ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ವರ್ಗಾವಣೆ ಆಗಲ್ಲ! ಬಿಗ್ ಅಪ್ಡೇಟ್

Story Highlights

ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಮೂಲಕ ಫಲಾನುಭವಿಗಳ ಖಾತೆಗೆ (Bank Account) ಹಣವನ್ನು DBT ಮಾಡಲಾಗುತ್ತಿದೆ.

ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಮೂಲಕ ಫಲಾನುಭವಿಗಳ ಖಾತೆಗೆ (Bank Account) ಹಣವನ್ನು DBT ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಜನರಿಗೆ ನೀಡುತ್ತಾ ಬಂದಿದೆ.

ಇದೀಗ ಅನ್ನಭಾಗ್ಯ ಯೋಜನೆಯ ವಿಚಾರದಲ್ಲಿ ಬಿಗ್ ಅಪ್ಡೇಟ್ ಸಿಕ್ಕಿದ್ದು ಅದರ ಬಗ್ಗೆ ಇಲ್ಲಿದೆ ಮಾಹಿತಿ.

ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ಕಡ್ಡಾಯ ರೂಲ್ಸ್ ಜಾರಿ! ಬಿಗ್ ಅಪ್ಡೇಟ್

ನಿಮ್ಮ ಖಾತೆಗೆ ಹಣ ಬಾರದೆ ಇರಲು ಈ ಕಾರಣಗಳು ಇರಬಹುದು

ಬ್ಯಾಂಕ್ ಖಾತೆಗೆ ಆಧಾರ್ ದೃಢೀಕರಣ ಬಹಳ ಮುಖ್ಯ. ಒಂದು ವೇಳೆ ಆಧಾರ್ ಸೀಡಿಂಗ್, ಈಕೆ ವೈಸಿ ಅಪ್ಡೇಟ್ ಆಗದೇ ಇದ್ದರೆ ಅಂತಹ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುವುದಿಲ್ಲ. ಹಾಗಾಗಿ ನೀವು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಗೆ ಸಂಬಂಧಪಟ್ಟ ಎಲ್ಲಾ ಅಪ್ಡೇಟ್ ಗಳನ್ನ ಮಾಡಿಸಿಕೊಳ್ಳಬೇಕು.

ಇತ್ತೀಚಿಗೆ ಫಲಾನುಭವಿ ಮಹಿಳೆ ಒಬ್ಬರು ನೀಡಿರುವ ತಮ್ಮ ಸ್ವಂತ ಅನುಭವದ ಮಾಹಿತಿಯ ಪ್ರಕಾರ “ಅರ್ಜಿ ಸಲ್ಲಿಸಿದ್ದು ಸರಿಯಾಗಿಯೇ ಇದ್ದರೂ ಕೂಡ ನನ್ನ ಖಾತೆಗೆ ಸರಕಾರದ ಯೋಜನೆಯ ಹಣ ಜಮಾ ಆಗಿರಲಿಲ್ಲ. ಇದಕ್ಕಾಗಿ ನಾನು ಬ್ಯಾಂಕ್ ಆಫ್ ಬರೋಡದಲ್ಲಿ ಹೊಸ ಖಾತೆಯನ್ನು ತೆರೆದೆ. ನಂತರ ನನ್ನ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಆರಂಭವಾಯಿತು”. ಎಂದು ಆ ಮಹಿಳೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಹಾಗಾಗಿ ನೀವು ಕೂಡ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಎಸ್ಬಿಐ ಕೆನರಾ ಮೊದಲಾದ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆದು ಆಧಾರ್ ದೃಢೀಕರಣ ಮಾಡಿಸಿಕೊಂಡರೆ ತಪ್ಪದೇ ನಿಮ್ಮ ಖಾತೆಗೂ ಹಣ ವರ್ಗಾವಣೆ (Money Transfer) ಆಗುತ್ತದೆ.

ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್!

Annabhagya Schemeಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಿ!

ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ಮೊಬೈಲ್ ಗೆ ಎಸ್ಎಂಎಸ್ ಬಾರದೆ ಇದ್ದಲ್ಲಿ, ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.

* ಮೊದಲು ನಾವು ಇಲ್ಲಿ ಕೊಟ್ಟಿರುವ https://ahara.kar.nic.in/lpg/ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ಈಗ ನಿಮಗೆ ಮೂರು ಲಿಂಕ್ಗಳು ಕಾಣಿಸುತ್ತವೆ ಆ ಲಿಂಕ್ ಗಳ ಕೆಳಗಡೆ ಇರುವ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಅದರ ಮೇಲ್ಭಾಗದಲ್ಲಿರುವ ಲಿಂಕ್ ಕ್ಲಿಕ್ ಮಾಡಿ.

* ಈಗ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ, ಕ್ಯಾಪ್ಚರ್ ಕೋಡ್, ಯಾವ ತಿಂಗಳ DBT ತಿಳಿದುಕೊಳ್ಳಬೇಕು ಎನ್ನುವುದನ್ನು ಆಯ್ಕೆ ಮಾಡಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಸ್ಕ್ರೀನ್ ಮೇಲೆ ಸಂಪೂರ್ಣ ವಿವರಗಳು ಕಾಣಿಸುತ್ತವೆ.

* ಯಾವ ಬ್ಯಾಂಕ್ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಷ್ಟು ಸದಸ್ಯರಿದ್ದಾರೆ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇಂತಹವರಿಗೆ ಸಿಗದೇ ಇರಬಹುದು ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆ ಹೊಸ ಅಪ್ಡೇಟ್

ಅಕ್ಕಿ ಹಣದ ಬದಲು ಧಾನ್ಯ ವಿತರಣೆ!

ರಾಜ್ಯ ಸರ್ಕಾರಕ್ಕೆ ಅಕ್ಕಿ ಹೊಂದಿಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಆದರೆ ನಮಗೆ ಹಣ ಬೇಡ ಅಕ್ಕಿಯನ್ನು ಕೊಡಿ ಎಂದು ಸಾಕಷ್ಟು ಫಲಾನುಭವಿಗಳು ಹೇಳುತ್ತಿದ್ದು, ಅಕ್ಕಿ ಹೊಂದಿಸಲು ಸಾಧ್ಯವಾಗದೇ ಇದ್ದರೆ ಕನಿಷ್ಠ ಪಕ್ಷ ಇತರ ಪೋಷಕಾಂಶ ಹೊಂದಿರುವ ಧಾನ್ಯಗಳನ್ನು ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಹಾಗಾಗಿ ಮುಂದಿನ ದಿನಗಳಲ್ಲಿ ಹಣವನ್ನೇ ಸರ್ಕಾರ ನೀಡುತ್ತದೆಯೋ ಅಥವಾ ಧಾನ್ಯಗಳನ್ನು ನೀಡುವ ವ್ಯವಸ್ಥೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು.

ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್!

Annabhagya Yojana money cannot be transferred to such people