸಿಗಲಿದೆ ಹಕ್ಕು ಪತ್ರ

ಹೌದು, ಗೃಹಜ್ಯೋತಿ ಯೋಜನೆ ಇಂದು ಲಕ್ಷಾಂತರ ಕುಟುಂಬಗಳನ್ನ ಬೆಳಗಿದೆ ಎಂದು ಹೇಳಬಹುದು. ಗ್ರಾಮೀಣ ಪ್ರದೇಶ ಇರಬಹುದು ಅಥವಾ ನಗರ ಪ್ರದೇಶ ಇರಬಹುದು ಮನೆಯ ಮಾಲೀಕರೇ ಆಗಿರಬಹುದು ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುವವರಾಗಿರಬಹುದು ಯಾರು ಬೇಕಾದರೂ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯ ಲಾಭ ಪಡೆದುಕೊಳ್ಳುವುದಕ್ಕೆ ಇರುವ ಪ್ರಮುಖ ಮಾನದಂಡ ಅಂದ್ರೆ 200 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಶೂನ್ಯ ವಿದ್ಯುತ್ ಬಿಲ್ ಪಡೆದುಕೊಳ್ಳಲು ಸಾಧ್ಯ.

ಫ್ರೀ ಕರೆಂಟ್ ಇನ್ ಮುಂದೆ ಸಿಗದೇ ಇರಬಹುದು!

ಬೇಸಿಗೆಯ ತಾಪಮಾನ (temperature) ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ತಾಪಮಾನ ಸಿಕ್ಕಾಪಟ್ಟೆ ಜಾಸ್ತಿ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಎಲೆಕ್ಟ್ರಾನಿಕ್ ಡಿವೈಸ್ ಗಳಾದ ಎಸಿ ಫ್ಯಾನ್, ಕೂಲರ್ ಮೊದಲಾದವುಗಳ ಬಳಕೆ ಜಾಸ್ತಿಯಾಗಿದೆ.

ಬೆಸ್ಕಾಂ ನೀಡಿರುವ ಮಾಹಿತಿಯ ಪ್ರಕಾರ ಈ ತಿಂಗಳಿನಲ್ಲಿ ಅಂದರೆ ಮಾರ್ಚ್ ತಿಂಗಳಲ್ಲಿ ಶೇಕಡ 20 % ನಷ್ಟು ವಿದ್ಯುತ್ ಹೆಚ್ಚಾಗಿ ಬಳಕೆ ಮಾಡಲಾಗಿದೆ. ಇದೇ ರೀತಿ ಮುಂದುವರೆದರೆ ವಿದ್ಯುತ್ ಅಭಾವ ಇನ್ನಷ್ಟು ಕಾಡಬಹುದು ಜೊತೆಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಕೂಡ ಸ್ಥಗಿತಗೊಳಿಸಬಹುದು. ಇದಕ್ಕಾಗಿ ವಿದ್ಯುತ್ ಹಿತಮಿತವಾಗಿ ಬಳಕೆ ಮಾಡುವುದು ಬಹಳ ಮುಖ್ಯ.

ನಿಮ್ಮ ರೇಷನ್ ಕಾರ್ಡ್ E-KYC ಆಗಿದೆಯಾ ಇಲ್ವಾ? ಈ ರೀತಿ ಸುಲಭವಾಗಿ ಚೆಕ್ ಮಾಡಿಕೊಳ್ಳಿ

Electricity billಹೆಚ್ಚುವರಿ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್ ಬೆಲೆ ರೂ.7!

200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ತನ್ನು ಪಡೆದುಕೊಳ್ಳಬಹುದು ಅದರಲ್ಲಿ 150 ಯೂನಿಟ್ ಗಳನ್ನು ಬಳಕೆ ಮಾಡಿದರೆ ನಿಮಗೆ ಸಂಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಿದೆ ಎಲ್ಲವೂ ಉಚಿತವಾಗಿ ಸಿಗುತ್ತದೆ. ಆದರೆ ಈಗ ಸರ್ಕಾರ ತಿಳಿಸಿರುವ ಪ್ರಕಾರ ಹೆಚ್ಚುವರಿ 50 ಯೂನಿಟ್ ಬಳಕೆ ಮಾಡಿದರೆ ಪ್ರತಿ ಯೂನಿಟ್ ಗೆ ಏಳು ರೂಪಾಯಿಗಳಂತೆ ಪಾವತಿ ಮಾಡಬೇಕು. ಹಾಗೂ ನಿಮ್ಮ ಆವರೇಜ್ ಯೂನಿಟ್ ಸಂಖ್ಯೆಗಿಂತ ಹೆಚ್ಚಿನ ಯೂನಿಟ್ ಬಳಕೆ ಮಾಡಿದರೆ ಸಂಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂದು ತಿಳಿಸಲಾಗಿದೆ.

ಗೃಹಲಕ್ಷ್ಮಿ 8ನೇ ಕಂತಿನ ಬಿಗ್ ಅಪ್ಡೇಟ್; ಈ ಮಹಿಳೆಯರಿಗೆ ಹಣ ಜಮಾ ಆಗೋದು ಡೌಟ್

ಹಾಗಾಗಿ ನಿಮಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯ ಪ್ರಯೋಜನ ಮುಂದುವರಿಬೇಕು ಅಂತಂದ್ರೆ ನೀವು ವಿದ್ಯುತ್ತನ್ನು ಬಹಳ ಮುತುವರ್ತಿಯಿಂದ ಬಳಕೆ ಮಾಡಿ ಅನಗತ್ಯ ಸಮಯದಲ್ಲಿ ಸ್ವಿಚ್ ಆಫ್ ಮಾಡುವುದರ ಮೂಲಕ ವಿದ್ಯುತ್ ಉಳಿತಾಯ ಮಾಡಬಹುದು.

ಅದರಲ್ಲೂ ಮಳೆಯ ಅಭಾವದಿಂದಾಗಿ ವಿದ್ಯುತ್ ಸರಬರಾಜು 4 ಈ ವರ್ಷ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಗೃಹಜ್ಯೋತಿ ಯೋಜನೆಯ ಪ್ರಯೋಜನ ನಿಮಗೆ ಸಿಗದೇ ಇರಬಹುದು. ಅದರಿಂದ ಮುಂಬರುವ ದಿನಗಳಲ್ಲಿ ಉಚಿತ ವಿದ್ಯುತ್ ಪಡೆದುಕೊಳ್ಳಲು ವಿದ್ಯುತ್ ಬಳಕೆಯ ಮೇಲೆ ನಿಯಂತ್ರಣ ಇರಲಿ.

ಅಪ್ಲೈ ಮಾಡಿದ ಎಲ್ಲರಿಗೂ ಸಿಗಲ್ಲ ರೇಷನ್ ಕಾರ್ಡ್, ಇಂತವರಿಗೆ ಮಾತ್ರ ಹೊಸ ಕಾರ್ಡ್

Such people may not get free electricity, Gruha Jyothi Scheme Update

Related Stories